ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಪೀಡಿತನ ಬದುಕಿಗೆ ಭರವಸೆ ಬೆಳಕಾದ ಜಗನ್ ಮೋಹನ್ ರೆಡ್ಡಿ

|
Google Oneindia Kannada News

ಅಮರಾವತಿ, ಜೂನ್ 06: ವಿಶಾಖಪಟ್ಟಣಂನ ಶಾರದಾಪೀಠಂಗೆ ತೆರಳಿ ಆಶೀರ್ವಾದ ಪಡೆದು ಕಾರಲ್ಲಿ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕಣ್ಣಿಗೆ ಆ ಪ್ಲೆಕಾರ್ಡ್ ಬೀಳದಿದ್ದರೆ ಬಹುಶಃ ಇಂದು ಕ್ಯಾನ್ಸರ್ ಪೀಡಿತನ ಬಾಳಲ್ಲಿ ಆಶಾಕಿರಣವೇ ನಶಿಸಿಹೋಗುತ್ತಿತ್ತೇನೋ..

ಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್ಸಿನ ಸುಧಾಮೂರ್ತಿಕಿದ್ವಾಯಿ ಆಸ್ಪತ್ರೆಯ ಧರ್ಮಶಾಲೆ ನವೀಕರಿಸಿದ ಇನ್ಫೋಸಿಸ್ಸಿನ ಸುಧಾಮೂರ್ತಿ

ವಿಮಾನ ನಿಲ್ದಾಣ ಬಲಿ ಸಹಾಯ ಕೋರಿ ಪ್ಲೆಕಾರ್ಡ್ ಹಿಡಿದು ರಸ್ತೆ ಬದಿ ನಿಂತಿದ್ದ ಯುವಕರ ಗುಂಪೊಂದನ್ನು ಜಗನ್ ರೆಡ್ಡಿ ನೋಡಿದ್ದಾರೆ. ಕಾರನ್ನು ಹಿಂಬದಿ ಚಲಿಸುವಂತೆ ಸೂಚಿಸಿ, ಆ ಗುಂಪಿನವರನ್ನು ಕರೆದು ಮಾತನಾಡಿಸಿದ್ದಾರೆ. ಕ್ಯಾನ್ಸರ್ ಪೀಡಿತ ಗೆಳೆಯನ ನೆರವಿಗಾಗಿ ಕೋರಿ ಈ ರೀತಿ ನಿಂತಿದ್ದೇವೆ ಎಂದಿದ್ದಾರೆ.

5 ವರ್ಷ ಜಗನ್ ಕುರ್ಚಿ ಮೇಲೆ ಕೂರಲು ಗ್ರಹಗತಿ ತೊಡಕು ; ಆಂಧ್ರದಲ್ಲಿ ರೆಸಾರ್ಟ್ ರಾಜಕೀಯ! 5 ವರ್ಷ ಜಗನ್ ಕುರ್ಚಿ ಮೇಲೆ ಕೂರಲು ಗ್ರಹಗತಿ ತೊಡಕು ; ಆಂಧ್ರದಲ್ಲಿ ರೆಸಾರ್ಟ್ ರಾಜಕೀಯ!

15 ವರ್ಷದ ನೀರಜ್ ಎಂಬ ನಮ್ಮ ಸ್ನೇಹಿತನಿಗೆ ಲ್ಯೂಕೇಮಿಯಾ ಕಾಯಿಲೆ ಇದೆ. ಅವರ ಕುಟುಂಬಕ್ಕೆ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿಯಿಲ್ಲ, ಎಲ್ಲಾ ಕಡೆಗಳಲ್ಲಿ ಪ್ರಯತ್ನ ಪಟ್ಟು ಸೋತಿದ್ದಾರೆ. ಆ ಕುಟುಂಬಕ್ಕೆ ನೆರವಾಗಲು ನಾವು ಈ ಮಾರ್ಗ ಕಂಡುಕೊಂಡಿದ್ದೇವೆ ಎಂದು ಗುಂಪಿನ ಸದಸ್ಯರೊಬ್ಬರು ಮುಖ್ಯಮಂತ್ರಿಗೆ ವಿವರಿಸಿದ್ದಾರೆ. ಇದಾದ ಬಳಿಕ ನೀರಜ್ ಚಿಕಿತ್ಸೆಗೆ ಬೇಕಾದ ಹಣ ಸಂದಾಯ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲೆ ಜಗನ್ ಆದೇಶಿಸಿದ್ದಾರೆ.

ನೋವಿನ ಕಥೆ ಕೇಳಿ ಕಾರಿನಿಂದ ಕೆಳಗಿಳಿದ ಜಗನ್

ನೋವಿನ ಕಥೆ ಕೇಳಿ ಕಾರಿನಿಂದ ಕೆಳಗಿಳಿದ ಜಗನ್

ನೋವಿನ ಕಥೆ ಕೇಳಿ ನಂತರ ಕಾರಿನಿಂದ ಕೆಳಗಿಳಿದ ಜಗನ್ ಅವರು ಚಿಕಿತ್ಸೆ ವಿವರ ಪಡೆದುಕೊಂಡಿದ್ದಾರೆ.ತಕ್ಷಣ ಚಿಕಿತ್ಸೆಗೆ ಆಗುವ ವೆಚ್ಚ ಭರಿಸುವಂತೆ ಸರ್ಕಾರಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿಯನ್ನು ಕರೆದು ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದ್ದಾರೆ.

