ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ ಆಂಧ್ರಕ್ಕೆ ಸಂಚರಿಸಲು ಹೊಸ ಮಾರ್ಗಸೂಚಿ

|
Google Oneindia Kannada News

ಅಮರಾವತಿ, ಜುಲೈ 14 : ಆಂಧ್ರಪ್ರದೇಶ ಸರ್ಕಾರ ಕ್ವಾರಂಟೈನ್ ನಿಯಮಗಳಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಿರುವ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು 'ಅತಿ ಅಪಾಯಕಾರಿ' ರಾಜ್ಯಗಳ ಪಟ್ಟಿಗೆ ಸೇರಿಸಿದೆ.

ಕರ್ನಾಟಕ ಮತ್ತು ತೆಲಂಗಾಣದಿಂದ ಜನರು ಸುಲಭವಾಗಿ ಆಂಧ್ರಪ್ರದೇಶಕ್ಕೆ ಹೋಗುವಂತಿಲ್ಲ. ಬೇರೆ ರಾಜ್ಯಗಳಿಂದ ಆಗಮಿಸುವ ಜನರ ರೀತಿ ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಗಾಗಬೇಕು. ರಾಜ್ಯಕ್ಕೆ ಸಂಚಾರ ನಡೆಸಲು ಪಾಸು ಪಡೆಯುವುದು ಕಡ್ಡಾಯವಾಗಿದೆ.

ಆಂಧ್ರ ಸರ್ಕಾರವನ್ನು ಹೊಗಳಿದ ಸಿದ್ದರಾಮಯ್ಯ, ಧನ್ಯವಾದ ಹೇಳಿದ ಅಧಿಕಾರಿಆಂಧ್ರ ಸರ್ಕಾರವನ್ನು ಹೊಗಳಿದ ಸಿದ್ದರಾಮಯ್ಯ, ಧನ್ಯವಾದ ಹೇಳಿದ ಅಧಿಕಾರಿ

ಆಂಧ್ರಪ್ರದೇಶದ ಕೋವಿಡ್ - 19 ನೋಡೆಲ್ ಅಧಿಕಾರಿ ಶ್ರೀಕಾಂತ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. "ರಾಜ್ಯಕ್ಕೆ ಕರ್ನಾಟಕ, ತೆಲಂಗಾಣದಿಂದ ಆಗಮಿಸುವವರು ಕಡ್ಡಾಯವಾಗಿ ಸ್ಪಂದನಾ ವೆಬ್ ಸೈಟ್ ಮೂಲಕ ಪಾಸು ಪಡೆಯಬೇಕು. ರಾಜ್ಯದ ಗಡಿಯಲ್ಲಿ ಪಾಸುಗಳನ್ನು ತೋರಿಸಬೇಕು" ಎಂದು ಹೇಳಿದ್ದಾರೆ.

ಕೊರೊನಾ ಲೆಕ್ಕಾಚಾರ: 10 ಸಾವಿರ ಸನಿಹದಲ್ಲಿ ಕರ್ನಾಟಕ-ಆಂಧ್ರ ಪ್ರದೇಶಕೊರೊನಾ ಲೆಕ್ಕಾಚಾರ: 10 ಸಾವಿರ ಸನಿಹದಲ್ಲಿ ಕರ್ನಾಟಕ-ಆಂಧ್ರ ಪ್ರದೇಶ

Need To Know Before Travel To Andhra Pradesh From Karnataka

ಕರ್ನಾಟಕ, ತೆಲಂಗಾಣದಿಂದ ಆಗಮಿಸುವ ಜನರನ್ನು ಗಡಿಯಲ್ಲಿ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ. ಯಾರಿಗಾದರೂ ಕೋವಿಡ್ - 19 ಸೋಂಕಿನ ಲಕ್ಷಣಗಳು ಕಂಡು ಬಂದರೆ ಅವರನ್ನು ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಆಸ್ತಿ ಮಾರಾಟ ಮಾಡುವ ಟಿಟಿಡಿ ನಿರ್ಧಾರ ತಡೆದ ಆಂಧ್ರ ಸರ್ಕಾರ!ಆಸ್ತಿ ಮಾರಾಟ ಮಾಡುವ ಟಿಟಿಡಿ ನಿರ್ಧಾರ ತಡೆದ ಆಂಧ್ರ ಸರ್ಕಾರ!

ಆಂಧ್ರಪ್ರದೇಶ ಸರ್ಕಾರ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳನ್ನು ಅತಿ ಅಪಾಯಕಾರಿ ಪಟ್ಟಿಗೆ ಸೇರಿಸಿದೆ. ಈ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಿವೆ.

ಭಾನುವಾರ ಮತ್ತು ಸೋಮವಾರ ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಆಗಮಿಸಿದ 655 ಜನರು ಮತ್ತು ಕರ್ನಾಟಕದಿಂದ ಆಗಮಿಸಿದ 83 ಜನರಿಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ಅವರನ್ನು ಕ್ವಾರಂಟೈನ್‌ಗೆ ಹಾಕಲಾಗಿದೆ.

ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳ ಪ್ರಕಾರ ವಿದೇಶದಿಂದ ಆಗಮಿಸುವವರಿಗೆ 7 ದಿನದ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. 5 ಮತ್ತು 7ನೇ ದಿನ ಅವರಿಗೆ ಪರೀಕ್ಷೆಯನ್ನು ನಡೆಸಿ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಮನೆಗೆ ಕಳಿಸಲಾಗುತ್ತದೆ.

English summary
Andhra Pradesh government has changed the quarantine rules. According to the new guidelines Telangana and Karnataka are now included in the high-risk category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X