ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿದ ಪತ್ನಿ

|
Google Oneindia Kannada News

ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿಸಿ ಅಲ್ಲಿ ಗಂಡನ ಮೂರ್ತಿಯನ್ನೇ ಇಟ್ಟು ಪೂಜೆ ಮಾಡುತ್ತಿದ್ದಾರೆ ಪದ್ಮಾವತಿ. ಹೌದು, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು , ಗೌರವಾನ್ವಿತ ವ್ಯಕ್ತಿಗಳಿಗಾಗಿ ಗುಡಿಕಟ್ಟಿಸುವ ಟ್ರೆಂಡ್ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ದಿವಂಗತ ಪತಿ ಕನಸಲ್ಲಿ ಬಂದಿದ್ದು, ದೇವಾಲಯ ನಿರ್ಮಾಣ ಮಾಡಲು ಕೇಳಿಕೊಂಡಿದ್ದರಂತೆ. ಹೀಗಾಗಿ ಮಹಿಳೆ ತನ್ನ ಪತಿಗಾಗಿ ಗುಡಿ ಕಟ್ಟಿಸಿರುವುದಾಗಿ ಹೇಳಿಕೊಂಡಿದ್ದಾರೆ.ಈ ಅಪರೂಪದ ಪ್ರಸಂಗ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಅಷ್ಟೇ ಅಲ್ಲ ದೇವಾಲಯದಲ್ಲಿ ಹಸಿದವರಿಗೆ ಬಡವರಿಗೆ ಅನ್ನದಾನ ಮಾಡುವುದಾಗಿಯೂ ಮಹಿಳೆ ಹೇಳಿಕೊಂಡಿದ್ದಾರೆ..

ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿ ದೇಗುಲ ನಿರ್ಮಾಣ ಮಾಡಿ ಅದ್ರಲ್ಲಿ ಪತಿಯ ವಿಗಗ್ರಹ ಸ್ಥಾಪಿಸಿ ಆ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿರುವ ಪತ್ನಿ ಪದ್ಮಾವತಿ ತನ್ನ ತಾಯಿಯಂತೆಯೇ ಪತಿಯನ್ನ ಪರದೈವ ಅಂದುಕೊಂಡಿದ್ದಾರೆ.. ಅವರ ತಾಯಿ ಅವರ ತಂದೆಯನ್ನ ಪೂಜೆ ಮಾಡುತ್ತಿದ್ದನ್ನ ನೋಡಿ ಪ್ರೇರೇಪಿತರಾಗಿದ್ದಾರೆ.. 4 ವರ್ಷದ ಹಿಂದೆ ಈ ಮಹಿಳೆಯ ಪತಿ ದುರಾದೃಷ್ಟವಸಾತ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

Andhra Woman Builds Temple in Late Husband’s Name, Worships His Statue To Keep Love Alive

ತಮಿಳುನಾಡಿನಲ್ಲಿ ಮೋದಿಗಾಗಿ ರೈತರೊಬ್ಬರು ದೇವಾಲಯ ಕಟ್ಟಿದ್ದನ್ನ ಇಲ್ಲಿ ನಾವು ಸ್ಮರಿಸಬಹುದು. ಆದರೆ ಇಲ್ಲೊಬ್ಬ ಪತ್ನಿ ತನ್ನ ದಿವಂಗತ ಪತಿಗಾಗಿ ಗುಡಿ ಕಟ್ಟಿಸಿ ಗಮನ ಸೆಳೆದಿದ್ದಾರೆ.

ಪತಿ ಅಂಕಿ ರೆಡ್ಡಿ ಜನ್ಮ ದಿನ ಸೇರಿದಂತೆ ವಿಶೇಷ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಭಿಶೇಷಕಗಳನ್ನ ನಡೆಸಲಾಗುತ್ತದೆ ಎಂದು ಸಹ ಪದ್ಮಾವತಿ ಅವರು ಹೇಳಿಕೊಂಡಿದ್ದಾರೆ. ಪ್ರತಿ ಹುಣ್ಣಿಮೆಗೂ ವಿಶೇಷ ಪೂಜೆ ನೆರವೇರಿಸುವ ಜೊತೆಗೆ ದೇಗುಲದಲ್ಲಿ ಹಸಿದು ಬಂದವರಿಗೆ ಬಡವರಿಗಾಗಿ ಅನ್ನಸಂತರ್ಪಣೆ ಮಾಡುವುದಾಗಿಯೂ ತಿಳಿಸಿದ್ದಾರೆ.

