ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರೀಕ್ಷೆಗೆ ಒಳಪಟ್ಟ ಆಂಧ್ರ ಸಿಎಂ ಜಗನ್‌ಮೋಹನ್ ರೆಡ್ಡಿ

|
Google Oneindia Kannada News

ಅಮರಾವತಿ, ಏಪ್ರಿಲ್ 17: ದೇಶಾದ್ಯಂತ ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಇದೀಗ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕೊವಿಡ್ ಪರೀಕ್ಷೆಯ ಫಲಿತಾಂಶದಲ್ಲಿ ಜಗನ್ ಮೋಹನ್ ರೆಡ್ಡಿಗೆ ನೆಗಿಟಿವ್ ಬಂದಿದೆ. ಅಂದ್ಹಾಗೆ, ಇದ್ದಕ್ಕಿದ್ದಂತೆ ಆಂಧ್ರ ಮುಖ್ಯಮಂತ್ರಿಗೆ ಏಕೆ ಟೆಸ್ಟ್ ಮಾಡಲಾಯಿತು ಎಂದು ಅಚ್ಚರಿ ಪಡಬೇಡಿ. ಜಗನ್‌ಮೋಹನ್‌ ರೆಡ್ಡಿಗೆ ರೋಗಲಕ್ಷಣ ಇರಲಿಲ್ಲ. ಆದರೂ ಪರೀಕ್ಷೆ ಮಾಡಲಾಯಿತು.

ಲಾಕ್ ಡೌನ್ ನಡುವೆ ಆಂಧ್ರ ಸರ್ಕಾರದಿಂದ ಹೊಸ ಅಸ್ತ್ರ ಪ್ರಯೋಗಲಾಕ್ ಡೌನ್ ನಡುವೆ ಆಂಧ್ರ ಸರ್ಕಾರದಿಂದ ಹೊಸ ಅಸ್ತ್ರ ಪ್ರಯೋಗ

ಅಂದ್ಹಾಗೆ, ದಕ್ಷಿಣ ಕೊರಿಯದಿಂದ 1 ಲಕ್ಷ Rapid ಟೆಸ್ಟ್ ಕಿಟ್‌ ಖರೀದಿಸಲಾಗಿದೆ. ಹಾಗಾಗಿ, Rapid ಟೆಸ್ಟ್ ಕಿಟ್ ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ತಿಳಿಯಲು ಖುದ್ದು ಸಿಎಂ ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

Andhra Pradesh CM YS Jaganmohan Reddy Got Tested For COVID19 Today

ಇನ್ನು ಆಂಧ್ರ ಪ್ರದೇಶದಲ್ಲಿ ಇದುವರೆಗೂ 572 ಕೊರೊನಾ ಕೇಸ್ ದಾಖಲಾಗಿದೆ. 14 ಜನರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. 35 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು 523 ಜನರು ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ.

ಮಗನಿಗಾಗಿ ಲಾಕ್‌ಡೌನ್‌ ಲೆಕ್ಕಿಸದ ತಾಯಿ ಬೈಕಿನಲ್ಲಿ 1400 ಕಿ.ಮೀ ಪ್ರಯಾಣಮಗನಿಗಾಗಿ ಲಾಕ್‌ಡೌನ್‌ ಲೆಕ್ಕಿಸದ ತಾಯಿ ಬೈಕಿನಲ್ಲಿ 1400 ಕಿ.ಮೀ ಪ್ರಯಾಣ

ಆಂಧ್ರ ಪ್ರದೇಶ ಜಿಲ್ಲಾವಾರು ಅಂಕಿ ಅಂಶ ನೋಡುವುದಾದರೇ, ಗುಂಟೂರಿನಲ್ಲಿ ಹೆಚ್ಚು ಸೋಂಕಿತರು ವರದಿಯಾಗಿದ್ದಾರೆ. ಒಟ್ಟು 126 ಜನರಿಗೆ ಸೋಂಕು ಪತ್ತೆಯಾಗಿದೆ. ಕರ್ನೂಲಿನಲ್ಲಿ 125 ಜನ ಸೋಂಕಿತರಿದ್ದಾರೆ. ನೆಲ್ಲೂರಿನಲ್ಲಿ 65 ಜನ ಹಾಗೂ ಕೃಷ್ಣದಲ್ಲಿ 42 ಜನರಿಗೆ ಕೊವಿಡ್ ತಗುಲಿದೆ.

English summary
Andhra Pradesh CM YS Jaganmohan Reddy got tested for COVID19 today. His test result came negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X