ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಟಿಆರ್ ವಿಶ್ವವಿದ್ಯಾಲಯಕ್ಕೆ ವೈಎಸ್ಆರ್ ಹೆಸರಿಟ್ಟ ಜಗನ್ ಮೋಹನ್ ರೆಡ್ಡಿ ಸರ್ಕಾರ

|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 23: ಆಂಧ್ರ ಪ್ರದೇಶದಲ್ಲಿ ತೀವ್ರ ಟೀಕೆ ಮತ್ತು ಪ್ರತಿಭಟನೆಯ ನಡುವೆ ಡಾ. ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (NTRUHS) ಅನ್ನು ಡಾ. YSR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (YSRUHS) ಎಂದು ಮರುನಾಮಕರಣ ಮಾಡುವ 'ಡಾ. ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (ತಿದ್ದುಪಡಿ) ಮಸೂದೆ, 2022 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ರಾಜ್ಯ ವಿಧಾನಸಭೆ ಅಂಗೀಕರಿಸಿದ ಕೂಡಲೇ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಆರೋಗ್ಯ ವಿಶ್ವವಿದ್ಯಾಲಯಕ್ಕೆ ಎನ್ಟಿಆರ್ ಅವರ ಹೆಸರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ವಿಶ್ವವಿದ್ಯಾಲಯಕ್ಕೆ ತನ್ನ ತಂದೆ ಹೆಸರು ಮರುನಾಮಕರಣಕ್ಕೆ ಜಗನ್ ನಿರ್ಧಾರ; ರಾಜಕೀಯ ಕೆಸರೆರಚಾಟವಿಶ್ವವಿದ್ಯಾಲಯಕ್ಕೆ ತನ್ನ ತಂದೆ ಹೆಸರು ಮರುನಾಮಕರಣಕ್ಕೆ ಜಗನ್ ನಿರ್ಧಾರ; ರಾಜಕೀಯ ಕೆಸರೆರಚಾಟ

ಆಂಧ್ರ ಪ್ರದೇಶದಲ್ಲಿ ಈ ಹಿಂದೆ ವೈ.ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಯಾವೊಬ್ಬ ಮುಖ್ಯಮಂತ್ರಿಯೂ ಎನ್‌ಟಿಆರ್‌ಯುಎಚ್‌ಎಸ್ ಅನ್ನು ಮರುನಾಮಕರಣ ಮಾಡಲು ಪ್ರಯತ್ನಿಸಿರಲಿಲ್ಲ. ದೇಶಾದ್ಯಂತ ಪ್ರಶಂಸೆಯನ್ನು ಹೊಂದಿರುವ ಎನ್‌ಟಿಆರ್‌ಯುಎಚ್‌ಎಸ್ ಸ್ಥಾಪನೆಯಾಗಿ 36 ವರ್ಷಗಳ ನಂತರ ಅದರ ಹೆಸರನ್ನು ಮರುನಾಮಕರ ಮಾಡುವುದು ತರ್ಕಬದ್ಧವಾಗಿಲ್ಲ," ಎಂದು ನಾಯ್ಡು ಹೇಳಿದ್ದಾರೆ.

ಎನ್‌ಟಿಆರ್ ವಿವಿ ಮರುನಾಮಕರಣಕ್ಕೆ ನಾಯ್ಡು ಕೆಂಡಾಮಂಡಲ

ಎನ್‌ಟಿಆರ್ ವಿವಿ ಮರುನಾಮಕರಣಕ್ಕೆ ನಾಯ್ಡು ಕೆಂಡಾಮಂಡಲ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ವೈದ್ಯಕೀಯ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಹೊಂದಬೇಕು ಎಂಬ ದೃಷ್ಟಿಯಿಂದ 1986 ರಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. 1998 ರಲ್ಲಿ ತೆಲುಗು ದೇಶಂ ಪಕ್ಷದ ಸರ್ಕಾರವು ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇರಿಸಿತ್ತು. ಈಗಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ನಡೆಯನ್ನು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ. "ವಿಶ್ವವಿದ್ಯಾನಿಲಯವನ್ನು ಎನ್‌ಟಿಆರ್ ಸ್ಥಾಪಿಸಿದ್ದರೇ ಅಥವಾ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರೇ?," ಎಂದು ಟಿಡಿಪಿ ಅಧ್ಯಕ್ಷರು ಪ್ರಶ್ನಿಸಿದರು. "ರಾಜ್ಯ ಸರ್ಕಾರವು ಹೊಸ ಸಂಸ್ಥೆಗಳನ್ನು ಸ್ಥಾಪಿಸಬಹುದು ಮತ್ತು ವೈಎಸ್ಆರ್ ಹೆಸರನ್ನು ಇಡಬಹುದು, ಆದರೆ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ನಾಯ್ಡು ಹೇಳಿದರು.

450 ಕೋಟಿ ರೂಪಾಯಿ ಹಣ ಬೇರೆಡೆ ತಿರುಗಿಸಿತಾ ಜಗನ್ ಸರ್ಕಾರ?

450 ಕೋಟಿ ರೂಪಾಯಿ ಹಣ ಬೇರೆಡೆ ತಿರುಗಿಸಿತಾ ಜಗನ್ ಸರ್ಕಾರ?

