• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಅತಿ ಸಿರಿವಂತ ಮಂತ್ರಿ

By ವಿಕ್ಕಿ ನಂಜಪ್ಪ
|

ಅಮರಾವತಿ, ಜೂನ್ 26: ಆಂಧ್ರಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ ಮೋಹನ್ ರೆಡ್ಡಿ ಅವರ ನೂತನ ಸರ್ಕಾರದ ಸಂಪುಟದಲ್ಲಿರುವ 17 ಸಚಿವರ ವಿರುದ್ಧದ ಕ್ರಿಮಿನಲ್ ಕೇಸ್‌ಗಳು ಇನ್ನೂ ಬಾಕಿ ಉಳಿದಿವೆ.

ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಈ 17 ಮಂದಿ ತಮ್ಮ ವಿರುದ್ಧ ಅಪರಾಧ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದರು. ಆದರೂ ಜಗನ್ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮಾತ್ರವಲ್ಲ ಸ್ವತಃ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೇ 31 ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದರೆ, ಯಾವುದರಲ್ಲಿಯೂ ಅವರು ಶಿಕ್ಷೆಗೆ ಒಳಗಾಗಿಲ್ಲ. ಸಂಚು, ವಂಚನೆ, ಅಪ್ರಾಮಾಣಿಕತೆ, ಲಂಚ, ಫೋರ್ಜರಿ ಸೇರಿದಂತೆ 11 ಅಪರಾಧ ಪ್ರಕರಣಗಳು ಸಿಬಿಐನಲ್ಲಿ ಬಾಕಿ ಉಳಿದಿವೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ಏಳು ಪ್ರಕರಣಗಳು ಜಾರಿ ನಿರ್ದೇಶನಾಲಯದಲ್ಲಿ ಬಾಕಿ ಇವೆ. ಇನ್ನು ಉಳಿದ 13 ಪ್ರಕರಣಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಐಪಿಸಿ ಅಡಿಯಲ್ಲಿ 20 ವಿಭಿನ್ನ ಬಗೆಯ ಅಪರಾಧ ಪ್ರಕರಣಗಳು ಅವರ ಮೇಲಿದೆ.

ಜಗನ್ ಆದೇಶದಂತೆ ನಾಯ್ಡು ಅವರ ಪ್ರಜಾವೇದಿಕೆ ಕಟ್ಟಡ ನೆಲಸಮ ಜಗನ್ ಆದೇಶದಂತೆ ನಾಯ್ಡು ಅವರ ಪ್ರಜಾವೇದಿಕೆ ಕಟ್ಟಡ ನೆಲಸಮ

ಮತ್ತೊಂದು ವಿಶೇಷವೆಂದರೆ, ಜಗನ್ ಅವರ ಸಂಪುಟದಲ್ಲಿನ 26 ಸಚಿವರ ಪೈಕಿ 23 ಮಂದಿ ಸಚಿವರು ಕೊಟ್ಯಧಿಪತಿಗಳಿದ್ದಾರೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ ವಿಶ್ಲೇಷಣೆಯಲ್ಲಿ ತಿಳಿಸಿದೆ. ಅಂದರೆ ಶೇ 88 ಮಂದಿ ಸಚಿವರು ಕೋಟ್ಯಧಿಪತಿಗಳು.

9 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ

9 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ

17 ಮಂದಿ ಸಚಿವರಲ್ಲಿ 9 ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಅಂದರೆ, ಶೇ 35ರಷ್ಟು ಮಂದಿ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ಇದೇ ರೀತಿ ಶೇ 65ರಷ್ಟು ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ. 2014ರ ಚಂದ್ರಬಾಬು ನಾಯ್ಡು ಅವರ ಸರ್ಕಾರಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 13ರಷ್ಟು ಅಧಿಕ. ಸ್ವತಃ ಜಗನ್ ರೆಡ್ಡಿ ತಮ್ಮ ವಿರುದ್ಧವೇ 31 ಅಪರಾಧ ಪ್ರಕರಣಗಳಿರುವುದಾಗಿ ತಿಳಿಸಿದ್ದಾರೆ.

ನಾಯ್ಡುಗೆ ಮತ್ತೊಂದು ಆಘಾತ, ಕುಟುಂಬಸ್ಥರಿಗೆ ನೀಡಿದ್ದ ಭದ್ರತೆ ವಾಪಸ್ನಾಯ್ಡುಗೆ ಮತ್ತೊಂದು ಆಘಾತ, ಕುಟುಂಬಸ್ಥರಿಗೆ ನೀಡಿದ್ದ ಭದ್ರತೆ ವಾಪಸ್

ಸರಾಸರಿ 35.25 ಕೋಟಿ ರೂ ಆಸ್ತಿ

ಸರಾಸರಿ 35.25 ಕೋಟಿ ರೂ ಆಸ್ತಿ

ಈ 26 ಸಚಿವರ ಒಟ್ಟು ಆಸ್ತಿ ಮೌಲ್ಯ ಸರಾಸರಿ 35.25 ಕೋಟಿ ರೂಪಾಯಿ. ಇವರಲ್ಲಿ ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅತ್ಯಂತ ಶ್ರೀಮಂತ ಸಚಿವರಾಗಿದ್ದಾರೆ. ಜಗನ್ 510.38 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಚರ ಆಸ್ತಿ 4,43,48,37,267 ರೂಪಾಯಿ ಮತ್ತು ಸ್ಥಿರ ಆಸ್ತಿ 5,10,38,16,566 ಕೋಟಿ ರೂಪಾಯಿ.