ಗುಂಟೂರು ಮೆಣಸಿನಕಾಯಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ!ಗುಂಟೂರು ಮೆಣಸಿನಕಾಯಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ!

ಹೈದರಾಬಾದಿನ ಇಂಡೋ-ಅಮೆರಿಕನ್ ಆಸ್ಪತ್ರೆ

ಹೈದರಾಬಾದಿನ ಇಂಡೋ-ಅಮೆರಿಕನ್ ಆಸ್ಪತ್ರೆ

ಹೈದರಾಬಾದಿನ ಇಂಡೋ-ಅಮೆರಿಕನ್ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೀರಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 25 ಲಕ್ಷ ರೂಪಾಯಿ ಖರ್ಚು ತಗುಲಲಿದೆ. ಸದ್ಯ ನೀರಜ್ ಅವರ ಕುಟುಂಬದವರು, ಬಂಧು ಮಿತ್ರರು, ಸ್ನೇಹಿತರು ಸಂಗ್ರಹಿಸಿರುವ ಮೊತ್ತ 40,000 ರು ದಾಟಿರಲಿಲ್ಲ. ಹೀಗಾಗಿ, ಏನಾದರೂ ಉಪಾಯ ಮಾಡಿ, ಯಾರನ್ನಾದರೂ ಕಾಡಿ ಬೇಡಿ ಹಣ ಸಂಗ್ರಹಿಸುವ ಗುರಿ ಹೊಂದಿದ್ದರು.

ವೈಎಸ್‌ಆರ್ ಕಾಂಗ್ರೆಸ್ ನಾಯಕ ಕೆ.ಕೆ.ರಾಜು

ನೀರಜ್ ಕುಟುಂಬದ ಆರ್ಥಿಕ ಸ್ಥಿತಿ: ಜ್ಞಾನಪುರಂ ಎಂಬಲ್ಲಿ ನೀರಜ್ ತಂದೆ ಕೆ ಅಪ್ಪಲ ನಾಯ್ಡು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನೀರಜ್ ಅವರ ತಾಯಿ ತರಕಾರಿ ಮಾರಾಟ ಮಾಡುತ್ತಾರೆ. ನೀರಜ್ ಚಿಕಿತ್ಸೆಗಾಗಿ ಹಣ ಹೊಂದಿಸುವ ಮಾರ್ಗೋಪಾಯದ ಬಗ್ಗೆ ಎಲ್ಲರಲ್ಲೂ ಬೇಡಿಕೆ ಸಲ್ಲಿಸುತ್ತಾ ಬಂದ ಈ ದಂಪತಿಗೆ, ಸ್ನೇಹಿತರಿಗೆ ವಿಮಾನ ನಿಲ್ದಾಣ ಬಳಿ ಪ್ಲೆಕಾರ್ಡ್ ಹಿಡಿದು ನಿಲ್ಲುವ ಐಡಿಯಾ ಕೊಟ್ಟಿದ್ದು ವೈಎಸ್‌ಆರ್ ಕಾಂಗ್ರೆಸ್ ನಾಯಕ ಕೆ.ಕೆ.ರಾಜು.

ಜಗನ್ ಅವರ ನಡೆಗೆ ಪ್ರಶಂಸೆ ಸಿಕ್ಕಿದೆ

ಜಗನ್ ಅವರ ನಡೆಗೆ ಪ್ರಶಂಸೆ ಸಿಕ್ಕಿದೆ

ದೊಡ್ಡ ಪೋಸ್ಟರ್‌, ಪ್ಲೆಕಾರ್ಡ್ ಹಿಡಿದು ವಿಮಾನ ನಿಲ್ದಾಣದ ಬಳಿ ನಿಂತರೆ, ಯಾರಾದರೂ ಸ್ಥಿತಿವಂತರ ಕಣ್ಣಿಗೆ ಬೀಳುತ್ತೀರಾ, ಅದೃಷ್ಟ ಚೆನ್ನಾಗಿದ್ದರೆ ನೆರವು ಸಿಗುತ್ತದೆ ಎಂದಿದ್ದರು. ಅದೃಷ್ಟ ಚೆನ್ನಾಗಿತ್ತು, ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸಿಎಂ ಜಗನ್ ಕಣ್ಣಿಗೆ ಪ್ಲೆಕಾರ್ಡ್ ಕಂಡಿದ್ದು, ಆಂಧ್ರಪ್ರದೇಶ ಸರ್ಕಾರದಿಂದ 20 ಲಕ್ಷ ರು ನೆರವು ಸಿಕ್ಕಿದೆ. ಜಗನ್ ಅವರ ನಡೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶಂಸೆ ಸಿಕ್ಕಿದೆ.

English summary
Andhra Pradesh chief minister Jagan Mogan Reddy on Wednesday helped a cancer patient after seeing him as his convoy was on his way out of the Visakhapatnam airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X