ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ತನ್ನೊಂದಿಗೇ ದಹಿಸಿದ ಮಹಿಳೆ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 13: ತನ್ನೊಂದಿಗಿನ ಸಂಬಂಧವನ್ನು ತಿರಸ್ಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಬೆಂಕಿ ಹಚ್ಚಿದ್ದು, ಸುಡುವ ಅಗ್ನಿ ಜ್ವಾಲೆಗಳೊಂದಿಗೆ ಆಕೆ ಆತನನ್ನೂ ತನ್ನೊಂದಿಗೆ ದಹಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟೆಯ ಪಾರ್ಸೆಲ್ ಕೇಂದ್ರವೊಂದರಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ತನ್ನೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯಿಂದ ದೂರಾಗಲು ಮಹಿಳೆ ನಿರ್ಧರಿಸಿದ್ದರು. ತನ್ನ ಜತೆಗಿನ ಸಂಬಂಧ ಮುಂದುವರಿಸುವಂತೆ ಆತ ಬೇಡಿಕೆ ಇರಿಸಿದ್ದ. ಅದನ್ನು ಆಕೆ ನಿರಾಕರಿಸಿದ್ದರಿಂದ ಕೋಪಗೊಂಡು ಬೆಂಕಿ ಹಚ್ಚಿದ್ದ.

ಭುವನೇಶ್ವರ: ರಾಜಭವನದ ಬಳಿ ಪೆಟ್ರೋಲ್ ಬಂಕ್‌ನಲ್ಲಿ ಬೆಂಕಿ, 8 ಮಂದಿಗೆ ಗಾಯಭುವನೇಶ್ವರ: ರಾಜಭವನದ ಬಳಿ ಪೆಟ್ರೋಲ್ ಬಂಕ್‌ನಲ್ಲಿ ಬೆಂಕಿ, 8 ಮಂದಿಗೆ ಗಾಯ

ತನ್ನ ನಿವೇದನೆಯನ್ನು ಮಹಿಳೆ ನಿರಾಕರಿಸಿದಾಗ ಸಿಟ್ಟಿಗೆದ್ದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಬೆಂಕಿ ಆಕೆಯ ಸಂಪೂರ್ಣ ಮೈ ಆವರಿಸಿಕೊಂಡು ಮಹಿಳೆಯನ್ನು ಸುಟ್ಟುಹಾಕಿದೆ. ತೀವ್ರ ಸುಟ್ಟ ಗಾಯಗಳಿಂದಾಗಿ ಆಕೆ ಸ್ಥಳದಲ್ಲಿಯೇ ಸಜೀವ ದಹವನಾಗಿದ್ದಾರೆ. ಮಹಿಳೆಯು ವೃತ್ತಿಯಿಂದ ನರ್ಸ್ ಆಗಿದ್ದು, ವಿಜಯವಾಡದ ಕೊರೊನಾ ವೈರಸ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ಓದಿ.

ತನ್ನೊಂದಿಗೇ ಸುಟ್ಟ ಮಹಿಳೆ

ತನ್ನೊಂದಿಗೇ ಸುಟ್ಟ ಮಹಿಳೆ

ವ್ಯಕ್ತಿಯು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾಗ ಮಹಿಳೆ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದ ಬೆಂಕಿ ಆತನಿಗೂ ಆವರಿಸಿದೆ. ಮಹಿಳೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಆತನಿಂದ ಸಾಧ್ಯವಾಗಿಲ್ಲ. ಹೀಗಾಗಿ ಆ ವ್ಯಕ್ತಿ ಕೂಡ ಅಗ್ನಿ ಜ್ವಾಲೆಯಿಂದ ಸುಟ್ಟುಹೋಗಿದ್ದಾನೆ. ಆರೋಪಿ ವ್ಯಕ್ತಿಯ ದೇಹ ಶೇ 80ರಷ್ಟು ಸುಟ್ಟುಹೋಗಿತ್ತು. ಸುಟ್ಟ ಗಾಯಗಳಿಂದ ಆತ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕಿರುಕುಳ ನೀಡುತ್ತಿದ್ದ

