ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವರ್ ಸ್ಟಾರ್ ಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷವೇ ಗೊತ್ತಿಲ್ಲ!

|
Google Oneindia Kannada News

ಅಮರವಾತಿ, ಸೆ. 15: ನಟ, ರಾಜಕಾರಣಿ, ಜನಸೇನಾ ಪಕ್ಷದ ಸ್ಥಾಪಕ, ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹೇಳಿಕೆಯೊಂದು ಹಾಸ್ಯಕ್ಕೀಡಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷ ತಪ್ಪು ಹೇಳಿದ್ದಕ್ಕೆ ಟ್ರಾಲ್ ಆಗಿದ್ದಾರೆ.

ಇತ್ತೀಚಿನ ಭಾಷಣವೊಂದರಲ್ಲಿ ಭಾರತಕ್ಕೆ 1940ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಯಿತು ಎಂದು ಹೇಳಿದ್ದಾರೆ.

ಆಂಧ್ರಕ್ಕೆ 'ಕಿಂಗ್' ಆಗಲು ಹೊರಟ ಪವನ್ ಕಲ್ಯಾಣ್ ಗೆ ನಿರಾಶೆಆಂಧ್ರಕ್ಕೆ 'ಕಿಂಗ್' ಆಗಲು ಹೊರಟ ಪವನ್ ಕಲ್ಯಾಣ್ ಗೆ ನಿರಾಶೆ

ಆಂಧ್ರಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ 100 ದಿನಗಳ ಆಡಳಿತದ ಬಗ್ಗೆ ಟೀಕೆ ಮಾಡುವ ಭರದಲ್ಲಿ ಸ್ವಾತಂತ್ರ್ಯದ ಬಗ್ಗೆ ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಕಡ್ಡಾಯ ಶಿಕ್ಷಣ ವ್ಯವಸ್ಥೆ 1940ರಿಂದ ಜಾರಿಯಲ್ಲಿತ್ತು. ನಾವು ಸ್ವತಂತ್ರ ಪಡೆದ ದಿನದಿಂದ ಈ ಬಗ್ಗೆ ಜನಕ್ಕೆ ತಿಳಿದಿದೆ. ಜಗನ್ ಸರ್ಕಾರದ 'ಅಮ್ಮ ವೋಡಿ' ಯೋಜನೆ ಅಗತ್ಯವಿಲ್ಲ ಎಂದಿದ್ದಾರೆ.

Actor turned politician Pawan Kalyan trolled for his statement on Independence day

ಅಮ್ಮ ವೋಡಿ ಯೋಜನೆಯಡಿಯಲ್ಲಿ ಕುಟುಂಬದ ತಾಯಿಯೊಬ್ಬರಿಗೆ ವಾರ್ಷಿಕವಾಗಿ 15000 ರು ಆರ್ಥಿಕ ನೆರವು ಶಿಕ್ಷಣಕ್ಕೆ ಒತ್ತು ನೀಡಲು ಜಗನ್ ಸರ್ಕಾರ ಮುಂದಾಗಿದೆ.

ಸ್ವಾತಂತ್ರ್ಯ ವರ್ಷವನ್ನು ತಪ್ಪಾಗಿ ಹೇಳಿದ್ದಲ್ಲದೆ, 2010ರ ಆರ್ಟಿಕಲ್ 21(ಎ) ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ಬಂದಿತು ಎಂದಿದ್ದಾರೆ.

"12ನೇ ತರಗತಿ ಮಾತ್ರ ನೀವು ಓದಿದ್ದೀರಾ ಎಂಬುದು ತಿಳಿದಿದೆ, ಆದರೆ, ಸಾಮಾನ್ಯ ಜ್ಞಾನವನ್ನು ಶಾಲೆಯಿಂದಲೇ ಕಲಿಯಬೇಕಾಗಿಲ್ಲ" ಎಂದು ಪವನ್ ಕಲ್ಯಾಣ್ ರನ್ನು ಗೇಲಿ ಮಾಡಲಾಗಿದೆ.

English summary
Actor turned politician Pawan Kalyan trolled for his statement that India got Independence in 1940.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X