ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಆರ್‌ಸಿ ಗೆ 'ನೋ' ಎಂದ ಮೋದಿ ಮೆಚ್ಚಿನ ಹುಡುಗ ಆಂಧ್ರ ಸಿಎಂ ಜಗನ್

|
Google Oneindia Kannada News

Recommended Video

ಮೋದಿ ನೆಚ್ಚಿನ ಹುಡುಗ ಜಗನ್ ಗೆ NRC ಬೇಡವಂತೆ | MODI | JAGAN |NRC | CAA | ONEINDIA KANNADA

ಅಮರಾವತಿ, ಡಿಸೆಂಬರ್ 24: ಲೋಕಸಭೆಯಲ್ಲಿ ಸಿಎಎ ಗೆ ಬೆಂಬಲ ನೀಡಿದ ಆಂದ್ರ ಸಿಎಂ ಜಗನ್ ಈಗ ತಮ್ಮ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

ಬಹಿರಂಗ ಸಭೆಯಲ್ಲಿ ನಿನ್ನೆ ಮಾತನಾಡಿರುವ ಜಗನ್ ರೆಡ್ಡಿ, 'ಯಾವುದೇ ಕಾರಣಕ್ಕೂ ಎನ್‌ಆರ್‌ಸಿ ಗೆ ಬೆಂಬಲ ಮಾಡುವುದಿಲ್ಲ, ಎನ್‌ಆರ್‌ಸಿ ಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ಆದರೆ ಇದೇ ಜಗನ್ ನೇತೃತ್ವದ ಪಕ್ಷದ ಸಂಸದರು ಲೋಕಸಭೆಯಲ್ಲಿ ಸಿಎಎ ಮಸೂದೆಗೆ ಬೆಂಬಲ ನೀಡಿ ಪರವಾಗಿ ಮತ ಚಲಾಯಿಸಿದ್ದರು.

Andhra CM Jagan Mohan Reddy Said No To NRC In State

ಜಗನ್ ಅವರು ಲೋಕಸಭೆಯಲ್ಲಿ ಬೆಂಬಲ ನೀಡಿ ಈಗ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದಿರುವುದರ ಬಗ್ಗೆ ಪರ-ವಿರೋಧ ಚರ್ಚೆಗಳು ಆಂಧ್ರ ರಾಜಕೀಯದಲ್ಲಿ ಆರಂಭವಾಗಿದ್ದು, 'ಮುಸ್ಲೀಮರನ್ನು ಓಲೈಸಲು ಜಗನ್ ಹೀಗೆ ಮಾತನಾಡುತ್ತಿದ್ದಾರೆ' ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಶಿವಸೇನಾ, ಬಿಜೆಪಿ, ಜೆಡಿಯು, ವೈಎಸ್‌ಆರ್‌ಪಿ ಸೇರಿ ಇನ್ನೂ ಕೆಲವು ಪಕ್ಷಗಳು ಸಿಎಎ ಬೆಂಬಲಿಸಿ ಮತ ಚಲಾಯಿಸಿದ್ದವು. ಆದರೆ ಈಗ ಈ ಎಲ್ಲ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಜಾರಿಗೆ ತರುವುದಿಲ್ಲವೆಂದು ಬಹಿರಂಗವಾಗಿ ಘೊಷಿಸಿವೆ.

English summary
Andhra Pradesh CM Jagan Moham Reddy said no to NRC. Yesterday he was talking in a public meeting and said 'state will not allow NRC '.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X