ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಕ್ಕೆ ಒಲಿದ ಬುಲೆಟ್ ರೈಲಿಗಿಂತ ವೇಗವಾದ ಸಂಚಾರ

By Mahesh
|
Google Oneindia Kannada News

ಅಮರಾವತಿ, ಸೆ. 07: ಭಾರತದಲ್ಲಿ ಬಹುಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆ ಬಗ್ಗೆ ಅಪಸ್ವರ ಕೇಳಿ ಬರುತ್ತಿರುವ ಸಂದರ್ಭದಲ್ಲೇ ಹೈಪರ್​ಲೋಪ್ ಸಂಚಾರ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ವಿಜಯವಾಡ ಹಾಗೂ ಅಮರಾವತಿ ನಡುವೆ ಸಂಚರಿಸಲಿದೆ. ಮೆಟ್ರೋ ರೈಲು ಬರುವುದಕ್ಕೂ ಮುನ್ನ ಅಮರಾವತಿಯಲ್ಲಿ ಹೈಪರ್ ಲೂಪ್ ಕಾಣುವ ಸಾಧ್ಯತೆಯಿದೆ. ಸುಮಾರು 35 ಕಿ.ಮೀ ದೂರವನ್ನು 5 ನಿಮಿಷದಲ್ಲಿ ಕ್ರಮಿಸಬಹುದಾಗಿದೆ.

ಆಂಧ್ರಪ್ರದೇಶದ ಆರ್ಥಿಕ ಅಭಿವೃದ್ಧಿ ಮಂಡಳಿ(ಎಪಿ -ಇಡಿಬಿ) ಹಾಗೂ ಅಮೆರಿಕದ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನ ಸಂಸ್ಥೆ (ಎಚ್ ಟಿಟಿ) ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆಯ ವೆಚ್ಚದ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಸುಮಾರು ಆರು ತಿಂಗಳ ಕಾಲ ಸಮೀಕ್ಷೆ ನಡೆಸಿ ನಂತರ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಇಡಿಬಿ ಸಿಇಒ ಕಿಶೋರ್ ಹೇಳಿದ್ದಾರೆ.

 ಅಮರಾವತಿಗಾಗಿ ನಾಯ್ಡು ಕನಸು

ಅಮರಾವತಿಗಾಗಿ ನಾಯ್ಡು ಕನಸು

ಪ್ರತ್ಯೇಕ ರಾಜ್ಯವಾದ ಬಳಕ್ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಿ ನಿರ್ಮಾಣಗೊಂಡಿರುವ ಅಮರಾವತಿಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ರಮಿಸುತ್ತಿದ್ದಾರೆ. ವಿಶ್ವ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಎಚ್ ಟಿಟಿ ಅಧಿಕಾರಿಗಳ ಜತೆ ನಾಯ್ಡು ಮಾತುಕತೆ ನಡೆಸಿದ್ದರು. ಈಗ ಎಚ್ ಟಿಟಿ ಸಹ ಸ್ಥಾಪಕ ಬಿಬಾಪ್ ಗ್ರೆಸ್ಟಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

 ಏನಿದು ಹೈಪರ್ ಲೂಪ್ ಸಾರಿಗೆ

ಏನಿದು ಹೈಪರ್ ಲೂಪ್ ಸಾರಿಗೆ

ಹೈಪರ್​ಲೋಪ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ (ಎಚ್​ಟಿಎಸ್) ಸಂಸ್ಥೆ ಈ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಗಂಟೆಗೆ 1,216 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಉದಾಹರಣೆಗೆ ಬೆಂಗಳೂರು ಹಾಗೂ ಚೆನ್ನೈ ನಡುವಿನ 345 ಕಿ.ಮೀ. ದೂರವನ್ನು ಈ ರೈಲು 30 ನಿಮಿಷದಲ್ಲಿ ಕ್ರಮಿಸಲಿದೆ ಎಂದು ಈ ಸೂಪರ್ ಸಾನಿಕ್ ರೈಲಿನ ನಿರ್ಮಾಣಗಾರ ಎಲಾನ್ ಹೇಳಿದ್ದಾರೆ.

ಹಳಿಗಳ ಮೇಲೆ ಚಲಿಸುವುದಿಲ್ಲ

ಹಳಿಗಳ ಮೇಲೆ ಚಲಿಸುವುದಿಲ್ಲ

ಸೂಪರ್ ಸಾನಿಕ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಕಾಂಕ್ರಿಟ್ ಪಿಲ್ಲರ್ ನಿರ್ಮಿಸಿ, ಅದರ ಮೇಲೆ ಕೊಳವೆಯ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದು ಅರೆನಿರ್ವಾತ ಪ್ರದೇಶವಾಗಿರಲಿದ್ದು, ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗ ಪಡೆಯಲಿದೆ.

ಟ್ಯೂಬ್ ರೈಲು ಎನ್ನಬಹುದು

ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿ, ಇದರಿಂದ ಉತ್ಪಾದಿಸಲಾದ ವಿದ್ಯುತ್​ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ. ಈ ರೈಲಿಗೆ ಇಂಧನ ಅಗತ್ಯವಿಲ್ಲ, ಹೀಗಾಗಿ ಇಂಧನ ಉಳಿತಾಯ ಸಾಧ್ಯ.

English summary
The Andhra Pradesh government is planning to introduce Hyperloop — the mode of transportation invented Tesla and SpaceX founder Elon Musk — that will connectAmaravati and Vijayawada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X