• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತರ್ವೇದಿಯಲ್ಲಿ ಅಗ್ನಿಗೆ ರಥ ಆಹುತಿ, ಗಲಭೆಗೆ ಕಿಡಿಯಾಯ್ತೆ?

|

ಅಮರಾವತಿ, ಸೆ. 10: ಅಂತರ್ವೇದಿಯಲ್ಲಿನ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲಕ್ಕೆ ಸೇರಿದ್ದ ಹಳೆ ರಥವೊಂಡು ಸೆಪ್ಟೆಂಬರ್ 6ರಂದು ಮುಂಜಾನೆ ಬೆಂಕಿಗೆ ಆಹುತಿಯಾಗಿದೆ. ಆದರೆ, ಈ ಘಟನೆಯು ಸಣ್ಣ ಕೋಮುಗಲಭೆಗೆ ಕಿಡಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.

ಮರದಿಂದ ನಿರ್ಮಿಸಲಾಗಿದ್ದ ರಥಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ್ದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದವರ ಪೈಕಿ ಚಂದ್ರಬಾಬು ನಾಯ್ಡು ಅವರೇ ಮೊದಲಲ್ಲ. ಬಿಜೆಪಿ, ಪವನ್ ಕಲ್ಯಾಣ್ ಜನಸೇನಾ, ವಿಶ್ವಹಿಂದೂ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಈ ಬಗ್ಗೆ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಒತ್ತಡ ಹೇರಿವೆ.

ಲಕ್ಷ್ಮೀ ನರಸಿಂಹ ದೇವಾಲಯದ ರಥ ಬೆಂಕಿಗೆ ಅಹುತಿ

ದೇಗುಲದ ಕಾರ್ಯಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿರುವ ಸರ್ಕಾರ, ತಕ್ಷಣದ ಪರಿಹಾರ ರೂಪವಾಗಿ 85 ಲಕ್ಷ ರು ನೀಡಿದ್ದು, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ನಡೆಯುವ ರಥೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಮುಂದೆ ನಿಲ್ಲಿಸುವ ತನಕ ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕು ಎಂದು ಮುಜರಾಯಿ ಖಾತೆ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ಮನವಿ ಮಾಡಿಕೊಂಡಿದ್ದಾರೆ.

ಕೋಮು ಗಲಭೆ ಕಿಡಿ?

ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಕೆಲ ದುಷ್ಕರ್ಮಿಗಳು ಅಂತರ್ವೇದಿಯಲ್ಲಿರುವ ಚರ್ಚ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ವಿಡಿಯೋ ಮಾಡಿ ಹಂಚಿದ್ದಾರೆ. ಆದರೆ, ಪರಿಸ್ಥಿತಿ ಕೈ ಮೀರುವುದರೊಳಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ದಾಳಿಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಮಾರು 43 ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದ್ದು, ಚರ್ಚ್ ಗಾಜುಗಳು ಪುಡಿಯಾಗಿದ್ದು ಕಾಂಪೌಂಡ್ ಕುಸಿದಿದೆ. ವಿಡಿಯೋ ಹಂಚುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದ್ದು, ಐವರು ಮಹಿಳೆಯರು ಮೂವರು ಅಪ್ರಾಪ್ತರು ದೊಂಬಿಯಲ್ಲಿ ಇದ್ದರು. ಮಹಿಳೆಯರಿಗೆ ಸ್ಟೇಷನ್ ಬೇಲ್ ನೀಡಲಾಗಿದ್ದು, ಅಪ್ರಾಪ್ತರನ್ನು ಅವರ ಪೋಷಕರ ವಶಕ್ಕೆ ನೀಡಲಾಗಿದೆ. 36 ಮಂದಿ ಸೆಪ್ಟೆಂಬರ್ 22 ರ ತನಕ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚರ್ಚ್ ದಾಳಿ ಖಂಡಿಸಿದ ಸ್ಥಳೀಯರು

ಚರ್ಚ್ ದಾಳಿ ಖಂಡಿಸಿರುವ ಸ್ಥಳೀಯ ಯುವಕರು, ನರಸಿಂಹಸ್ವಾಮಿ ದೇಗುಲ ರಥ ಆಹುತಿಯಾದ ಘಟನೆಗೂ ಚರ್ಚ್ ದಾಳಿಗೂ ಸಂಬಂಧವಿಲ್ಲ. ಎರಡಕ್ಕೂ ಸಂಬಂಧ ಕಲ್ಪಿಸಿ ಕೋಮು ಗಲಭೆ ಕಿಡಿ ಹಚ್ಚಲು ಪರವೂರಿನವರು ಮಾಡಿರುವ ಕೃತ್ಯ ಎಂದು ದೇಗುಲದ ವತಿಯಿಂದ ಸ್ಪಷ್ಟನೆ ನೀಡಿದ್ದಾರೆ.

English summary
Antarvedi temple chariot fire case: The Andhra Pradesh police has expedited the probe into the fire accident at Sri Lakshmi Narasimha Swamy temple in Antarvedi and gutted an old chariot in the early hours of September 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X