ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಕ್ಷೇತ್ರದಲ್ಲಿ ಆಂಧ್ರ ಸಿಎಂ ಜಗನ್ ಕ್ರಾಂತಿಕಾರಕ ಹೆಜ್ಜೆ

|
Google Oneindia Kannada News

ತಿರುಪತಿ, ಮೇ. 05: ಜನ ಸಾಮಾನ್ಯರ ಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಹೆಸರಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈ ಭಾರೀ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡುತ್ತಿದ್ದಾರೆ. ತಿರುಪತಿಯನ್ನು ಆರೋಗ್ಯದ ರಾಜಧಾನಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕ್ರಾಂತಿಕಾರ ಹೆಜ್ಜೆ ಇಟ್ಟಿದ್ದಾರೆ.

ಆಂಧ್ರದ ಬಡ ಜನರಿಗೆ ಮೂರು ಮಹತ್ವದ ಆರೋಗ್ಯ ವಿಮೆ ಪರಿಚಯಿಸಿ ಸಕಲ ಚಿಕಿತ್ಸೆಗಳಿಗೆ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಕೊಟ್ಟಿರುವ ಜಗನ್ ಗುರುವಾರ ತಿರುಪತಿಯಲ್ಲಿ ರಾಜ್ಯದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ ನೀಡಿದರು.

ಜಗನ್ ವಿದ್ಯಾ ದೀವೆನ ಯೋಜನೆಯಿಂದ 10.82 ಲಕ್ಷ ವಿದ್ಯಾರ್ಥಿಗಳಿಗೆ ನೆರವು ಜಗನ್ ವಿದ್ಯಾ ದೀವೆನ ಯೋಜನೆಯಿಂದ 10.82 ಲಕ್ಷ ವಿದ್ಯಾರ್ಥಿಗಳಿಗೆ ನೆರವು

ಮಾತ್ರವಲ್ಲ ಮಕ್ಕಳ ಬಹುದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಪೂಜೆ ನೆರವೇರಿಸಿದ್ದಾರೆ. ಈ ಮಕ್ಕಳ ಆಸ್ಪತ್ರೆ 6 ಎಕರೆಯಲ್ಲಿ ತಲೆಯೆತ್ತಲಿದ್ದು, ದೇಶದ ಅತಿದೊಡ್ಡ ಮಕ್ಕಳ ಆಸ್ಪತ್ರೆ ಎಂಬ ದಾಖಲೆ ಬರೆಯಲಿದೆ.

ಆಂಧ್ರ ಸಿಎಂ ಜಗನ್ ಕನಸಿನ ಯೋಜನೆಗೆ ಯುಎನ್‌ಒ ಪ್ರಶಸ್ತಿಆಂಧ್ರ ಸಿಎಂ ಜಗನ್ ಕನಸಿನ ಯೋಜನೆಗೆ ಯುಎನ್‌ಒ ಪ್ರಶಸ್ತಿ

ಈ ಮೂಲಕ ರಾಜ್ಯದ ಕ್ಯಾನ್ಸರ್ ರೋಗಿಗಳಿಗೆ ಒಂದೇ ಸೂರಿನಡಿ ವಿಶ್ವ ದರ್ಜೆಯ ಚಿಕಿತ್ಸೆ ಲಭಿಸುವಂತೆ ಮಾಡಿದ್ದಾರೆ. ಮಾತ್ರವಲ್ಲ ಮಕ್ಕಳ ಆರೋಗ್ಯ ಕಾಪಾಡಲು ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದಾರೆ. ಅನಾರೋಗ್ಯ ಪೀಡಿತ ಮಕ್ಕಳಿಗೆ ವಿಶ್ವ ದರ್ಜೆ ಚಿಕಿತ್ಸೆ ಉಚಿತವಾಗಿ ಲಭ್ಯವಾಗಲಿದೆ ಎಂಬುದು ಈ ಆಸ್ಪತ್ರೆಯ ವಿಶೇಷತೆ.

