ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಹೋರಾಟಕ್ಕಾಗಿ ಎಂತಹ 'ತ್ಯಾಗ' ಮಾಡಿದ ಚಂದ್ರಬಾಬು ನಾಯ್ಡು ಪತ್ನಿ!

|
Google Oneindia Kannada News

ಅಮರಾವತಿ, ಜ 2: ಹೊಸವರ್ಷದ ದಿನದಂದು ಮಹತ್ವದ ರಾಜಕೀಯ ಬೆಳವಣಿಗೆಯೊಂದಕ್ಕೆ ಅಮರಾವತಿ ಸಾಕ್ಷಿಯಾಗಿದೆ. ಇದು, ರಾಜ್ಯದಲ್ಲಿ ಪಕ್ಷವನ್ನು ಸದೃಢಗೊಳಿಸುವ ಕಣ್ಣೊರೆಸುವ ಕೆಲಸವೇ ಅಥವಾ ನಿಜವಾದ ರೈತರ ಪರ ಕಾಳಜಿಯೋ ಗೊತ್ತಿಲ್ಲ?

ಆದರೂ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪತ್ನಿ, ಎನ್.ಭುವನೇಶ್ವರಿ ರೈತರ ಹೋರಾಟಕ್ಕೆ ತಮ್ಮ ಚಿನ್ನವನ್ನು ತ್ಯಾಗ ಮಾಡಿದ್ದಾರೆ. ಇದು, ಆಂಧ್ರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನ

ಆಂಧ್ರದಲ್ಲಿ ವೈ.ಎಸ್.ಜಗನ್ ಅಧಿಕಾರ ಸ್ವೀಕರಿಸಿದ ನಂತರ, ಹಿಂದಿನ ಸರಕಾರದ ಹಲವು ಯೋಜನೆಗಳನ್ನು ರದ್ದುಪಡಿಸುವುದೋ ಅಥವಾ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿರುವುದು ಗೊತ್ತಿರುವ ವಿಚಾರ.

ಟಿಕ್‌ಟಾಕ್‌ನಲ್ಲಿ ಮುಖ್ಯಮಂತ್ರಿಯನ್ನು ಕೊಂಡಾಡಿದ ಉಪ ಮುಖ್ಯಮಂತ್ರಿ!ಟಿಕ್‌ಟಾಕ್‌ನಲ್ಲಿ ಮುಖ್ಯಮಂತ್ರಿಯನ್ನು ಕೊಂಡಾಡಿದ ಉಪ ಮುಖ್ಯಮಂತ್ರಿ!

ಅದರಂತೇ, ಸದ್ಯ, ರಾಜ್ಯದ ರಾಜಧಾನಿಯಾಗಿರುವ ಅಮರಾವತಿಯ ಜೊತೆಗೆ ಇನ್ನೆರಡು ನಗರಗಳನ್ನು ರಾಜಧಾನಿಯಾಗಿ ಮಾಡುವ ಯೋಜನೆಯನ್ನು ಜಗನ್ ಹಾಕಿಕೊಂಡಿದ್ದಾರೆ. ಇದು ತೆಲುಗುದೇಶಂ ಪಕ್ಷದ ಸಿಟ್ಟಿಗೆ ಕಾರಣ.

ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್

ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್

ಸರಕಾರದ ಈ ನಿರ್ಧಾರವನ್ನು ವಿರೋಧಿಸಿದ್ದ ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ಹಾಗೂ ಶಾಸಕ ಬುದ್ಧ ವೆಂಕಣ್ಣರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ವಿಜಯವಾಡದ ನಿವಾಸದಲ್ಲೇ ನಾಯಕರು ಇರಬೇಕೆಂದು, ಪೊಲೀಸರಿಗೆ ಸರ್ಕಾರವೇ ಸೂಚಿಸಿದ್ದು, ಸಾಕಷ್ಟು ಸುದ್ದಿಯಾಗಿತ್ತು.

ಆಂಧ್ರಕ್ಕೆ ಒಂದಲ್ಲಾ, ಮೂರು ರಾಜಧಾನಿ

ಆಂಧ್ರಕ್ಕೆ ಒಂದಲ್ಲಾ, ಮೂರು ರಾಜಧಾನಿ

ಸರ್ಕಾರದ ಸಚಿವಾಲಯದ ಕಾರ್ಯಗಳನ್ನು ನಿರ್ವಹಿಸಲು ಒಂದು ರಾಜಧಾನಿ, ಶಾಸಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಮತ್ತೊಂದು ರಾಜಧಾನಿ ಹಾಗೂ ಹೈಕೋರ್ಟ್ ನ್ನು ಮತ್ತೊಂದು ರಾಜಧಾನಿಯಲ್ಲಿ ವಿಂಗಡಿಸಲು ತಜ್ಞರ ಸಮಿತಿ, ಜಗನ್ ಸರಕಾರಕ್ಕೆ ಸಲಹೆ ನೀಡಿದೆ.

