ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಆಪ್ತ ಹಾಸ್ಯ ನಟ ಹಾಲಿಗೆ ಕೈ ತಪ್ಪಿದ ರಾಜ್ಯಸಭೆ ಸದಸ್ಯ ಟಿಕೆಟ್

|
Google Oneindia Kannada News

ಅಮರಾವತಿ, ಮೇ. 19: ಆಂಧ್ರಪ್ರದೇಶದಿಂದ ರಾಜ್ಯಸಭಾ ಸದಸ್ಯನಾಗಿ ನೇಮಕವಾಗುವ ಹಾಸ್ಯ ನಟ ಆಲಿ ಅವರ ಕನಸು ನುಚ್ಚು ನೂರಾಗಿದೆ. ಕೊನೆ ಕ್ಷಣದಲ್ಲಿ ಆಲಿಗೆ ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ನಿಲ್ಲುವ ಅವಕಾಶ ತಪ್ಪಿದೆ.

ಅಂಧ್ರಪ್ರದೇಶದ ಆಡಳಿತ ರೂಢ ವೈಸಿಪಿ ಪಕ್ಷದ ವತಿಯಿಂದ ರಾಜ್ಯಸಭೆಗೆ ಅಯ್ಕೆಯಾಗಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಎಂಪಿ ವಿಜಯಸಾಯಿ ರೆಡ್ಡಿ ಅವರಿಗೆ ಅವಕಾಶ ನೀಡಲಾಗಿದೆ. ಜತೆಗೆ ನೆಲ್ಲೂರು ಜಿಲ್ಲೆಯ ಬಿದ ಮಸ್ತಾನ್ ರಾವ್, ತೆಲಂಗಾಣಕ್ಕೆ ಸೇರಿದ ನಿರಂಜನ್ ರೆಡ್ಡಿ, ಅರ್. ಕೃಷ್ಣಯ್ಯ ಅವರ ಹೆಸರುಗಳನ್ನು ವೈಸಿಪಿ ಪ್ರಕಟಿಸಿದೆ. ಆದರೆ, ಟಾಲಿವುಡ್ ಹಾಸ್ಯ ನಟ ಆಲಿ ಅವಕಾಶ ವಂಚಿತನಾಗಿದ್ದು, ಅವರಲ್ಲಿ ನಿರಾಶೆ ಮೂಡಿದೆ.

ಉದ್ಯಮಿ, ಪತ್ರಿಕೋದ್ಯಮಿಗಳಿಗೆ ರಾಜ್ಯಸಭೆ ಟಿಕೆಟ್ ಘೋಷಣೆಉದ್ಯಮಿ, ಪತ್ರಿಕೋದ್ಯಮಿಗಳಿಗೆ ರಾಜ್ಯಸಭೆ ಟಿಕೆಟ್ ಘೋಷಣೆ

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ತನ್ನ ಹೆಸರನ್ನು ಪರಿಗಣಿಸದೇ ಇರುವ ಬಗ್ಗೆ ಹಾಸ್ಯ ನಟ ಆಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟನಾಗಿ ನನಗೆ ಎಸ್‌. ವಿ. ಕೃಷ್ಣಾರೆಡ್ಡಿ ಅವರು ಜೀವನ ಕೊಟ್ಟಿದ್ದಾರೆ. ರಾಜಕೀಯವಾಗಿ ನನಗೆ ಜಗನ್ ನನಗೆ ಹೊಸ ಜೀವನ ಕಟ್ಟಿಕೊಟ್ಟಿದ್ದಾರೆ.

ಆಲಿ ಪ್ರತಿಕ್ರಿಯೆ

ಆಲಿ ಪ್ರತಿಕ್ರಿಯೆ

ರಾಜ್ಯ ಸಭೆಗೆ ಆಯ್ಕೆಯಾಗಲು ನಾನು ಆಸೆ ಪಟ್ಟವನು ಅಲ್ಲ. ಯಾರಿಗೆ ಯಾವ ಸಮಯಕ್ಕೆ ಏನು ಕೊಡಬೇಕು ಎಂಬುದು ಜಗನ್‌ಗೆ ಚೆನ್ನಾಗಿ ಗೊತ್ತು. ಜಗನ್ ಮನಸಲ್ಲಿ ನಾನು ಇದ್ದೀನಿ. ಭವಿಷ್ಯದಲ್ಲಿ ಯಾವುದೇ ಸ್ಥಾನ ಕೊಟ್ಟರೂ ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನನಗೆ ರಾಜಕೀಯ ಪದವಿ ಕೊಡುವ ಬಗ್ಗೆ ಜಗನ್ ಈವರೆಗೂ ಯಾವುದೇ ಮಾತು ಕೊಟ್ಟಿಲ್ಲ ಎಂದು ಜಗನ್ ತೀರ್ಮಾನವನ್ನು ಆಲಿ ಸಮರ್ಥನೆ ಮಾಡಿಕೊಂಡಿದ್ದಾರೆ.

