• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಯಾಣಿಕರಿಗೆ ಸೂಚನೆ: ಈ ರೈಲು ಕ್ಯಾನ್ಸಲ್, ಆ ರೈಲುಮಾರ್ಗ ಬದಲು

|

ಹೈದರಾಬಾದ್, ಡಿ. 18: ದಕ್ಷಿಣ ಮಧ್ಯ ವಲಯ ರೈಲ್ವೆ ವಿಭಾಗದಿಂದ ರೈಲು ಮಾರ್ಗ ಬದಲು, ರೈಲ್ವೆ ಸೇವೆ ರದ್ದುಗೊಳಿಸಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಗುಂತಕಲ್ ಡಿವಿಷನ್ -ಗೂಡೂರು-ತಿರುಪತಿ ವಿಭಾಗದಲ್ಲಿರುವ ತಿರುಚಾನೂರು ಬಳಿ ಸುರಕ್ಷತೆಗೆ ಸಂಬಂಧಿಸಿದಂತೆ ಉನ್ನತೀಕರಣ ಕಾಮಗಾರಿ ಜಾರಿಯಲ್ಲಿದೆ. ಹೀಗಾಗಿ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲ ರೈಲುಗಳು ರದ್ದಾಗಿವೆ ಎಂದು ದಕ್ಷಿಣ ಮಧ್ಯ ವಲಯ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದ್ದಾರೆ.

ರದ್ದಾಗಿರುವ ರೈಲು ಮಾರ್ಗಗಳು:

ರೈಲು ಸಂಖ್ಯೆ: 08479

1. ಭುವನೇಶ್ವರ-ತಿರುಪತಿ ಸ್ಪೆಷಲ್ ಎಕ್ಸ್ ಪ್ರೆಸ್

* ಡಿಸೆಂಬರ್ 19, 2020ರಂದು ಭುವನೇಶ್ವರದಿಂದ ಹೊರಡಲು ನಿಗದಿಯಾಗಿತ್ತು. ಆದರೆ, ಈಗ ರದ್ದು ಮಾಡಲಾಗಿದೆ.

2. ರೈಲು ಸಂಖ್ಯೆ: 08480

ತಿರುಪತಿ -ಭುವನೇಶ್ವರ ಸ್ಪೆಷಲ್ ಎಕ್ಸ್ ಪ್ರೆಸ್

* ಡಿಸೆಂಬರ್ 20, 2020ರಂದು ತಿರುಪತಿಯಿಂದ ಹೊರಡಲು ನಿಗದಿಯಾಗಿದ್ದ ರೈಲು ರದ್ದು ಮಾಡಲಾಗಿದೆ.

***

ಮಾರ್ಗ ಬದಲಾವಣೆಯಾದ ರೈಲು:

1. ರೈಲು ಸಂಖ್ಯೆ: 02890

ಯಶವಂತಪುರ -ಟಾಟಾ ಸ್ಪೆಷಲ್ ಎಕ್ಸ್ ಪ್ರೆಸ್

* ಡಿಸೆಂಬರ್ 21, 2020ರಂದು ಯಶವಂತಪುರದಿಂದ ಹೊರಡಲು ನಿಗದಿಯಾಗಿದ್ದ ರೈಲು ಮಾರ್ಗ ಬದಲಾಗಿದ್ದು, ಕಾಟ್ಪಡಿ, ಮೆಲ್ಪಾಕ್ಕಂ, ರೇಣಿಗುಂಟ, ಗೂಡೂರು ತಲುಪಲಿದೆ. ತಿರುಪತಿಗೆ ಹೋಗದೆ ಗೂಡೂರು ಸೇರಲಿದೆ.

***

2. ರೈಲು ಸಂಖ್ಯೆ: 02836

ಯಶವಂತಪುರ -ಹಾತಿಯಾ ಸ್ಪೆಷಲ್ ಎಕ್ಸ್ ಪ್ರೆಸ್

* ಡಿಸೆಂಬರ್ 25, 2020ರಂದು ಯಶವಂತಪುರದಿಂದ ಹೊರಡಲು ನಿಗದಿಯಾಗಿದ್ದ ರೈಲು ಕೂಡಾ ಚಿತ್ತೂರು, ತಿರುಪತಿ ತಲುಪದೆ ಮಾರ್ಗ ಬದಲಾಯಿಸಿ ಕಾಟ್ಪಡಿ, ಮೆಲ್ಪಾಕ್ಕಂ, ರೇಣಿಗುಂಟ, ಗೂಡೂರು ತಲುಪಲಿದೆ.

ಪ್ರಯಾಣಿಕರ ಸುರಕ್ಷತೆ ಅಗತ್ಯ ಸುಧಾರಣಾ ಕಾಮಗಾರಿಗಳನ್ನು ಈ ಮಾರ್ಗಗಳಲ್ಲಿ ಕೈಗೊಳ್ಳಲಾಗಿದ್ದು, ಹೀಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ವಲಯದ ಅಧಿಕಾರಿಗಳು ಕೋರಿದ್ದಾರೆ.

English summary
Alert to Railway passengers: Yesvantapur- Tata special express diversion, Trains On Gudur-Tirupati Route Cancelled
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X