ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಭಾರೀ ಸಂಚಲನ: ವೈಎಸ್ ಜಗನ್ ಐತಿಹಾಸಿಕ ನಿರ್ಧಾರ?

|
Google Oneindia Kannada News

Recommended Video

ಚಂದ್ರಬಾಬು ನಾಯ್ಡು ವಿರುದ್ಧ ಹೊಸ ಅಸ್ತ್ರ ಪಯೋಗಿಸಿದ ಜಗನ್..? | jagan mohan reddy | Oneindia Kannada

ಆಂಧ್ರಪ್ರದೇಶದ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಹಿಂದಿನ ಎಲ್ಲಾ ಯೋಜನೆಗಳಿಗೆ ತಿಲಾಂಜಲಿ ಇಡುತ್ತಾ ಬರುತ್ತಿರುವ ಸಿಎಂ ವೈಎಸ್ ಜಗನ್ಮೋಹನ್ ರೆಡ್ಡಿ, ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಆಂಧ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

ಅಖಂಡ ಆಂಧ್ರ ವಿಭಜನೆಯಾದ ನಂತರ, ಅಮರಾವತಿಯನ್ನು ರಾಜಧಾನಿಯನ್ನಾಗಿ ನಾಯ್ಡು ಮಾಡಿದ್ದರು. ಗುಂಟೂರು ಜಿಲ್ಲೆಯ ಕೃಷ್ಣ ನದಿಯ ದಕ್ಷಿಣ ದಡದಲ್ಲಿ, ಈ ನಗರದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ನಡೆಸಿದ್ದರು.

ಆಂಧ್ರ ರಾಜಧಾನಿ ಅಮರಾವತಿ ಬದಲಿಗೆ ಬೇರೆಡೆ ಸ್ಥಳ ಹುಡುಕಲಿದ್ದಾರಾ ಜಗನ್?ಆಂಧ್ರ ರಾಜಧಾನಿ ಅಮರಾವತಿ ಬದಲಿಗೆ ಬೇರೆಡೆ ಸ್ಥಳ ಹುಡುಕಲಿದ್ದಾರಾ ಜಗನ್?

ಗುಂಟೂರು ಮತ್ತು ವಿಜಯವಾಡ, ಅಮರಾವತಿಗೆ ಸಮೀಪವಿರುವ ಪ್ರಮುಖ ನಗರಗಳು. ಆಂಧ್ರಪ್ರದೇಶದ ರಾಜಧಾನಿ 'ಅಮರಾವತಿ' ಮೇಲೆ ಚಂದ್ರಬಾಬು ನಾಯ್ಡು ತೋರಿದ್ದ ಭಾರೀ ಅಕ್ಕರೆಯ ವಿಚಾರದಲ್ಲಿ ಸುವಾಸನೆಯೂ ಬರುತ್ತಿತ್ತು, ದುರ್ವಾಸನೆಯೂ ಹೊಡಿಯುತ್ತಿತ್ತು.

ತಿರುಮಲ ಬಸ್ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ, ಬಿಜೆಪಿ ಆಕ್ರೋಶತಿರುಮಲ ಬಸ್ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ, ಬಿಜೆಪಿ ಆಕ್ರೋಶ

ಈಗ, ನಾಯ್ಡು ತೆಗೆದುಕೊಂಡ ನಿರ್ಧಾರಕ್ಕೆಲ್ಲಾ ಮಂಗಳ ಹಾಡಬೇಕು ಎನ್ನುವುದು ಜಗನ್ ಉದ್ದೇಶವೋ ಅಥವಾ ರಾಜ್ಯದ ಅಭಿವೃದ್ದಿಗೆ ಇದರ ಅವಶ್ಯಕತೆಯಿದೆಯೋ, ಒಟ್ಟಿನಲ್ಲಿ, ಆಂಧ್ರದ ಆಡಳಿತ ಯಂತ್ರವನ್ನು ಅಮರಾವತಿಯಿಂದ ಶಿಫ್ಟ್ ಮಾಡಲು ಜಗನ್ ಹೊರಟಿದ್ದಾರೆ ಎನ್ನುವ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿದೆ. ಆಂಧ್ರಕ್ಕೆ ನಾಲ್ಕು ಪ್ರಾದೇಶಿಕ ರಾಜಧಾನಿ, ಅವು ಯಾವುವು?

