ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣಂ ಅನಿಲ ದುರಂತ: 'ಹೈ ಪವರ್ ಕಮಿಟಿ' ರಚನೆ

|
Google Oneindia Kannada News

ಅಮರಾವತಿ, ಜೂನ್ 10: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದ್ದ ಅನಿಲ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಹೈ ಪವರ್ ಕಮಿಟಿ ರಚಿಸಿದೆ.

Recommended Video

ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

ಅನಿಲ ದುರಂತಕ್ಕೆ ಕಾರಣವೇನು, ಈ ಘಟನೆ ಹಿಂದಿರುವ ಸತ್ಯಾಸತ್ಯತೆ ಏನು ಎಂಬುದರ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಿ ಜೂನ್ 22ರೊಳಗೆ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದೆ.

ಅನಿಲ ಸೋರಿಕೆಯಿಂದ ಮೃತಪಟ್ಟವರಿಗೆ 30 ಕೋಟಿ ಬಿಡುಗಡೆ ಮಾಡಿದ ಸಿಎಂ ಜಗನ್ಅನಿಲ ಸೋರಿಕೆಯಿಂದ ಮೃತಪಟ್ಟವರಿಗೆ 30 ಕೋಟಿ ಬಿಡುಗಡೆ ಮಾಡಿದ ಸಿಎಂ ಜಗನ್

ಐಎಎಸ್ ಅಧಿಕಾರಿ, ಸರ್ಕಾರದ ವಿಶೇಷ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ನೇತೃತ್ವದಲ್ಲಿ ಹೈ ಪವರ್ ಕಮಿಟಿ ತನಿಖೆ ನಡೆಸಲಿದೆ.

ಮೇ 7 ರಂದು ವಿಶಾಖಪಟ್ಟಣಂ ಹೊರವಲಯದ ಆರ್ ಆರ್ ವೆಂಕಟಾಪುರಂ ಬಳಿಯ ಎಲ್‌ ಜಿ ಪಾಲಿಮರ್ಸ್ ಎಂಬ ಎಂಎನ್‌ಸಿ ಕಂಪೆನಿಯ ಕಾರ್ಖಾನೆಯಲ್ಲಿ ವಿಷಾನಿಲ ಸ್ಫೋಟವಾಗಿತ್ತು. ಈ ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಸುಮಾರು 300 ಜನರು ಅಸ್ವಸ್ಥರಾಗಿದ್ದರು.

Andhra Govt Constituted A High-power Committee To Probe Vizag Gas Leak Incident.

ಘಟನೆಯಲ್ಲಿ ಸಾವನ್ನಪ್ಪಿದ್ದ ಕುಟುಂಬಗಳಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ತಲಾ ಒಂದು ಕೋಟಿ ಪರಿಹಾರ ಘೋಷಿಸಿದ್ದರು. ಅಸ್ವಸ್ಥಗೊಂಡಿದ್ದವರಿಗೆ ಹಾಗೂ ಘಟನೆಯಿಂದ ಬಾಧಿತರಾದವರಿಗೂ ಪರಿಹಾರ ನೀಡಿದ್ದರು.

English summary
The Government of Andhra Pradesh has constituted a High-Power Committee to probe into the causes behind the gas leak incident at LG Polymers plant in Visakhapatnam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X