ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಭಾರಿ ಏರಿಕೆ

|
Google Oneindia Kannada News

ಅಮರಾವತಿ, ಜುಲೈ 21: ಆಂಧ್ರ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ನಾಲ್ಕು ದಿನದಿಂದ ಆಂಧ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಬಹುದೊಡ್ಡ ಜಿಗಿತ ಆಗಿದೆ. ಇಂದು ಒಂದೇ ದಿನದಲ್ಲಿ 4944 ಜನರಿಗೆ ಆಂಧ್ರದಲ್ಲಿ ಕೊವಿಡ್ ದೃಢಪಟ್ಟಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,773ಕ್ಕೆ ಏರಿಕೆಯಾಗಿದೆ. ಅದರಲ್ಲಿ 32,119 ಕೇಸ್‌ಗಳು ಸಕ್ರಿಯವಾಗಿದೆ. ಕಳೆದ 24 ಗಂಟೆಯಲ್ಲಿ 68 ಜನರು ಮೃತಪಟ್ಟಿದ್ದು, ಇದುವರೆಗು ಆಂಧ್ರದಲ್ಲಿ 758 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೋವಿಡ್ ಪರೀಕ್ಷೆಗೆ ಹೊಸ ಪ್ರಯತ್ನ; ಬಸ್‌ನಲ್ಲಿಯೇ ಮಾದರಿ ಸಂಗ್ರಹಕೋವಿಡ್ ಪರೀಕ್ಷೆಗೆ ಹೊಸ ಪ್ರಯತ್ನ; ಬಸ್‌ನಲ್ಲಿಯೇ ಮಾದರಿ ಸಂಗ್ರಹ

ಪ್ರಸ್ತುತ ಅತಿ ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಐದನೇ ಸ್ಥಾನದಲ್ಲಿದೆ. ಆಂಧ್ರಕ್ಕೂ ಮುಂಚೆ ಕರ್ನಾಟಕ, ದೆಹಲಿ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸ್ಥಾನ ಪಡೆದುಕೊಂಡಿದೆ.

Andhra Pradesh Reports 4,944 new COVID19 cases in last 24 hours

ಜಿಲ್ಲೆಗಳಲ್ಲಿ ಪೈಕಿ ಪೂರ್ವ ಗೋದಾವರಿಯಲ್ಲಿ ಒಟ್ಟು 7756 ಕೇಸ್ ದಾಖಲಾಗಿದೆ. ಕರ್ನೂಲ್‌ನಲ್ಲಿ 7119 ಪ್ರಕರಣ, ಗುಂಟೂರಿನಲ್ಲಿ 6071 ಸೋಂಕು, ಅನಂತಪುರಂ ಜಿಲ್ಲೆಯಲ್ಲಿ 5941 ಕೇಸ್, ಪಶ್ಚಿಮ ಗೋವಾವರಿಯಲ್ಲಿ 4314 ಕೇಸ್, ಕೃಷ್ಣ ಜಿಲ್ಲೆಯಲ್ಲಿ 4101 ಕೆಸ್ ದೃಢವಾಗಿದೆ.

ಕಳೆದ ಐದು ದಿನದಲ್ಲಿ ಆಂಧ್ರ ಪ್ರದೇಶದಲ್ಲಿ ವರದಿಯಾದ ಸೋಂಕಿನ ವಿವರ:

ಜುಲೈ 20 ರಂದು 4074 ಕೇಸ್ ಪತ್ತೆಯಾಗಿತ್ತು.

ಜುಲೈ 19 ರಂದು 5041 ಜನರಿಗೆ ಸೋಂಕು ದೃಢವಾಗಿತ್ತು.

ಜುಲೈ 18 ರಂದು 3963 ಮಂದಿಗೆ ಕೊವಿಡ್ ತಗುಲಿತ್ತು.

ಜುಲೈ 17 ರಂದು 2602 ಜನರಿಗೆ ಕೊರೊನಾ ಅಂಟಿಕೊಂಡಿತ್ತು.

ಜುಲೈ 16 ರಂದು 2593 ಜನರಿಗೆ ಕೊವಿಡ್ ಖಚಿತವಾಗಿತ್ತು.

English summary
4,944 new COVID19 cases in Andhra Pradesh, tally 55,773, active cases 32,119; toll rises to 758 with 62 more deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X