ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಒಂದೇ ದಿನ ದಾಖಲೆಯ ಕೊರೊನಾ ಕೇಸ್ ಪತ್ತೆ

|
Google Oneindia Kannada News

ಅಮರಾವತಿ, ಜುಲೈ 23: ಆಂಧ್ರ ಪ್ರದೇಶದಲ್ಲಿ ಇಂದು ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ವೈರಸ್ ಕೇಸ್‌ಗಳು ಪತ್ತೆಯಾಗಿದೆ. ಒಂದೇ ದಿನ 7998 ಜನರಿಗೆ ಕೊವಿಡ್ ತಗುಲಿದೆ ಎಂದು ಆಂಧ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Recommended Video

Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

ಇದುವರೆಗೂ ಆಂಧ್ರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕೊರೊನಾ ಸೋಂಕಿತರು ವರದಿಯಾಗಿರಲಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಇದೇ ಮೊದಲ ಸಲ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಒಂದೇ ದಿನ ಸುಮಾರು 8 ಸಾವಿರ ಕೊವಿಡ್ ಕೇಸ್ ವರದಿಯಾಗಿದೆ.

ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 1 ಲಕ್ಷ ಪರಿಹಾರ

ಈ ಪೈಕಿ ಪೂರ್ವ ಗೋದಾವರಿಯಲ್ಲಿ 1391 ಕೇಸ್, ಗುಂಟೂರಿನಲ್ಲಿ 1184 ಕೇಸ್, ಅನಂತಪುರದಲ್ಲಿ 1016 ಕೇಸ್ ಹಾಗೂ ಕರ್ನೂಲಿನಲ್ಲಿ 904 ಪ್ರಕರಣ ವರದಿಯಾಗಿದೆ. ಈ ನಾಲ್ಕು ಜಿಲ್ಲೆಗಳಿಂದಲೇ 4500 ಕೇಸ್ ವರದಿಯಾಗಿದೆ.

Andhra Pradesh reports 7998 new COVID19 positive cases today

ಇಂದಿನ ವರದಿ ಬಳಿಕ ಆಂಧ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72711ಕ್ಕೆ ಏರಿಕೆಯಾಗಿದೆ. ಅದರಲ್ಲಿ 34272 ಪ್ರಕರಣಗಳು ಸಕ್ರಿಯವಾಗಿದ್ದರೆ, 37555 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 884 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಇಂದು 6472 ಕೇಸ್ ಪತ್ತೆಯಾಗಿದೆ. ಚೆನ್ನೈ ನಗರದಲ್ಲಿ ಮಾತ್ರ 1339 ಕೇಸ್, ತಿರುವಳ್ಳೂರ್ 417 ಕೇಸ್, ಚೆಂಗಲಪಟ್ಟು 393 ಕೇಸ್, ಕಾಂಚಿಪುರಂ 313 ಕೇಸ್, ಮಧುರೈ 279 ಕೇಸ್, ವಿರುಧುನಗರ 480 ಹಾಗೂ ತೂತುಕೂಡಿಯಲ್ಲಿ 415 ಕೇಸ್ ವರದಿಯಾಗಿದೆ.

English summary
Andhra Pradesh reports 7998 new COVID19 positive cases and 61 deaths in the last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X