ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ನಿಷೇಧ!

|
Google Oneindia Kannada News

ಅಮರಾವತಿ, ಅ. 30: ಆಂಧ್ರಪ್ರದೇಶದಲ್ಲಿಆನ್ ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಈ ಕುರಿತಂತೆ ಕೂಡಲೇ ಕ್ರಮ ಜರುಗಿಸಿ, ಎಲ್ಲಾ ಇಂಟರ್ ನೆಟ್ ಸೇವಾದಾರರಿಗೆ ಸೂಚಿಸಿ ಸಂಬಂಧಿಸಿದ ಆಪ್ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಜಗನ್ ಮೋಹನ್ ರೆಡ್ಡಿ ಪತ್ರ ಬರೆದಿದ್ದಾರೆ.

ಸುಮಾರು 132 ಆಪ್ಲಿಕೇಷನ್ ಗಳನ್ನು ನಿಷೇಧದ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ಆಪ್ ನಿಷೇಧ ಕುರಿತಂತೆ ಕೇಂದ್ರ ಸರ್ಕಾರವೇ ಕ್ರಮ ಜರುಗಿಸಬೇಕಾಗುತ್ತದೆ. ಈ ಪಟ್ಟಿಯಲ್ಲಿ ಪೇಟಿಯಂ ಫಸ್ಟ್ ಗೇಮ್, ಮೊಬೈಲ್ ಪ್ರೀಮಿಯರ್ ಲೀಗ್, ಅಡ್ಡಾ52 ಮುಂತಾದವು ಸೇರಿವೆ.

ಕೇಂದ್ರ ಮಾಹಿತಿ ಮತ್ತು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಅಕ್ಟೋಬರ್ 27ರಂದೇ ಪತ್ರ ಬರೆದಿದ್ದು, ಆನ್ ಲೈನ್ ಗೇಮಿಂಗ್ ಹಾವಳಿಯಿಂದ ಅನೇಕ ಸಾಮಾಜಿಕ ಪಿಡುಗು ಆರಂಭವಾಗಿದ್ದು, ಹಣ, ಪ್ರಾಣ ಎಲ್ಲವೂ ಹೋಗಿದೆ. ಬೆಟ್ಟಿಂಗ್ ಯಾವುದೇ ಮಾದರಿಯಾದರೂ ಅದರಿಂದ ನಷ್ಟ ಹೊಂದುವವರೇ ಅಧಿಕ ಎಂದಿದ್ದಾರೆ.

Andhra Pradesh Bans Online Gaming, Betting

ಆಂಧ್ರಪ್ರದೇಶ ಜೂಜು ನಿಯಂತ್ರಣ ಕಾಯ್ದೆ 1974 ಹಾಗೂ 2020ರ ತಿದ್ದುಪಡಿ ಕಾಯ್ದೆ ಅನ್ವಯ ಗೇಮಿಂಗ್, ಬೆಟ್ಟಿಂಗ್, ಜೂಜು ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದ 132 ವೆಬ್ ತಾಣ ಹಾಗೂ ಆಪ್ ಗಳನ್ನು ಪಟ್ಟಿ ಮಾಡಿದ್ದು, ಇದರಿಂದ ಡಿಮ್ಸ್11 ಹೊರಗಿಡಲಾಗಿದೆ. ಡ್ರೀಮ್ಸ್11 pay-to-play ಸ್ಪರ್ಧೆಗೆ ಸೆಪ್ಟೆಂಬರ್ ತಿಂಗಳಲ್ಲಿ ನಿರ್ಬಂಧ ಹೇರಲಾಗಿತ್ತು.

Recommended Video

ಭಾರತದಿಂದ ಕೊರೊನಾ‌ ತವರಿಗೆ ಶುರುವಾಯ್ತು ವಿಮಾನಯಾನ | Oneindia Kannada

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ರೀತಿ ಬೆಟ್ಟಿಂಗ್, ಜೂಜು ವ್ಯವಹಾರದಲ್ಲಿ ತೊಡಗಿದ್ದರೆ ಭಾರಿ ದಂಡ ಹಾಗೂ ಜೈಲು ಶಿಕ್ಷೆ ನೀಡಲಾಗುತ್ತದೆ. ಇಂಟರ್ನೆಟ್ ಸೇವಾ ಸಂಸ್ಥೆ, ಆಪ್ ಡೆವಲಪರ್ ಮೇಲೂ ಕ್ರಮ ಜರುಗಿಸಲಾಗುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

English summary
Andhra Pradesh has banned online gaming, online betting and gambling, and has urged the Centre to direct all internet service providers to block access to 132 websites and apps, including Paytm First Game, Mobile Premier League and Adda52, that are providing such services in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X