ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲುಗಿನ 'ಪವರ್ ಸ್ಟಾರ್' 'ಜನಸೇನಾ'ದ ಪವನ್ ಆಸ್ತಿ ವಿವರ

|
Google Oneindia Kannada News

ತೆಲುಗು ಚಿತ್ರರಂಗದ ಪವರ್ ಸ್ಟಾರ್, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶ ವಿಧಾನಸಭೆಗಾಗಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.

ಏಪ್ರಿಲ್ 11ರ ವಿಧಾನಸಭೆ ಚುನಾವಣೆಯಲ್ಲಿ ಗಜುವಾಕಾ ಹಾಗೂ ಭೀಮಾವರಂ ಕ್ಷೇತ್ರದಿಂದ ಪವನ್ ಅವರು ಸ್ಪರ್ಧಿಸುತ್ತಿದ್ದಾರೆ. ಗಜುವಾಕಾ ವಿಶಾಖಪಟ್ಟಣಂ ಜಿಲ್ಲೆಯಲ್ಲಿದ್ದರೆ, ಭೀಮಾವರಂ ಪಶ್ಚಿಮ ಗೋದಾವರಿಯ ಐತಿಹಾಸಿಕ ಕ್ಷೇತ್ರವಾಗಿದೆ. ಒಟ್ಟಾರೆ, ಜನಸೇನಾ 140 ವಿಧಾನಸಭಾ ಕ್ಷೇತ್ರ ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಆಂಧ್ರಪ್ರದೇಶ ವಿಧಾನಸಭೆ : 2 ಕ್ಷೇತ್ರದಿಂದ ಸ್ಪರ್ಧೆಗಿಳಿದ ಪವನ್ ಕಲ್ಯಾಣ್ ಆಂಧ್ರಪ್ರದೇಶ ವಿಧಾನಸಭೆ : 2 ಕ್ಷೇತ್ರದಿಂದ ಸ್ಪರ್ಧೆಗಿಳಿದ ಪವನ್ ಕಲ್ಯಾಣ್

ಆಂಧ್ರಪ್ರದೇಶದಲ್ಲಿ ಏಪ್ರಿಲ್ 11ರಂದು 175 ಸದಸ್ಯರ ವಿಧಾನಸಭೆ ಹಾಗೂ 25 ಸದಸ್ಯರ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ತೆಲಂಗಾಣದಲ್ಲಿ 17 ಸ್ಥಾನಕ್ಕಾಗಿ ಮತದಾನವಾಗಲಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮರ್ಸಿಡೆಸ್ ಬೆಂಜ್ ಆರ್ ಕ್ಲಾಸ್ ಆರ್ 350, ವೊಲ್ವೋ ಎಕ್ಸ್ ಸಿ 90, ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಫ್ ಟೈಲ್ ವಾಹನಗಳನ್ನು ಹೊಂದಿರುವ ಪವನ್ ಕಲ್ಯಾಣ್ ಅವರು ಒಟ್ಟು 52 ಕೋಟಿ ರು ಆಸ್ತಿ ಘೋಷಿಸಿದ್ದು, 34 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಸ್ವವಿವರ

ಸ್ವವಿವರ

ಹೆಸರು: ಪವನ್ ಕಲ್ಯಾಣ ಕೊನಿಡಾಲ
ತಂದೆ: ವೆಂಕಟರಾವ್ ಕೊನಿಡಾಲ
ವಯಸ್ಸು : 50
ವಿಳಾಸ : ಕೃಷ್ಣ ಜಿಲ್ಲೆಯ ವಿಜಯವಾಡದ ಗುರು ನಾನಕ್ ನಗರ ನಿವಾಸಿ
ಜನಸೇನಾ ಪಕ್ಷದ ಅಭ್ಯರ್ಥಿ
ವಿಜಯವಾದ ಪೂರ್ವ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ
ಇಮೇಲ್ ಐಡಿ, ಟ್ವಿಟ್ಟರ್, ಫೇಸ್ ಬುಕ್ ಖಾತೆ ಹೊಂದಿದ್ದಾರೆ.
* ಪತ್ನಿ ಅನ್ನಾ ಲೆಳ್ನೆವಾ, ಕೆ ಅಕಿರಾ, ಆದ್ಯಾ, ಪೊಲಿನಾ, ಮಾರ್ಕ್ ಶಂಕರ್ ಡಿಪೆಂಡೆಂಡ್ಸ್.
* ನೆಲ್ಲೂರು ಸೈಂಟ್ ಜೋಸೆಫ್ಸ್ ಶಾಲೆಯಿಂದ 1984ರಲ್ಲಿ ಎಸ್ಎಸ್ಎಲ್ಸಿಯಲ್ಲಿ ತೇರ್ಗಡೆಯಾಗಿದ್ದಾರೆ.
ಯಾವುದೇ ಕ್ರಿಮಿನಲ್ ಕೇಸ್ ಹೊಂದಿಲ್ಲ