ಚಿನ್ನವನ್ನು ಹರಾಜಿಗೆ ಇಡಬೇಕೆಂದು ನಾಯ್ಡು, ರೈತರಲ್ಲಿ ಮನವಿ

ಚಿನ್ನವನ್ನು ಹರಾಜಿಗೆ ಇಡಬೇಕೆಂದು ನಾಯ್ಡು, ರೈತರಲ್ಲಿ ಮನವಿ

ಜಗನ್ ಸರಕಾರದ ಕ್ರಮವನ್ನು ವಿರೋಧಿಸಿ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ರೈತರ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಮರಾವತಿಯನ್ನೇ ರಾಜಧಾನಿಯಾಗಿ ಮುಂದುವರಿಸಬೇಕು ಎನ್ನುವ ಹೋರಾಟ ಇದಾಗಿದೆ. ಈ ಪ್ರತಿಭಟನೆಗಳನ್ನು ಆಯೋಜಿಸಲು ತಗಲುವ ಖರ್ಚಿಗಾಗಿ ಎಲ್ಲರೂ ತಮ್ಮತಮ್ಮ ಚಿನ್ನವನ್ನು ಹರಾಜಿಗೆ ಇಡಬೇಕೆಂದು ನಾಯ್ಡು, ರೈತರಲ್ಲಿ ಮನವಿ ಮಾಡಿದ್ದರು.

ರೈತರಿಗಾಗಿ ಇದ್ದಬದ್ದ ಚಿನ್ನವನ್ನೆಲ್ಲಾ ಹರಾಜಿಗಿಟ್ಟ ಚಂದ್ರಬಾಬು ನಾಯ್ಡು ಪತ್ನಿ

ರೈತರಿಗಾಗಿ ಇದ್ದಬದ್ದ ಚಿನ್ನವನ್ನೆಲ್ಲಾ ಹರಾಜಿಗಿಟ್ಟ ಚಂದ್ರಬಾಬು ನಾಯ್ಡು ಪತ್ನಿ

ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರಿಯೂ ಆಗಿರುವ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ, ರೈತರ ಹೋರಾಟಕ್ಕಾಗಿ ತಮ್ಮ ಚಿನ್ನವನ್ನೂ ಹರಾಜಿಗೆ ಇಡುವ ಮೂಲಕ, ಭಾರೀ ಸುದ್ದಿಯಾಗಿದ್ದಾರೆ.

ರೈತರ ಹೋರಾಟಕ್ಕಾಗಿ ಭಾರೀ ತ್ಯಾಗಕ್ಕೆ ಮುಂದಾದ ಚಂದ್ರಬಾಬು ನಾಯ್ಡು ಪತ್ನಿ

ರೈತರ ಹೋರಾಟಕ್ಕಾಗಿ ಭಾರೀ ತ್ಯಾಗಕ್ಕೆ ಮುಂದಾದ ಚಂದ್ರಬಾಬು ನಾಯ್ಡು ಪತ್ನಿ

ಉದ್ಯಮಿ, ಹೆರಿಟೇಜ್ ಫುಡ್ಸ್ ಮುಖ್ಯಸ್ಥೆಯಾಗಿರುವ ನಾಯ್ಡು ಅವರ ಪತ್ನಿ, ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ಅಪರೂಪ. ಆದರೆ, ಅಮರಾವತಿಯನ್ನೇ ರಾಜಧಾನಿಯನ್ನಾಗಿ ಮುಂದುವರಿಸಬೇಕೆನ್ನುವ ಪತಿಯ ಹೋರಾಟಕ್ಕೆ ಅವರೂ ಕೈಜೋಡಿಸಿದ್ದಾರೆ. ಆಂಧ್ರದ ಹಳ್ಳಿಹಳ್ಳಿಗೂ ಹೋಗುತ್ತಿದ್ದಾರೆ.

English summary
Amaravati farmers' protest: Former CM and Head Of TDP, Chandrababu Naidu's wife Bhuvaneshwari donates her gold bangles for auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X