ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್' ನಟಿ ರೋಜಾಗೆ ಸಿಕ್ತು ಸಚಿವ ಸ್ಥಾನ

|
Google Oneindia Kannada News

ಅಮರಾವತಿ, ಏಪ್ರಿಲ್ 11: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ನಾನು ವೈಎಸ್ಸಾರ್ ಪಕ್ಷದ 'ಲಕ್ಕಿ ಚಾರ್ಮ್' ಎಂದು ಹೇಳಿಕೊಳ್ಳುತ್ತಿದ್ದ ರೋಜಾ ಸೆಲ್ವಮಣಿ ಇಂದು ಸಕತ್ ಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.

ರಾಜಕೀಯ ಸುದ್ದಿ, ಬೆಳವಣಿಗೆ ಆಸಕ್ತರ ಕುತೂಹಲ ಕೆರಳಿಸಿದ್ದ ಜಗನ್ ಸಚಿವ ಸಂಪುಟ ಪುನರ್ ರಚನೆ ಇಂದು ನೆರವೇರಿದೆ. ಸಂಪುಟ ಪುನರ್ ರಚನೆಗೂ ಮುನ್ನ ಸಚಿವರೆಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಸರಿ ಸುಮಾರು 24 ಮಂದಿ ಸಚಿವರ ರಾಜೀನಾಮೆಯನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಆಂಧ್ರದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದ್ರನ್ ಅವರು ಎಲ್ಲರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ ಹೊಸದಾಗಿ ಮತ್ತೊಮ್ಮೆ ಜಗನ್ ತಮ್ಮ ಸಂಪುಟ ರಚಿಸಿದ್ದಾರೆ. ಏಪ್ರಿಲ್ 11ರಂದು ಹೊಸ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ

ಭರವಸೆ ನೀಡಿದಂತೆ ಎಲ್ಲಾ ಸಮುದಾಯ, ಹೊಸ ಜಿಲ್ಲೆ, ಹೊಸ ಮುಖಗಳಿಗೆ ಸಿಎಂ ಜಗನ್ ಆದ್ಯತೆ ನೀಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 25 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ, ಅಲ್ಪ ಸಂಖ್ಯಾತರು ಹೀಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕರಾದವರಿಗೆ ಆದ್ಯತೆ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ವೈಯಕ್ತಿಕ ನಿಂದನೆ, ನೋವು, ಅವಮಾನಗಳನ್ನು ಸಹಿಸಿಕೊಂಡು ತಾಳ್ಮೆಯಿಂದ ಕಾದಿದ್ದ ರೋಜಾಗೆ ಇಂದು ಕೊನೆಗೂ ಸಚಿವ ಸ್ಥಾನ ಸಿಕ್ಕಿದೆ. ಮೂಲಗಳ ಪ್ರಕಾರ ಭರ್ಜರಿ ಖಾತೆಯೂ ದಕ್ಕುವ ಸಾಧ್ಯತೆಯಿದೆ.

ಜಗನ್ ಕೈಗೆ ಮುತ್ತಿಕ್ಕಿದ ರೋಜಾ

ಜಗನ್ ಕೈಗೆ ಮುತ್ತಿಕ್ಕಿದ ರೋಜಾ

ಪೂರ್ವ ನಿಯೋಜಿತ ಮುಹೂರ್ತದ ಪ್ರಕಾರ ಸರಿಯಾಗಿ 11.31ಕ್ಕೆ ಸಚಿವರ ಪ್ರಮಾಣ ವಚನ ಆರಂಭವಾಯಿತು. ಸಚಿವರ ಪ್ರಮಾಣ ವಚನ ಅಕಾರಾದಿಯಲ್ಲಿ ಮುಂದುವರಿಯಿತು. ಅಂಬಟಿ ರಾಂಬಾಬು ಅವರು ಮೊದಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ತಮ್ಮಿನೇನಿ ಕೂಡ ಗೈರು ಹಾಜರಾಗಿದ್ದರು. ಸಚಿವ ಸ್ಥಾನ ಸಿಗಲಿಲ್ಲ ಎಂದು ಸಿಟ್ಟಿಗೆದ್ದ ಸುಚರಿತಾ, ಬಾಲಿನೇನಿ ಗೈರು ಹಾಜರಾಗಿದ್ದರು. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೋಜಾ ಭಾವುಕರಾಗಿದ್ದರು. ಆರ್ ಕೆ ರೋಜಾ ಎಂಬ ಹೆಸರಿನ ನಾನು ಎಂದು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಕಣ್ಣೀರನ್ನು ಕಂಟ್ರೋಲ್ ಮಾಡುತ್ತಾ ಜಗನ್ ಬಳಿ ತೆರಳಿ ಕಾಲಿಗೆರಗಿ, ಜಗನ್ ಕೈ ಹಿಡಿದು ಪ್ರೀತಿಯಿಂದ ಮುತ್ತಿಕ್ಕಿ, ಸಚಿವ ಸ್ಥಾನ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.