ಆದಾಯ ತೆರಿಗೆ ಪಾವತಿ

ಆದಾಯ ತೆರಿಗೆ ಪಾವತಿ

2013 ರಿಂದ 2017-18 ಆರ್ಥಿಕ ವರ್ಷದ ತನಕ ಆದಾಯ ತೆರಿಗೆ ಪಾವತಿಸಿದ್ದಾರೆ.
2013-14ರಲ್ಲಿ 7,32,44,340 ರು
2014-15ರಲ್ಲಿ 5,37,34,065 ರು
2016-17ರಲ್ಲಿ 15.28 ಕೋಟಿ ರು
2017-18ರಲ್ಲಿ 9.60 ಕೋಟಿ ರು ಆದಾಯ ತೋರಿಸಿದ್ದು, ತೆರಿಗೆ ಪಾವತಿಸಿದ್ದಾರೆ. 34.42 ಲಕ್ಷ ರು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಜನಸೇನಾ: ಮಾಜಿ ಐಎಎಸ್ ಅಧಿಕಾರಿ ಸೇರಿದಂತೆ 32 ಅಭ್ಯರ್ಥಿಗಳು ಕಣಕ್ಕೆ ಜನಸೇನಾ: ಮಾಜಿ ಐಎಎಸ್ ಅಧಿಕಾರಿ ಸೇರಿದಂತೆ 32 ಅಭ್ಯರ್ಥಿಗಳು ಕಣಕ್ಕೆ

ಸಾಲ ಸೋಲ : 33.72 ಕೋಟಿ ರು

ಸಾಲ ಸೋಲ : 33.72 ಕೋಟಿ ರು

ಎಚ್ ಡಿ ಎಫ್ ಸಿ ಬ್ಯಾಂಕ್ ಸಾಲ : 9,82,72,58 ರು
ಇಂಡಸ್ ಇಂಡ್ ಬ್ಯಾಂಕ್ : 68,63,304 ರು ವಾಹನ ಸಾಲ
ಎಚ್ ಡಿ ಎಫ್ ಸಿ ಬ್ಯಾಂಕ್ : 2,10,13,353 ರು

ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ : 2.4 ಕೋಟಿ ರು
ಹಾರಿಕ ಕ್ರಿಯೇಷನ್ಸ್ : 1,25,00,000ರು
ಕೆ ಸುರೇಖಾ : 1,07,73,734 ರು
ಪ್ರವೀಣ್ ಕುಮಾರ್ : 3,00,00,000ರು
ಎಂವಿ ಆರ್ ಎಸ್ ಪ್ರಸಾದ್: 2,00,00,000
ಶ್ರೀ ಬಾಲಾಜಿ ಸಿನಿ ಮೀಡಿಯಾ : 2,00,00,000 ರು
ಶ್ರೀ ವೆಂಕಟೇಶ್ವರ ಸಿನಿ ಚಿತ್ರ : 27,55,554ರು
ನವೀನ್ ಕುಮಾರ್ : 5,50,00,000ರು

ಸ್ಥಿರಾಸ್ತಿ : 12.04 ಕೋಟಿ ರು, ಚರಾಸ್ಥಿ : 40.81 ಕೋಟಿ ರು

ಸ್ಥಿರಾಸ್ತಿ : 12.04 ಕೋಟಿ ರು, ಚರಾಸ್ಥಿ : 40.81 ಕೋಟಿ ರು

ಪತ್ನಿ ಲೆಳ್ನೆವಾ ಚರಾಸ್ಥಿ 30.5 ಲಕ್ಷ ರು
ಮಕ್ಕಳಾದ ಅಕಿರ, ಆದ್ಯಾ 1.51 ಕೋಟಿ ರು ಹಾಗೂ 1.04 ಕೋಟಿ ರು
ಕಲ್ಯಾಣ್ ಬಳಿ 312 ಗ್ರಾಮ್ ಚಿನ್ನ, ವಜ್ರ ಹಾಗೂ ಪ್ಲಾಟಿನಂ ಇದೆ.
ಮರ್ಸಿಡೆಸ್ ಬೆಂಜ್ ಆರ್ ಕ್ಲಾಸ್ ಆರ್ 350, ವೊಲ್ವೋ ಎಕ್ಸ್ ಸಿ 90, ಹಾರ್ಲೆ ಡೇವಿಡ್ಸನ್ ಹೆರಿಟೇಜ್ ಸಫ್ ಟೈಲ್ ವಾಹನಗಳಿವೆ.
ಮಹೀಂದ್ರಾ ಸ್ಕಾರ್ಪಿಯೋ, ಸ್ಕೋಡಾ ರಾಪಿಡ್, ಟೋಯೊಟಾ ಫಾರ್ಚ್ಯುನರ್ ಕೂಡ ಇದೆ.
ಗುಂಟೂರು ಜಿಲ್ಲೆಯಲ್ಲಿ ವಿವಿಧೆಡೆ ಹಾಗೂ ಶಂಕರಪಲ್ಲಿ ಮಂಡಲದಲ್ಲಿ ಕೃಷಿ ಭೂಮಿ, ಬಂಜಾರ ಹಿಲ್ಸ್ ನಲ್ಲಿ ಮನೆ ಹೊಂದಿದ್ದಾರೆ.

ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ

English summary
Andhrapradesh Assembly elections 2019: Jana Sena Party candidate Actor Konidala Pawan Kalyan Assets and Liabilities. Pawan Kalyan owns assets worth Rs 52 Crore. Kalyan has movable assets worth Rs 12.04 crore and immovable assets of Rs 40.81 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X