"ಸರ್ಕಾರವು ತನ್ನ ಅವಧಿಯಲ್ಲಿ ಒಂದೇ ಒಂದು ಸಂಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ, ಆದರೆ ಅಸ್ತಿತ್ವದಲ್ಲಿರುವ ಸಂಸ್ಥೆಗಳ ಹೆಸರನ್ನು ಬದಲಾಯಿಸಲು ಉತ್ಸುಕವಾಗಿದೆ," ಎಂದು ಚಂದ್ರಬಾಬು ನಾಯ್ಡು ಹೇಳಿದರು. "ಎನ್‌ಟಿಆರ್‌ಯುಎಚ್‌ಎಸ್‌ನ 450 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ತಿರುಗಿಸುವಲ್ಲಿ ಯಶಸ್ವಿಯಾದ ವೈಎಸ್‌ಆರ್‌ಸಿಪಿ ಸರ್ಕಾರಕ್ಕೆ ಸಂಸ್ಥೆಯ ಹೆಸರನ್ನು ಬದಲಾಯಿಸುವ ಹಕ್ಕಿಲ್ಲ," ಎಂದು ಕಿಡಿ ಕಾರಿದರು.

ಸರ್ಕಾರಕ್ಕೆ ಟ್ವೀಟ್ ಏಟು ಕೊಟ್ಟ ಜ್ಯೂ. ಎನ್‌ಟಿಆರ್

ಸರ್ಕಾರಕ್ಕೆ ಟ್ವೀಟ್ ಏಟು ಕೊಟ್ಟ ಜ್ಯೂ. ಎನ್‌ಟಿಆರ್

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮೊಮ್ಮಗನೂ ಆಗಿರುವ ಟಾಲಿವುಡ್ ನಟ ಮತ್ತು ಗಾಯಕ ಜೂನಿಯರ್ ಎನ್‌ಟಿಆರ್ ಅಥವಾ ತಾರಕ್ ಚರ್ಚೆಯಲ್ಲಿ ಪಾಲ್ಗೊಂಡರು. ಎರಡೂ ಮಹಾನ್ ಐಕಾನ್‌ಗಳ ಪರಂಪರೆಯು ಅಖಂಡವಾಗಿರುವವರೆಗೆ ವಿಶ್ವವಿದ್ಯಾಲಯಕ್ಕೆ ಏನು ಹೆಸರಿಸಲಾಯಿತು ಎಂಬುದು ಮುಖ್ಯವಲ್ಲ ಎಂದು ಹೇಳಿದರು. "ಎನ್‌ಟಿಆರ್ ಮತ್ತು ವೈಎಸ್‌ಆರ್ ಇಬ್ಬರೂ ಉತ್ತಮ ಜನಪ್ರಿಯತೆ ಗಳಿಸಿದ ಮಹಾನ್ ನಾಯಕರು. ಒಬ್ಬರ ಹೆಸರನ್ನು ತೆಗೆದುಕೊಂಡು ಒಬ್ಬರ ಹೆಸರನ್ನು ಇರಿಸುವ ಮೂಲಕ ತಂದ ಗೌರವವು ವೈಎಸ್‌ಆರ್ ಎತ್ತರವನ್ನು ಹೆಚ್ಚಿಸುವುದಿಲ್ಲ, ಅದು ಎನ್‌ಟಿಆರ್ ಗೌರವವನ್ನು ಕಡಿಮೆ ಮಾಡುವುದಿಲ್ಲ. ವಿಶ್ವವಿದ್ಯಾನಿಲಯವನ್ನು ಮರುನಾಮಕರಣ ಮಾಡುವ ಮೂಲಕ, "ಎನ್‌ಟಿಆರ್ ಗಳಿಸಿದ ಕೀರ್ತಿ, ತೆಲುಗು ರಾಷ್ಟ್ರದ ಇತಿಹಾಸದಲ್ಲಿ ಅವರ ಸ್ಥಾನಮಾನ ಮತ್ತು ತೆಲುಗು ಜನರ ಹೃದಯದಲ್ಲಿ ಅವರ ಸ್ಮರಣೆಯನ್ನು ಅಳಿಸಲು ಸಾಧ್ಯವಿಲ್ಲ," ಎಂದು ಜೂನಿಯರ್ "ಎನ್‌ಟಿಆರ್ ಟ್ವೀಟ್ ಮಾಡಿದ್ದಾರೆ.

ವಿವಿ ಹೆಸರು ಮರುನಾಮಕರಣಕ್ಕೆ ರಾಜ್ಯಾದ್ಯಂತ ವಿರೋಧ

ವಿವಿ ಹೆಸರು ಮರುನಾಮಕರಣಕ್ಕೆ ರಾಜ್ಯಾದ್ಯಂತ ವಿರೋಧ

ಸರ್ಕಾರದ ಕ್ರಮವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರು ಬುಧವಾರ ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ವಿಜಯವಾಡದಲ್ಲಿರುವ ಎನ್‌ಟಿಆರ್‌ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿರೋಧ ಪಕ್ಷದ ನಾಯಕರು ಧರಣಿ ನಡೆಸಿದರು. ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಟಿಡಿಪಿ ಕಾರ್ಯಕರ್ತರು ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಲು ಯತ್ನಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪ್ರತಿಭಟನಾಕಾರರನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ತಡೆದರು. ನಂತರ ಎನ್‌ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಹೆಸರನ್ನೇ ಸರ್ಕಾರ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ 'ರಸ್ತೆ ತಡೆ' ನಡೆಸಿದರು.
ವಿಜಯವಾಡದ ಗೊಲ್ಲಪುಡಿ ಕೇಂದ್ರದಲ್ಲಿ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ಗುಂಪು ಚದುರಿಸಿದರು. ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಸಂಸ್ಥಾಪಕ ನಂದಮೂರಿ ತಾರಕ ರಾಮರಾವ್ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನಾಕಾರರು ತುಲ್ಲೂರಿನಲ್ಲಿ ಮತ್ತು ಗುಂಟೂರಿನ ಅಂಬೇಡ್ಕರ್ ಕೇಂದ್ರದಲ್ಲಿ ಧರಣಿ ನಡೆಸಿದರು.

English summary
Andhra Pradesh NTR University Being Renamed After YSR; Junior NTR Joins Debate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X