ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ಸಾವಿರ ಖರ್ಚಿನಲ್ಲಿ ಆಂಧ್ರದ ಐಎ ಎಸ್ ಅಧಿಕಾರಿ ಮಗನ ಮದುವೆ

|
Google Oneindia Kannada News

ವಿಶಾಖಪಟ್ಟಣ (ಆಂಧ್ರಪ್ರದೇಶ), ಫೆಬ್ರವರಿ 7: ವಿಲಾಸಿ ಮದುವೆಗಳು ಅಪರೂಪ ಅಂತೇನೂ ಅನಿಸಲ್ಲ. ಕೆಲವು ಕುಟುಂಬಗಳು ತಮ್ಮ ಮನೆ ಮಕ್ಕಳ ಮದುವೆಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ಅಂಥದ್ದರಲ್ಲಿ ಆಂಧ್ರಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಸರಳ ವಿವಾಹ ಮಾಡುವ ಮೂಲಕ ಇತರರಿಗೆ ಮಾದರಿ ಆಗಲಿದ್ದಾರೆ.

ವಿಶಾಖಪಟ್ಟಣಂ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪಟ್ನಾಲ ಬಸಂತ್ ಕುಮಾರ್ ಅವರ ಮಗನ ಮದುವೆ ಫೆಬ್ರವರಿ 10ರಂದು ನಡೆಅಲಿದ್ದು, ಅದಕ್ಕಾಗಿ ಕೇವಲ 18 ಸಾವಿರ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಹುಡುಗ ಹಾಗೂ ಹುಡುಗಿ ಕಡೆಯವರು ಮದುವೆ ಹಾಗೂ ಅತಿಥಿಗಳಿಗೆ ಊಟದ ವ್ಯವಸ್ಥೆ ಸೇರಿ ಇಷ್ಟು ಮೊತ್ತ ಖರ್ಚು ಮಾಡುತ್ತಿದ್ದಾರೆ.

ಸಪ್ತಪದಿ ತುಳಿಯಲಿದ್ದಾರೆ ದಾವಣಗೆರೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓಸಪ್ತಪದಿ ತುಳಿಯಲಿದ್ದಾರೆ ದಾವಣಗೆರೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓ

ಸರಳವಾಗಿ ನಡೆಯುವ ಈ ಮದುವೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರು ಬರಲಿದ್ದು, ಜೋಡಿಗೆ ಹಾರೈಸಲಿದ್ದಾರೆ. 2017ನೇ ಇಸವಿಯಲ್ಲಿ ಬಸಂತ್ ಕುಮಾರ್ ತಮ್ಮ ಮಗಳ ಮದುವೆ ಕೂಡ ಇದೇ ರೀತಿ ಸರಳವಾಗಿ ಮಾಡಿದ್ದರು. ಆಗ ಇದೇ ರೀತಿ ಸಮಾನವಾಗಿ ಖರ್ಚು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿಯೇ 16,100 ರುಪಾಯಿ ವೆಚ್ಚವಾಗಿತ್ತು.

Andhra Pradesh IAS officer will be spending only 18,000 for his sons wedding

2012ರಲ್ಲಿ ಐಎಎಸ್ ಆಗಿ ಬಸಂತ್ ಕುಮಾರ್ ಬಡ್ತಿ ಪಡೆದಿದ್ದಾರೆ. ಅದಕ್ಕೂ ಮುನ್ನ ರಾಜ್ಯಪಾಲ ನರಸಿಂಹನ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಜಂಟಿ ಕಾರ್ಯದರ್ಶಿ ಆಗಿದ್ದರು.

English summary
Andhra Pradesh IAS officer Basanth Kumar will be doing his son marriage on February 10th with 18,000 rupees in Vishakhapatnam. Here is the details about marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X