ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶ; ಸರ್ಕಾರಿ ಕಚೇರಿಗಳ ಸ್ಥಳಾಂತರಕ್ಕೆ ಚಾಲನೆ

|
Google Oneindia Kannada News

ಅಮರಾವತಿ, ಫೆಬ್ರವರಿ 02: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಈಗ ಮತ್ತೊಂದು ತೀರ್ಮಾನ ಕೈಗೊಂಡಿದೆ. ಅಮರಾವತಿಯಿಂದ ಮೂರು ಕಚೇರಿಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ವಿಚಾರಣಾ ಆಯುಕ್ತರು ಸೇರಿದಂತೆ ಮೂರು ಕಚೇರಿಗಳನ್ನು ಕರ್ನೂಲ್‌ಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ. ಆಡಳಿತದ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಮರಾವತಿ ಜೊತೆಗೆ ವಿಶಾಖಪಟ್ಣಣಂ ಹಾಗೂ ಕರ್ನೂಲ್ ಕೂಡಾ ಅಧಿಕೃತ ರಾಜಧಾನಿಯಾಗಿರುತ್ತವೆ ಎಂದು ಘೋಷಣೆ ಮಾಡಿದ್ದರು. ಕರ್ನೂಲ್‌ಗೆ ಬೇರೆ ಕಚೇರಿಗಳನ್ನು ಸ್ಥಳಾಂತರ ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ

Andhra Pradesh Govt Decided To Shift Offices

ಹೊಸ ರಾಜಧಾನಿಗಳಿಗೆ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು ಎಂಬ ವಿಚಾರ ನ್ಯಾಯಾಲಯದ ಮುಂದಿದೆ. ಹೊಸ ರಾಜಧಾನಿಗಳಿಗೆ ಸರ್ಕಾರಿ ಕಚೇರಿ ಸ್ಥಳಾಂತರ ಮಾಡಬಾರದು ಎಂದು ನ್ಯಾಯಾಲಯ ಹೇಳಿದ್ದು, ಫೆಬ್ರವರಿ 26ಕ್ಕೆ ವಿಚಾರಣೆ ಮುಂದೂಡಿದೆ.

ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ

ಹೊಸ ರಾಜಧಾನಿಗಳ ಸ್ಥಾಪನೆ ರಾಜ್ಯದಲ್ಲಿ ವಿರೋಧ ಸಹ ವ್ಯಕ್ತವಾಗಿದೆ. ತೆಲಗು ದೇಶಂ ಪಾರ್ಟಿ ಬೆಂಬಲಿತ ರೈತರು, ಆಟೋ ಚಾಲಕರು ರಾಜಧಾನಿ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೂ ಸಹ ರಾಜಧಾನಿ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

English summary
Andhra Pradesh government has decided to shift three government offices from Amaravati. Offices will function at Kurnool on administrative grounds.v
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X