ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆ 6 ಅಥವಾ ರಾತ್ರಿ 7 ರೊಳಗೆ ಮದ್ಯದಂಗಡಿ ಬಂದ್ ಗೆ ಆಂಧ್ರ ಸರಕಾರ ಚಿಂತನೆ

|
Google Oneindia Kannada News

ವಿಜಯವಾಡ (ಆಂಧ್ರಪ್ರದೇಶ), ಜುಲೈ 10: ಅಂಧ್ರಪ್ರದೇಶದಲ್ಲಿ ಮದ್ಯ ನಿಷೇಧ ಮಾಡುವ ಚಿಂತನೆ ಇದ್ದು, ಅದಕ್ಕೂ ಮುನ್ನ ಇಂತಿಷ್ಟೇ ಅವಧಿ ಮದ್ಯ ಮಾರಾಟ ಮಾಡಬೇಕು ಎಂಬ ನಿಯಮ ತರಲು ಆಂಧ್ರಪ್ರದೇಶ ಸರಕಾರ ಚಿಂತಿಸಿದೆ. ಇಂಥ ಹಲವು ಪ್ರಸ್ತಾವಗಳು ಸರಕಾರದ ಮುಂದೆ ಇದ್ದು, ಮೊದಲಿಗೆ ಮದ್ಯ ಮಾರಾಟ ಮಾಡುವ ಚಿಲ್ಲರೆ ಮಳಿಗೆಗಳ ಅವಧಿಯನ್ನು ಕಡಿತಗೊಳಿಸುವುದನ್ನು ಪರಿಶೀಲಿಸುತ್ತಿದೆ.

ಹೇಗೆ ತಮಿಳುನಾಡಿನಲ್ಲಿ ನಿಯಮ ಇದೆಯೋ ಅದೇ ರೀತಿ ಆಂಧ್ರಪ್ರದೇಶದಲ್ಲೂ ಸರಕಾರಿ ಒಡೆತನದ ಮಳಿಗೆಗಳಿಂದಲೇ ಮದ್ಯ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಏಕೆಂದರೆ, ಒಂದೇ ಸಲಕ್ಕೆ ಮದ್ಯ ಮಾರಾಟ ನಿಷೇಧ ಮಾಡುವುದು ಕಷ್ಟವಾಗುತ್ತದೆ. ಆದರೆ ಹಂತಹಂತವಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ವಿವಿಧ ಯೋಜನೆ ಹಾಕಿಕೊಂಡಿದೆ.

ಮಾನ್ಯ ಮುಖ್ಯಮಂತ್ರಿಗಳೇ, ಸರಕಾರದ ಬೊಕ್ಕಸ ತುಂಬಲು ಇದೇನಾ ರಾಜಮಾರ್ಗ?ಮಾನ್ಯ ಮುಖ್ಯಮಂತ್ರಿಗಳೇ, ಸರಕಾರದ ಬೊಕ್ಕಸ ತುಂಬಲು ಇದೇನಾ ರಾಜಮಾರ್ಗ?

ಬೆಳಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆ ತನಕ ಮಾತ್ರ ಅಥವಾ ದಿನದ ಎಂಟು ಗಂಟೆ ಮಾತ್ರ ಮದ್ಯ ಮಾರಾಟ ಮಳಿಗೆ ತೆರೆಯಬೇಕು ಎಂಬ ನಿಯಮ ತಂದರೂ ಅದರಿಂದ ಅನುಕೂಲ ಆಗುತ್ತದೆ. ಸದ್ಯದ ಸಮಯವನ್ನೇ ಅನುಸರಿಸುವುದೋ ಅಥವಾ ಮಾರಾಟದ ಸಮಯ ಕಡಿತ ಮಾಡುವುದೋ ಎಂಬ ಬಗ್ಗೆ ಕೂಡ ಚಿಂತಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Andhra Pradesh government planning to restrict sale hours of liquor

ಆಂಧ್ರಪ್ರದೇಶದಲ್ಲಿ 4300ಕ್ಕೂ ಹೆಚ್ಚು ವೈನ್ ಶಾಪ್ ಗಳು, 800ಕ್ಕೂ ಹೆಚ್ಚು ಬಾರ್ ಗಳು ಇವೆ. ಆವುಗಳನ್ನು ಸಂಜೆ 6 ಅಥವಾ ರಾತ್ರಿ 7 ಗಂಟೆಯೊಳಗೆ ಬಂದ್ ಮಾಡುವ ಬಗ್ಗೆ ಸರಕಾರದ ಒಲವಿದೆ. ಮದ್ಯ ಮಾರಾಟ ನಿಷೇಧದಿಂದ ಬಡವರಿಗೆ ಅನುಕೂಲ ಆಗುತ್ತದೆ. ಆದರೆ ಇದೇ ವೇಳೆ ಅಕ್ರಮ ಮದ್ಯ ಮಾರಾಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ಸಾಧ್ಯತೆಗಳನ್ನು ಪರಾಂಬರಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

English summary
Andhra Pradesh government planning to restrict sale hours of liquor, as one of the steps towards prohibition of liquor in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X