ರಾಮಚಂದ್ರ ರೆಡ್ಡಿ 130 ಕೋಟಿ

ರಾಮಚಂದ್ರ ರೆಡ್ಡಿ 130 ಕೋಟಿ

ಅವರ ನಂತರದ ಸ್ಥಾನದಲ್ಲಿರುವ ಪೆದ್ದಿ ರೆಡ್ಡಿ ರಾಮಚಂದ್ರ ರೆಡ್ಡಿ 130 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ. ಮೇಕಪತಿ ಗೌತಮ್ ರೆಡ್ಡಿ 61 ಕೋಟಿ ರೂಪಾಯಿ ಮೊತ್ತದ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಾಮಚಂದ್ರ ರೆಡ್ಡಿ 20 ಕೋಟಿ ರೂ., ಚೆರುಕುವಾಡ ಶ್ರೀರಂಗನಾದ ರಾಜು 12 ಕೋಟಿ ರೂಪಾಯಿ ಮತ್ತು ಮುತ್ತಮಸೆಟ್ಟಿ ಶ್ರೀನಿವಾಸ ರಾವ್ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ತೆಲುಗುದೇಶಂ ಪಕ್ಷ ಇಲ್ಲದ ಹಾಗೇ ಮಾಡುತ್ತೇನೆ, ಹುಷಾರ್: ಸಿಎಂ ಜಗನ್ ತೆಲುಗುದೇಶಂ ಪಕ್ಷ ಇಲ್ಲದ ಹಾಗೇ ಮಾಡುತ್ತೇನೆ, ಹುಷಾರ್: ಸಿಎಂ ಜಗನ್

ವಾರ್ಷಿಕ ಆದಾಯ ಒಂದು ಕೋಟಿ

ವಾರ್ಷಿಕ ಆದಾಯ ಒಂದು ಕೋಟಿ

26 ಸಚಿವರಲ್ಲಿ ಮೂವರು ಸಚಿವರು ತಮ್ಮ ಒಟ್ಟು ವಾರ್ಷಿಕ ಆದಾಯ ಒಂದು ಕೋಟಿಗೂ ಹೆಚ್ಚು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಒಟ್ಟು 38 ಕೋಟಿ ರೂಪಾಯಿ ವಾರ್ಷಿಕ ಆದಾಯ ಮತ್ತು 25 ಕೋಟಿ ರೂಪಾಯಿ ಸ್ವಯಂ ಆದಾಯ ಘೋಷಿಸಿದ್ದಾರೆ. ಶ್ರೀನಿವಾಸ ರಾವ್ ಅವರು ಮೂರು ಕೋಟಿ ರೂಪಾಯಿ ಒಟ್ಟು ವಾರ್ಷಿಕ ಆದಾಯ ಮತ್ತು ಒಂದು ಕೋಟಿ ರೂಪಾಯಿ ಸ್ವಯಂ ಆದಾಯ ಘೋಷಿಸಿದ್ದಾರೆ.

ವಯಸ್ಸು, ಶೈಕ್ಷಣಿಕ ಅರ್ಹತೆ

ವಯಸ್ಸು, ಶೈಕ್ಷಣಿಕ ಅರ್ಹತೆ

12 (46%) ಸಚಿವರು ತಮ್ಮ ವಯಸ್ಸು 31-50ರವರೆಗೆ ಇರುವುದನ್ನು ಘೋಷಿಸಿಕೊಂಡಿದ್ದಾರೆ. 14 (54%) ಸಚಿವರು 51-70 ವಯೋಮಾನದವರಿದ್ದಾರೆ. 26 ಸಚಿವರಲ್ಲಿ ಮೂವರು ಮಹಿಳೆಯರಿದ್ದಾರೆ. ಎಂಟು ಸಚಿವರು (31%) ತಮ್ಮ ಶೈಕ್ಷಣಿಕ ಅರ್ಹತೆ 8-12ನೇ ತರಗತಿಯೊಳಗೆ ಇದೆ ಎಂದು ತಿಳಿಸಿದ್ದಾರೆ. 18 ಸಚಿವರು (69%) ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ.

English summary
Andhra Pradesh Chief Minister Jagan Mohan Reddy with Rs. 510 crore assets is the richest minister in the state. 23 of his 26 ministers are crorepatis. Jagan has 31 pending criminal cases against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X