ಅಮೃತಶಿಲೆಯಲ್ಲಿ ಪತಿಯ ಪ್ರತಿಮೆ ಸ್ಥಾಪಿಸಿ ಅದಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.ಅಲ್ಲದೇ ತನ್ನ ಪತಿ ಜೀವಂತವಾಗಿದ್ದಾಗಲೂ ಅವರನ್ನ ದೇವರಂತೆ ಕಾಣುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಪೂಜೆ ಸೇರಿದಂತೆ ಇತರೇ ಸೇವೆಗಳನ್ನು ಆಕೆಯ ಪುತ್ರ ಶಿವಶಂಕರ್ ರೆಡ್ಡಿ ಸಲ್ಲಿಸುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಇವರ ಕೆಲಸಕ್ಕೆ ಅಂಕಿ ರೆಡ್ಡಿ ಅವರ ಸ್ನೇಹಿತ ತಿರುಪಾಟಿ ರೆಡ್ಡಿ ಅವರು ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ರೀತಿಯಾದ ಘಟನೆ ತೆಲಂಗಾಣದಲ್ಲಿಯೂ ಬೆಳಕಿಗೆ ಬಂದಿತ್ತು.. ತಾತನಿಗಾಗಿ ಮೊಮ್ಮಗ ಮಂದಿರ ಕಟ್ಟಿ ತಾತನ ವಿಗ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ನಾವಲಗ ಗ್ರಾಮದಲ್ಲಿ ಮೋಗುಲಪ್ಪ ಎಂಬಾತ ಮಕ್ಕಳಿಲ್ಲದ ಕಾರಣಕ್ಕೆ ಮಗುವೊಂದನ್ನ ದತ್ತು ಪಡೆದು ಸಾಕಿದ್ದರು.. 2013ರಲ್ಲಿ ಅವರು ಮೃತಪಟ್ಟಿದ್ದರು..ಆನಂತರ ಅವರ ದತ್ತು ಮೊಮ್ಮಗ ಈಶ್ವರ್ ತಾತನಿಗಾಗಿ ಗುಡಿ ಕಟ್ಟಿಸಿದರು. ಗುಡಿ ನಿರ್ಮಾಣಕ್ಕೆ ಸುಮಾರು 24 ಲಕ್ಷ ಖರ್ಚಾಗಿದ್ದಾಗಿಯೂ ಹೇಳಿಕೊಂಡಿದ್ದರು.

ಅಂಕಿ ಅವರು ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಪದ್ಮಾವತಿ ಮತ್ತು ಆಕೆಯ ಮಕ್ಕಳು ದುಃಖದ ಸ್ಥಿತಿಯಲ್ಲಿದ್ದರು. ಅವರ ಗಂಡನ ಸಾವು ಆಕೆಗೆ ಜೀವಮಾನದ ನಷ್ಟ. ಅವರನ್ನು ಬಲು ಸಂಕಷ್ಟಕ್ಕೆ ಸಿಲುಕಿಸಿತು ಮತ್ತು ಎಲ್ಲಾ ಕಷ್ಟಗಳನ್ನು ಅನುಭವಿಸಿದರು.

ಆದರೆ ಸ್ವಲ್ಪ ಸಮಯದ ನಂತರ, ಪದ್ಮಾವತಿ ಪತಿಯ ಪ್ರತಿಮೆಯನ್ನು ಸಣ್ಣ ದೇವಸ್ಥಾನದಲ್ಲಿ ನಿರ್ಮಿಸಲು ನಿರ್ಧರಿಸಿದರು. ಅವರು ಪ್ರತಿದಿನ ಅಲ್ಲಿ ಪೂಜೆ ಮಾಡುತ್ತಿದ್ದರು ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.

ಪದ್ಮಾವತಿ ತನ್ನ ಗಂಡನ ಸ್ನೇಹಿತ ತಿರುಪತಿ ರೆಡ್ಡಿ ಮತ್ತು ಅವನ ಮಗ ಶಿವಶಂಕರ ರೆಡ್ಡಿಯವರ ಸಹಾಯವನ್ನು ಪಡೆದಿದ್ದು, ಮತ್ತು ಈಗ ಅಗತ್ಯವಿರುವವರಿಗೆ ಉಚಿತ ಆಹಾರವನ್ನು ನೀಡುವಲ್ಲಿಯೂ ತೊಡಗಿಸಿಕೊಂಡಿದ್ದಾಳೆ.

ಪ್ರತಿ ಶನಿವಾರ ಮತ್ತು ಭಾನುವಾರ ಮತ್ತು ಪೌರ್ಣಮಿ ದಿನಗಳಲ್ಲಿ, ಪದ್ಮಾವತಿಯು ವಿಶೇಷ ಪ್ರಾರ್ಥನೆಯನ್ನು ಮಾಡುತ್ತಾರೆ ಮತ್ತು ಪತಿಯ ಹೆಸರಿನಲ್ಲಿ ಆಹಾರವನ್ನು ವಿತರಿಸುತ್ತಾರೆ.

English summary
A woman living in Podili Mandal in Andhra Pradesh has found a unique way to express her devotion and love for her late husband. She has built a temple dedicated to him and performs puja in front of his statue every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X