• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಜೆಗಳ ವರ್ಗಾವಣೆಯಿಂದ ಜಗನ್ ಮೋಹನ್‌ಗೆ ಅನುಕೂಲ: ಆಂಧ್ರ ಹೈಕೋರ್ಟ್ ಅಸಮಾಧಾನ

|

ಅಮರಾವತಿ, ಡಿಸೆಂಬರ್ 31: ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಇತ್ತೀಚೆಗೆ ವರ್ಗಾವಣೆ ಮಾಡಿರುವುದು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಬಾಕಿ ಉಳಿದಿರುವ ಸಿಬಿಐ ಪ್ರಕರಣಗಳು ಮತ್ತು ಮೂರು ರಾಜಧಾನಿಗಳ ಕುರಿತಾದ ಪ್ರಕರಣಗಳ ವಿಚಾರಣೆಯನ್ನು ವಿಳಂಬ ಮಾಡಲಿದೆ. ಇದು ಜಗನ್ ಅವರಿಗೆ ಅನಗತ್ಯ ಅನುಕೂಲ ಮಾಡಿಕೊಡಲಿದೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ಹೇಳಿದೆ.

ಗುಂಟೂರು ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿನ ಸರ್ಕಾರಿ ಭೂಮಿ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಿಂದ ಸ್ವತಃ ಹಿಂದೆ ಸರಿಯಬೇಕು ಎಂದು ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ರಾಕೇಶ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಗನ್ ರೆಡ್ಡಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಅಧಿಕಾರದಲ್ಲಿ ಇರುವವರಿಂದ ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ದಾಳಿಗೆ ಒಳಗಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿ ಎನ್‌ವಿ ರಮಣ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಜಗನ್ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಅನೇಕ ಅರ್ಜಿಗಳು ದಾಖಲಾಗಿದ್ದವು. ಆದರೆ ಅವುಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಮುಂದೆ ಓದಿ.

ಪತ್ರಕ್ಕೂ ವರ್ಗಾವಣೆಗೂ ಸಂಬಂಧ

ಪತ್ರಕ್ಕೂ ವರ್ಗಾವಣೆಗೂ ಸಂಬಂಧ

ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಆದೇಶದ ವಿರುದ್ಧ ಹೇಳಿಕೆ ನೀಡಿರುವ ಅವರು, ಈ ವರ್ಗಾವಣೆ ಪ್ರಸ್ತಾವಕ್ಕೂ ರಾಜ್ಯ ನ್ಯಾಯಾಂಗದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ವಿರುದ್ಧದ ಪ್ರಕರಣಗಳು ಬಾಕಿ ಇರುವಾಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದ ಘಟನೆಗೂ ಸಂಬಂಧವಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ವರ್ಗಾವಣೆ ಪ್ರಕ್ರಿಯೆ ಪಾರದರ್ಶಕ

ವರ್ಗಾವಣೆ ಪ್ರಕ್ರಿಯೆ ಪಾರದರ್ಶಕ

ಕೊಲಿಜಿಯಂನ ಪ್ರಸ್ತಾವದ ವಿರುದ್ಧ ತಾವು ಯಾವುದೇ ಪ್ರಶ್ನೆ ಎತ್ತುತ್ತಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ಅವುಗಳ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡುವುದು ಪಾರದರ್ಶಕತೆಯನ್ನು ಪ್ರತಿಫಲಿಸುತ್ತದೆ ಎಂದಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ ಆದೇಶ

ನ್ಯಾಯಾಂಗ ನಿಂದನೆ ಬಗ್ಗೆ ಮಾಹಿತಿ ಇಲ್ಲ

ನ್ಯಾಯಾಂಗ ನಿಂದನೆ ಬಗ್ಗೆ ಮಾಹಿತಿ ಇಲ್ಲ

'ಜಗನ್ ಮೋಹನ್ ಅವರು ಕಳುಹಿಸಿದ ಪತ್ರಕ್ಕೆ ಸಂಬಂಧಿಸಿದಂತೆ ಸಿಜೆಐ ಯಾವುದೇ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದಾರೆಯೇ ಎನ್ನುವುದು ನಮಗೆ ಅರಿವಿಲ್ಲ. ಆದರೆ ಆಂಧ್ರ ಹೈಕೋರ್ಟ್ ಸಿಜೆ ಅವರನ್ನು ಸಿಕ್ಕಿಂ ಹೈಕೋರ್ಟ್‌ಗೆ ಮತ್ತು ತೆಲಂಗಾಣ ಸಿಜೆಯನ್ನು ಉತ್ತರಾಖಂಡ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಕೊಲಿಜಿಯಂ ಡಿ. 14ರಂದು ಶಿಫಾರಸು ಮಾಡಿರುವುದು ವಾಸ್ತವ ಎಂದಿದ್ದಾರೆ.

ಸತ್ಯ ಬದಲಾಗುವುದಿಲ್ಲ

ಸತ್ಯ ಬದಲಾಗುವುದಿಲ್ಲ

ಸಿಜೆಐ ಅವರಿಗೆ ಅನೌಪಚಾರಿಕವಾಗಿ ಪತ್ರ ರವಾನಿಸಿದ ನಡೆಯಿಂದ ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ಅಂತಿಮ ನೆಮ್ಮದಿ ಸಿಗಲಿದೆಯೇ ಅಥವಾ ಇಲ್ಲವೇ ಎನ್ನುವುದು ಮುಖ್ಯವಲ್ಲ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅವರು ಯುಕ್ತವಲ್ಲದ ಅನುಕೂಲತೆ ಪಡೆಯುವಲ್ಲಿ ಸಫಲವಾಗುವುದರೊಂದಿಗೆ ವಾಸ್ತವಾಂಶ ಹಾಗೆಯೇ ಉಳಿಯುತ್ತದೆ.

ಸುಪ್ರೀಂಕೋರ್ಟ್ ಸಿಜೆಐಗೆ ಆಂಧ್ರ ಸಿಎಂ ಜಗನ್ ಪತ್ರ

ಪ್ರಕರಣಗಳ ವಿಚಾರಣೆ ವಿಳಂಬ

ಪ್ರಕರಣಗಳ ವಿಚಾರಣೆ ವಿಳಂಬ

ಮುಖ್ಯಮಂತ್ರಿ ಪತ್ರ ಬರೆದು ಹಸ್ತಕ್ಷೇಪ ಮಾಡಿದ್ದರಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಜನರು ಭಾವಿಸಬಹುದು. ಈ ವರ್ಗಾವಣೆ ಸ್ವಾಭಾವಿಕ ಎಂದು ಹೇಳಿದರೂ, ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರ ವಿರುದ್ಧ ಹೈದರಾಬಾದ್‌ನ ವಿಶೇಷ ನ್ಯಾಯಾಧೀಶರ ಮುಂದೆ ಬಾಕಿ ಉಳಿದಿರುವ ಸಿಬಿಐ ಪ್ರಕರಣಗಳ ವಿಚಾರಣೆ ವಿಳಂಬವಾಗಬಹುದು ಎಂದು ಅವರು ಹೇಳಿದ್ದಾರೆ.

English summary
Andhra High Court justice Rakesh Kumar said CM Jagan Mohan Reddy has gained undue advantage by transfer of Andhra and Telangana High Court Chief Justices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X