ನಾನು ಗೋಲ್ಡನ್ ಲೆಗ್ ಎಂದ ರೋಜಾ

ನಾನು ಗೋಲ್ಡನ್ ಲೆಗ್ ಎಂದ ರೋಜಾ

2009ರಲ್ಲಿ ತೆಲುಗುದೇಶಂ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದ ರೋಜಾ ಅವರು ಆ ವರ್ಷ ಸೋಲು ಕಂಡಿದ್ದರಿಂದ 'ಐರನ್ ಲೆಗ್ ' ಎಂದು ಎಲ್ಲರೂ ಜರೆದಿದ್ದರು. ನಂತರ ತೆಲುಗುದೇಶಂ ಪಕ್ಷವನ್ನು ಆಗಸ್ಟ್ 2009ರಲ್ಲಿ ತೊರೆದು ತಕ್ಷಣವೇ ವೈಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಆದರೆ, ತಕ್ಷಣಕ್ಕೆ ಆಕೆಗೆ ಸಚಿವ ಸ್ಥಾನವನ್ನು ಜಗನ್ ಕಲ್ಪಿಸಲಿಲ್ಲ, ನಿಗಮ ಮಂಡಳಿ ಅಧ್ಯಕ್ಷೆ ಸ್ಥಾನ ಕಲ್ಪಿಸಿದ್ದರು. ರೋಜಾ ಅವರನ್ನು ಆಂಧ್ರಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ(APIIC) ಚೇರ್ಮನ್ ಆಗಿ ನೇಮಿಸಲಾಯಿತು.

ಆಂಧ್ರಪ್ರದೇಶದಲ್ಲಿ ಯಾವುದೇ ಮಟ್ಟದ ಕೈಗಾರಿಕೆ ಹೊಸದಾಗಿ ಸ್ಥಾಪಿಸಬೇಕಾದರೆ ಅಥವಾ ಹಳೆ ಕಂಪನಿ ಲೈಸನ್ಸ್ ನವೀಕರಿಸಬೇಕಾದರೆ ಎಪಿಐಐಸಿ ಚೇರ್ಮನ್ ಅನುಮತಿ ಅಗತ್ಯ. ಲೈಸನ್ಸ್ ಮಾತ್ರವಲ್ಲದೆ, ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ಹೊಣೆ ಕೂಡಾ ಈ ನಿಗಮದಡಿಯಲ್ಲಿ ಬರಲಿದೆ. ಜಮೀನು, ವಿದ್ಯುತ್, ಜಲ ಪೂರೈಕೆ ಹೀಗೆ ವಿವಿಧ ಇಲಾಖೆ ಜತೆ ಎಪಿಐಐಸಿ ಕಾರ್ಯ ನಿರ್ವಹಿಸುತ್ತದೆ.

ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಾತಿ

ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಾತಿ

ಆಂಧ್ರಪ್ರದೇಶದ ಔದ್ಯೋಗಿಕ ವಲಯದಲ್ಲಿ ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತಂದಿರುವ ಜಗನ್ ರೆಡ್ಡಿ ಅವರು ಇಲಾಖೆಗೆ ಆದೇಶವನ್ನು ಕಳಿಸಿದ್ದಾರೆ. ಖಾಸಗಿ ಸಂಸ್ಥೆ, ಕಾರ್ಖಾನೆ, ಸರ್ಕಾರ-ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯ ಯುವ ಪ್ರತಿಭಾವಂತರಿಗೆ ಶೇ.75 ಮೀಸಲಾತಿ ನೀಡಬೇಕಾಗುತ್ತದೆ.