ರಾಜ್ಯಸಭಾ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಹೊರಗಡೆ ಕಿತ್ತಾಟ, ಒಳಗಡೆ ಜೊತೆಯಾಟ?ರಾಜ್ಯಸಭಾ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಹೊರಗಡೆ ಕಿತ್ತಾಟ, ಒಳಗಡೆ ಜೊತೆಯಾಟ?

ಯಾವ ಪದವಿಗೆ ಆಸೆ ಪಟ್ಟಿಲ್ಲ

ಯಾವ ಪದವಿಗೆ ಆಸೆ ಪಟ್ಟಿಲ್ಲ

ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಆಲಿ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಆಲಿಗೆ ಯಾವುದಾದರೂ ಸರ್ಕಾರ ನಾಮಿನೇಟ್ ಮಾಡುವ ಪದವಿಯನ್ನು ಆಲಿಗೆ ಜಗನ್ ಕೊಡುತ್ತಾರೆ ಎಂದೇ ಹೇಳಲಾಗಿತ್ತು. ಈ ವರ್ಷದ ಆರಂಭದಲ್ಲಿಯೇ ನಟ ಆಲಿ ಮುಖ್ಯಮಂತ್ರಿ ಜಗನ್ ಅವರನ್ನು ಭೇಟಿ ಮಾಡಿದ್ದರು. ಆಲಿ ಈ ಭೇಟಿ ಬಳಿಕ ಒಳ್ಳೆಯ ಪದವಿ ಅಲಂಕರಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಜಗನ್ ಭೇಟಿ ಬಳಿಕ ಅತಿ ಶೀಘ್ರದಲ್ಲಿಯೇ ಒಳ್ಳೆಯ ಗುಡ್ ನ್ಯೂಸ್ ಹೇಳ್ತೀನಿ ಅಂತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನಾನು ಯಾವ ಪದವಿಗೆ ಆಸೆ ಪಟ್ಟು ಪಕ್ಷಕ್ಕೆ ಬಂದಿಲ್ಲ ಎಂಬ ಮಾತನ್ನು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸ್ಥಾನ?

ವಿಧಾನ ಪರಿಷತ್ ಸದಸ್ಯ ಸ್ಥಾನ?

ನನಗೆ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯಿಂದ ಒಳ್ಳೆಯ ಪದವಿ ಸಿಗಲಿದೆ ಎಂಬ ಆಶಾಭಾವನೆ ನನ್ನಲ್ಲಿದೆ. ಆ ಬಳಿಕ ಆಲಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅ ಬಳಿಕ ವಿಧಾನ ಪರಿಷತ್ ಸದಸ್ಯ ಇಲ್ಲವೇ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಕೊಡಬಹುದು ಎಂಬ ಮತು ಹರಿದಾಡಿದ್ದವು.

ಯಾವ ಪದವಿ ಸಿಕ್ಕಿಲ್ಲ

ಯಾವ ಪದವಿ ಸಿಕ್ಕಿಲ್ಲ

ಈಗಾಗಲೇ ವಿಧಾನ ಪರಿಷತ್ ಸದಸ್ಯ ಸ್ಥಾನಗಳನ್ನು ತುಂಬಲಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವನ್ನು ಖಾದರ್ ಭಾಷಾ ಅವರಿಗೆ ನೀಡಲಾಗಿದೆ. ಆ ಬಳಿಕ ಆಲಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವುದು ಖಾಯಂ ಎಂದೇ ಬಿಂಬಿಸಲಾಗಿತ್ತು. ಕೊನೆ ಕ್ಷಣದಲ್ಲಿ ಆಲಿಗೆ ಅದೂ ಕೈ ತಪ್ಪಿದೆ. ವಿಪರ್ಯಾಸವೆಂದರೆ ಆಲಿಗೆ ಈ ಬಾರಿಯೂ ಯಾವ ಪದವಿ ಸಿಕ್ಕಿಲ್ಲ. ಕೇಳಿದ್ರೆ, ನಾನು ಯಾವ ಪದವಿಗೂ ಆಸೆ ಪಟ್ಟಿಲ್ಲ ಎಂದು ಆಲಿ ಸ್ಪಷ್ಟಪಡಿಸಿ ಮೌನಕ್ಕೆ ಶರಣಾಗಿದ್ದಾರೆ.

English summary
Andra pradesh politics: Tollywood actor Ali Recation on missing Rajya sabha seat, what jagan promissed to him know more :
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X