ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 3ರಿಂದ ಶಾಲೆ ಆರಂಭಿಸುವುದಾಗಿ ಘೋಷಿಸಿದ ಸಿಎಂ

|
Google Oneindia Kannada News

ಅಮರಾವತಿ, ಮೇ 20: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾಗಿರುವ ಲಾಕ್ಡೌನ್ 4.0 ವಿಸ್ತರಣೆಯಾಗಿದೆ. ಈ ನಡುವೆ ಆಗಸ್ಟ್ 3ರಿಂದ ಶಾಲೆ ಆರಂಭಿಸಲು ನಡೆಸುವಂತೆ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ನಾಡು-ನೇಡು ಕಾರ್ಯಕ್ರಮದ ಅಡಿಯಲ್ಲಿ 15, 000 ಶಾಲೆ ರಿಪೇರಿ ಹಾಗೂ ಪುನರ್ ನಿರ್ಮಾಣ ಕಾರ್ಯದ ಮೊದಲ ಹಂತವನ್ನು ಪೂರೈಸುವಂತೆ ಸಿಎಂ ಜಗನ್ ತಿಳಿಸಿದ್ದಾರೆ. ಮೊದಲ ಹಂತಕ್ಕಾಗಿ 456 ಕೋಟಿ ರು ನೀಡಲಾಗಿದೆ.

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ

ಮಂಗಳವಾರದಂದುತಡೆಪಲ್ಲಿಯಲ್ಲಿ ನಡೆಸಿದ ಸಭೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಕೂಡಾ ಸಿಎಂ ಜಗನ್ ಮಾತುಕತೆ ನಡೆಸಿದರು. ಮಾರ್ಚ್ 23ರಿಂದ ಆಂಧ್ರಪ್ರದೇಶದ ಶಾಲೆ, ಕಾಲೇಜುಗಳು ಬಂದ್ ಆಗಿವೆ.

Andhra Pradesh CM YS Jagan Mohan Reddy announcement on Schools reopen date

ಜುಲೈ ತಿಂಗಳ ಕೊನೆಗೆ 15,715 ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಮುಕ್ತಾಯವಾಗಲಿದೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸುವಂತೆ ಜಗನ್ ನಿರ್ದೇಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶಾಲೆ, ಕಾಲೇಜು ಆರಂಭದ ಬಗ್ಗೆ ಅಧಿಕೃತ ಆದೇಶ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ ಎಂದು ಜಗನ್ ಹೇಳಿದರು.

ಆಂಧ್ರಪ್ರದೇಶದಲ್ಲಿ ಸುಮಾರು 2,474 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 1,552 ಗುಣಮುಖರಾಗಿದ್ದಾರೆ. 50 ಮಂದಿ ಮೃತರಾಗಿದ್ದಾರೆ. ಕರ್ನೂಲ್ ಜಿಲ್ಲೆ ಅತಿ ಹೆಚ್ಚು 158 ಪ್ರಕರಣಗಳು ಕಾಣಿಸಿಕೊಂಡು, ದೇಶದ ಡೇಂಜರ್ ನಗರ/ ಪ್ರದೇಶದ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.

English summary
Andhra Pradesh Chief Minister YS Jagan Mohan Reddy has announced that the schools in the state will reopen on August 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X