ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಬೆಲೆಯನ್ನು 50ರಷ್ಟು ಏರಿಕೆ ಮಾಡಿದ ಆಂಧ್ರ ಪ್ರದೇಶ

|
Google Oneindia Kannada News

ಅಮರಾವತಿ, ಮೇ 5: ದೇಶದಲ್ಲಿ ಮದ್ಯ ಮಾರಾಟ ನಿನ್ನೆಯಿಂದ ಶುರುವಾಗಿದೆ. ಆಂಧ್ರ ಪ್ರದೇಶದಲ್ಲಿ ಮದ್ಯ ಮಾರಾಟದ ದರವನ್ನು ಹೆಚ್ಚು ಮಾಡಲಾಗಿದೆ. ಸರ್ಕಾರ ಮದ್ಯದ ಮೇಲಿನ ದರವನ್ನು 50ರಷ್ಟು ಏರಿಕೆ ಮಾಡಿದೆ.

ಮೊದಲು 25 ರಷ್ಟು ಮದ್ಯದ ಬೆಲೆಯನ್ನು ಏರಿಕೆ ಮಾಡಿ, ಸೋಮವಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಆದಾದ ಬಳಿಕ ಒಂದೇ ದಿನದಲ್ಲಿ ಮತ್ತೆ ದರವನ್ನು ಹೆಚ್ಚು ಮಾಡಿದೆ. ಬರೋಬ್ಬರಿ 50 ರಷ್ಟು ಹಣವನ್ನು ಹೆಚ್ಚಿಗೆ ಮಾಡಿದೆ. ಈ ವಿಷಯವನ್ನು ಕಂದಾಯ ವಿಶೇಷ ಮುಖ್ಯ ಕಾರ್ಯದರ್ಶಿ ರಜತ್ ಭಾರ್ಗವ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ?

ಮದ್ಯ ಸೇವಿಸುವವರನ್ನು ಕಡಿಮೆ ಮಾಡಲು, ಮದ್ಯ ಖರೀದಿಗೆ ಹಿಂದೆಟು ಹಾಕುವಂತೆ ಮಾಡಲು ಹಾಗೂ ಅವರ ಆರೋಗ್ಯವನ್ನು ಕಾಪಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮದ್ಯ ಮಾರಾಟ ದರ ಹೆಚ್ಚು ಮಾಡಿದರೆ, ಖರೀದಿ ಮಾಡುವವರು ಕಡಿಮೆಯಾಗುತ್ತಾರೆ. ಆದರೆ, ಇತ್ತ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಈ ರೀತಿಯ ಕ್ರಮ ತೆಗೆದುಕೊಂಡಿರಬಹುದು.

Andhra Pradesh Govt Hikes Liquor Prices By Another 50 Percent

ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆಯಂತೆ. ಬೆಳಿಗ್ಗೆ 11 ಗಂಟೆಯ ಬದಲು ಮಧ್ಯಾಹ್ನ 12 ರಿಂದ ಸಂಜೆ 7 ರವರೆಗೆ ಮದ್ಯದಂಗಡಿಗಳನ್ನು ತೆರೆಯಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಮದ್ಯ ಮಾರಾಟದಿಂದ ವಾರ್ಷಿಕ ಆದಾಯ 9,000 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.

ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!

ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ 45 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

English summary
Andhra Pradesh government has enhanced prices of liquor by another 50 percent on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X