 6 ಎಕರೆಯಲ್ಲಿ ಮಕ್ಕಳ ಆಸ್ಪತ್ರೆ

6 ಎಕರೆಯಲ್ಲಿ ಮಕ್ಕಳ ಆಸ್ಪತ್ರೆ

ಶ್ರೀ ಪದ್ಮಾವತಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 6 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. 4.11 ಲಕ್ಷ ಚದರ ಅಡಿ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದ್ದು, ಇದು ಸಹ ರಾಜ್ಯದ ಅತಿದೊಡ್ಡ ಮಕ್ಕಳ ಆಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಲಿದೆ. 7 ಅಂತಸ್ತಿನ ಈ ಆಸ್ಪತ್ರೆಯಲ್ಲಿ 350 ಹಾಸಿಗೆ ಇರಲಿವೆ. 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

 ಆಸ್ಪತ್ರೆಯಲ್ಲಿ 15 ವಿಭಾಗಗಳು

ಆಸ್ಪತ್ರೆಯಲ್ಲಿ 15 ವಿಭಾಗಗಳು

ಮಕ್ಕಳ ಆಸ್ಪತ್ರೆಯಲ್ಲಿ 15ಚಿಕಿತ್ಸಾ ವಿಭಾಗಗಳು ಇರಲಿವೆ. ಹೆಮೋಟಮೋ ಆಂಕಾಲಜಿ, ಮೆಡಿಕಲ್ ಆಂಕಾಲಜಿ, ಸರ್ಜಿಕಲ್ ಆಂಕಾಲಜಿ, ನ್ಯೂರಾಲಜಿ, ಕಾರ್ಡಿಯಾಲಜಿ, ಗ್ಯಾಸ್ಟ್ರೋ ಎಂಟ್ರೋಲಜಿ, ಬೋನ್ ಮ್ಯಾರೋ, ಹೃದಯ ಮತ್ತು ಇತರೆ ಭಾಗಗಳ ಕಸಿ ಚಿಕಿತ್ಸೆ ವಿಭಾಗ ಇರಲಿದೆ. ಇಲ್ಲಿ ಮಕ್ಕಳಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ. ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿದೆ.

 ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ

ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ

ತಿರುಪತಿಯಲ್ಲಿ ನಿರ್ಮಾಣವಾಗಿರುವ ರಾಜ್ಯದ ಅತಿದೊಡ್ಡ ಕ್ಯಾನ್ಸರ್ ಮತ್ತು ಅಡ್ವಾನ್ಸ್ ಕೇರ್ ಆಸ್ಪತ್ರೆ ಉದ್ಘಾಟಿಸಿದರು. 1.65 ಲಕ್ಷ ಚದರಡಿ ಜಾಗದಲ್ಲಿ ಈ ಆಸ್ಪತ್ರೆಯನ್ನು 180 ಕೋಟಿ ರೂ. ವೆಚ್ಚದಲ್ಲಿ ಟಾಟಾ ಟ್ರಸ್ಟ್ ನಿರ್ಮಾಣ ಮಾಡಿದೆ. ಇದು ಆಂಧ್ರ ಪ್ರದೇಶದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು, ಉದ್ಯಮಿ ರತನ್ ಟಾಟಾ ಒಡೆತನದ ಟಾಟಾ ಟ್ರಸ್ಟ್ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದೆ. ಇಲ್ಲಿಯೂ ಸಹ ಅತಿ ಕಡಿಮೆ ದರದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ.

 ತಿರುಪತಿ ಆರೋಗ್ಯ ಸಿಟಿ

ತಿರುಪತಿ ಆರೋಗ್ಯ ಸಿಟಿ

ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಟಾಟಾ ಟ್ರಸ್ಟ್ , ಮಕ್ಕಳ ಆಸ್ಪತ್ರೆಯನ್ನು ಟಿಟಿಡಿ ಟ್ರಸ್ಟ್ ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕೊಡುಗೆ ಏನು ಎಂಬ ಪ್ರಶ್ನೆ ಕಾಡಬಹುದು. ಎರಡು ಟ್ರಸ್ಟ್ ಗಳ ಜತೆ ಮಾತುಕತೆ ನಡೆಸಿ ಜನುಪಯೋಗಿ ಕೆಲಸಕ್ಕೆ ಒಪ್ಪಿಸಿ ಅವರಿಗೆ ಬೇಕಾದ ಭೂಮಿ ಸೇರಿದಂತೆ ಸೌಲಭ್ಯಗಳನ್ನು ಜಗನ್ ಸರ್ಕಾರ ಒದಗಿಸಿದೆ. ತಿರುಪತಿ ಕೇವಲ ಭಕ್ತರ ಸಿಟಿಯಾಗಿ ಮಾತ್ರವಲ್ಲ ಭವಿಷ್ಯದಲ್ಲಿ ಆರೋಗ್ಯ ಸಿಟಿಯಾಗಿ ರೂಪಗೊಳ್ಳಲಿದೆ.

English summary
Tirupati will became Health Hub very soon; Andra Chief Minister Jagan Mohan read lay the Foundation stone for Biggest child care Hospital know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X