ಅನಂತಪುರದಲ್ಲಿ ಸೆಲ್ಟೋಸ್ ಕಾರು ಉತ್ಪಾದನೆಯನ್ನು ಕಿಯಾ ಮೋಟರ್ಸ್ ಇಂಡಿಯಾ ಆರಂಭಿಸಲು ರೋಜಾ ಕಾರಣರಾದರು. ವಿಶ್ವದ 8 ನೇ ಅತಿದೊಡ್ಡ ಆಟೋಮೇಕರ್ ಕಂಪನಿಯಾಗಿರುವ ಕಿಯಾ ಮೋಟರ್ಸ್ ಹಾಗೆ ನೋಡಿದರೆ ಕರ್ನಾಟಕದ ಪಾಲಾಗಬೇಕಿತ್ತು. ಆದರೆ, ಗಡಿ ಭಾಗದ ಆಂಧ್ರ ಜಿಲ್ಲೆಗೆ ವರದಾನವಾಯಿತು.

ಸಿನಿಮಾಕ್ಕೆ ಸದ್ಯಕ್ಕೆ ಬೈ ಬೈ

ಸಿನಿಮಾಕ್ಕೆ ಸದ್ಯಕ್ಕೆ ಬೈ ಬೈ

ಸಿನಿಮಾ ಹಾಗೂ ಜನಪ್ರಿಯ ಕಾರ್ಯಕ್ರಮ ಜಬರ್ದಸ್ತ್ ಜಡ್ಜ್ ಸ್ಥಾನಕ್ಕೆ ರೋಜಾ ಬೈ ಬೈ ಹೇಳಿದ್ದಾರೆ. ಸದ್ಯ ಬಣ್ಣದ ಬದುಕು, ಶೂಟಿಂಗ್ ಮರೆತು ಜಗನ್ ಆಶಯದಂತೆ ಜನತೆಗಾಗಿ ಕಾರ್ಯ ನಿರ್ವಹಿಸುವುದಾಗಿ ರೋಜಾ ಘೋಷಿಸಿದ್ದಾರೆ. ಕೊನೆ ಕ್ಷಣದ ತನಕ ಸಚಿವ ಸ್ಥಾನ ಸಿಗುವ ಬಗ್ಗೆ ಸಕತ್ ಟೆನ್ಶನ್ ಇತ್ತು. 2024ರಲ್ಲಿ ಅಲ್ಲ ಮುಂದಿನ 20 ವರ್ಷ ಜಗನ್ ಅವರೇ ಆಂಧ್ರದ ಸಿಎಂ ಆಗಿರಲಿದ್ದಾರೆ. ಟಿಡಿಪಿಗೆ ಕೇಡುಗಾಲ ಇನ್ನೇನು ಶುರುವಾಗಲಿದೆ ಎಂದು ಎಂದಿನಂತೆ ತಮ್ಮ ಫೈರ್ ಬ್ರ್ಯಾಂಡ್ ಧಾಟಿಯಲ್ಲಿ ರೋಜಾ ಗುಟುರು ಹಾಕಿದರು. ಯಾವುದೇ ಖಾತೆ ಸಿಕ್ಕರೂ ಓಕೆ ಎಂದಿರುವ ರೋಜಾಗೆ ಗೃಹ ಖಾತೆ ಸಿಗುವ ಬಗ್ಗೆ ಸುದ್ದಿ ಹಬ್ಬಿದೆ. ಸಂಜೆ ವೇಳೆಗೆ ನೂತನ ಸಚಿವರುಗಳ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.

Recommended Video

ಬಂದೇ ಬಿಡ್ತು RCB vs CSK ಪಂದ್ಮ | Oneindia Kannada

English summary
Andhra Pradesh CM YS Jaganmohan Reddy has finalized the list of new Cabinet ministers. Actress Turned Politician Roja is among the new ministers who take oath as ministers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X