ಕಿರುಕುಳ ನೀಡುತ್ತಿದ್ದ

ಇವರಿಬ್ಬರೂ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮಹಿಳೆಯು ಆತನೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದರು. ಇದನ್ನು ಒಪ್ಪಿಕೊಳ್ಳಲು ಆ ವ್ಯಕ್ತಿ ಸಿದ್ಧನಿರಲಿಲ್ಲ. ಆಕೆಯನ್ನು ನಿರಂತರವಾಗಿ ಹಿಂಬಾಲಿಸುವುದು, ಕಿರುಕುಳ ನೀಡುವುದನ್ನು ಆರಂಭಿಸಿದ್ದ. ತನ್ನನ್ನು ಮದುವೆಯಾಗುವಂತೆ ಸಹ ಆಕೆಯನ್ನು ಪೀಡಿಸುತ್ತಿದ್ದ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೆಂಕಿ ಹಚ್ಚಿದ ಆರೋಪಿಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬೆಂಕಿ ಹಚ್ಚಿದ ಆರೋಪಿ

ಮುಚ್ಚಳಿಕೆ ಬರೆಸಿಕೊಂಡಿದ್ದ ಪೊಲೀಸರು

ಮುಚ್ಚಳಿಕೆ ಬರೆಸಿಕೊಂಡಿದ್ದ ಪೊಲೀಸರು

ಆತನ ಕಾಟ ತಡೆಯಲಾಗದೆ ಮಹಿಳೆ ವಿಜಯವಾಡದ ಪೊಲೀಸ್ ಠಾಣೆಯೊಂದರಲ್ಲಿ ಅಕ್ಟೋಬರ್ 5ರಂದು ದೂರು ನೀಡಿದ್ದರು. ಪೊಲೀಸರು ಆತನನ್ನು ಠಾಣೆಗೆ ಕರೆಯಿಸಿ ಬುದ್ಧಿಮಾತು ಹೇಳಿದ್ದರು. ಇನ್ನು ಮುಂದೆ ಆಕೆಗೆ ಕಿರುಕುಳ ನೀಡುವುದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದರು.

ದೂರು ನೀಡಿದ್ದಕ್ಕಾಗಿ ಬೆದರಿಕೆ

ದೂರು ನೀಡಿದ್ದಕ್ಕಾಗಿ ಬೆದರಿಕೆ

ಆದರೆ, ಮಹಿಳೆ ಸೋಮವಾರ ಕೆಲಸ ಮುಗಿಸಿ ಮರಳುತ್ತಿರುವಾಗ ಕೊಠಡಿಯಲ್ಲಿ ಆಕೆಗೆ ಕಾಯುತ್ತಿದ್ದ ವ್ಯಕ್ತಿ, ಪೊಲೀಸರಿಗೆ ದೂರು ನೀಡಿದ್ದಕ್ಕಾಗಿ ಆಕೆಗೆ ಬೆದರಿಕೆ ಹಾಕತೊಡಗಿದ್ದ. ಆಕೆ ಬಗ್ಗದಿದ್ದಾಗ ತಾನು ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ಆತನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡ ಮಹಿಳೆ ತನ್ನೊಂದಿಗೆ ಆತನನ್ನೂ ದಹಿಸಿದ್ದಾರೆ.

ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ: ಮೂವರು ಪ್ರಾಣಾಪಾಯದಿಂದ ಪಾರುಪೆಟ್ರೋಲ್ ಸುರಿದು ಕಾರಿಗೆ ಬೆಂಕಿ: ಮೂವರು ಪ್ರಾಣಾಪಾಯದಿಂದ ಪಾರು

English summary
A man burned woman alive after she rejected his advances, victim held on to the man while burning results the accused dies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X