ಬಿಜೆಪಿ ಸಂಸದ ಟಿ ಜಿ ವೆಂಕಟೇಶ್ ಹೇಳಿಕೆ

ಬಿಜೆಪಿ ಸಂಸದ ಟಿ ಜಿ ವೆಂಕಟೇಶ್ ಹೇಳಿಕೆ

ಈ ನಡುವೆ, ಬಿಜೆಪಿ ಸಂಸದ ಟಿ ಜಿ ವೆಂಕಟೇಶ್ ಅವರು, ಜಗನ್, "ರಾಜ್ಯದ ಒಟ್ಟಾರೆ ಅಭಿವೃದ್ದಿಗಾಗಿ, ನಾಲ್ಕು ಪ್ರಾದೇಶಿಕ ರಾಜಧಾನಿಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ" ಎನ್ನುವ ಸುದ್ದಿಯನ್ನು ಹೊರಗೆಡವಿದ್ದಾರೆ. "ಈ ವಿಚಾರದ ಬಗ್ಗೆ, ಜಗನ್, ಈಗಾಗಲೇ ದೆಹಲಿಯಲ್ಲಿ ಬಿಜೆಪಿಯ ಹಿರಿಯ ಮುಖಂಡರ ಬಳಿ ಚರ್ಚೆ ನಡೆಸಿದ್ದಾರೆ" ಎಂದು ವೆಂಕಟೇಶ್ ಹೇಳಿದ್ದಾರೆ.

ಆಂಧ್ರಪ್ರದೇಶಕ್ಕೆ ನಾಲ್ಕು ರಾಜಧಾನಿಗಳನ್ನು ಮಾಡಲು ಹೊರಟಿರುವ ಜಗನ್

ಆಂಧ್ರಪ್ರದೇಶಕ್ಕೆ ನಾಲ್ಕು ರಾಜಧಾನಿಗಳನ್ನು ಮಾಡಲು ಹೊರಟಿರುವ ಜಗನ್

ತಾನು ಅಧಿಕಾರಕ್ಕೆ ಬಂದಾಗ ಐದೈದು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿದ್ದ ಜಗನ್, ಈಗ, ಆಂಧ್ರಪ್ರದೇಶಕ್ಕೆ ನಾಲ್ಕು ರಾಜಧಾನಿಗಳನ್ನು ಮಾಡಲು ಹೊರಟಿದ್ದಾರೆ. ಅವು, ರಾಜ್ಯದ, ಉತ್ತರ-ಕರಾವಳಿ ಭಾಗಕ್ಕೆ - ವಿಜಯನಗರಂ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಭಾಗಕ್ಕೆ - ಕಾಕಿನಾಡ, ದಕ್ಷಿಣ ಕರಾವಳಿ ಭಾಗಕ್ಕೆ - ಗುಂಟೂರು ಮತ್ತು ರಾಯಲಸೀಮಾಗೆ ಭಾಗಕ್ಕೆ ಕಡಪ.

ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಅತಿ ಸಿರಿವಂತ ಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಅತಿ ಸಿರಿವಂತ ಮಂತ್ರಿ

ಈಗಿನ ರಾಜಧಾನಿ, ಅಮರಾವತಿ, ಗುಂಟೂರು ಜಿಲ್ಲೆಯ ವ್ಯಾಪ್ತಿಗೆ

ಈಗಿನ ರಾಜಧಾನಿ, ಅಮರಾವತಿ, ಗುಂಟೂರು ಜಿಲ್ಲೆಯ ವ್ಯಾಪ್ತಿಗೆ

ಈಗಿನ ರಾಜಧಾನಿ, ಅಮರಾವತಿ, ಗುಂಟೂರು ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ, ಇದುವರೆಗೆ ನಿರ್ಮಿಸಲಾದ ಕಟ್ಟಡಗಳನ್ನು ಈ ಭಾಗದ ರಾಜಧಾನಿಗೆ ಬಳಸಿಕೊಳ್ಳುವ ಯೋಚನೆ ಜಗನ್ ಅವರದ್ದು. ಬಿಜೆಪಿ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವ ಬೋತ್ಸಾ ಸತ್ಯನಾರಾಯಣ, "ಅವರನ್ನೇ ಕೇಳಿ" ಎಂದು ನುಣುಚಿಕೊಂಡಿದ್ದಾರೆ.

ಕೃಷ್ಣಾ ನದಿ ಭಾಗದಲ್ಲಿ ಯಾವಾಗಲೂ ಪ್ರವಾಹದ ಸಮಸ್ಯೆ

ಕೃಷ್ಣಾ ನದಿ ಭಾಗದಲ್ಲಿ ಯಾವಾಗಲೂ ಪ್ರವಾಹದ ಸಮಸ್ಯೆ

ಇತ್ತೀಚೆಗಷ್ಟೇ ತೆಲುಗುದೇಶಂ ಪಕ್ಷದಿಂದ ಬಿಜೆಪಿಗೆ ನಿಯತ್ತು ತೋರಿರುವ ವೆಂಕಟೇಶ್, "ಕೃಷ್ಣಾ ನದಿ ಭಾಗದಲ್ಲಿ ಯಾವಾಗಲೂ ಪ್ರವಾಹದ ಸಮಸ್ಯೆ. ಹೀಗಾಗಿ, ಅಮರಾವತಿಯನ್ನು ರಾಜಧಾನಿಯನ್ನಾಗಿ ಮುಂದುವರಿಸುವ ವಿಚಾರದಲ್ಲಿ ಸಿಎಂ ಜಗನ್ ಸೂಕ್ತ ನಿರ್ಧಾರ ತೆಗೆದುಕೊಂಡು, ಮರುಪರಿಶೀಲನೆ ಮಾಡಬೇಕೆಂದು" ಮನವಿ ಮಾಡಿದ್ದಾರೆ.

ಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳುಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳು

ಚಂದ್ರಬಾಬು ನಾಯ್ಡುಗೆ ಭಾರೀ ಹಿನ್ನಡೆ

ಚಂದ್ರಬಾಬು ನಾಯ್ಡುಗೆ ಭಾರೀ ಹಿನ್ನಡೆ

ಒಂದು ವೇಳೆ, ಆಂಧ್ರ ಪ್ರದೇಶಕ್ಕೆ ನಾಲ್ಕು ರಾಜಧಾನಿ ಮಾಡುವ ನಿರ್ಧಾರಕ್ಕೆ ಜಗನ್ ಬಂದರೆ, ಜೊತೆಗೆ, ಕೇಂದ್ರದಿಂದ ಅದಕ್ಕೆ ಅನುಮತಿ ದೊರೆತರೆ, ಅಮರಾವತಿಯನ್ನು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಮಹತ್ತರವಾದ ಯೋಜನೆಗಳನ್ನು ಸಿದ್ಧಪಡಿಸಿದ್ದ ಚಂದ್ರಬಾಬು ನಾಯ್ಡುಗೆ ಭಾರೀ ಹಿನ್ನಡೆಯಾಗಲಿದೆ.

English summary
Amid uncertainty over the future of Amaravati as Andhra Pradesh's capital, is Chief Minister Y.S. Jagan Mohan Reddy is planning to build four regional capitals?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X