ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನಿದು ಟ್ವಿಸ್ಟ್? ಸದ್ದಿಲ್ಲದೆ ನಡೆದ ನಾಯ್ಡು-ಡಿಎಂಕೆ ನಾಯಕರ ಭೇಟಿ!

|
Google Oneindia Kannada News

Recommended Video

ಎಲ್ಲರಲ್ಲೂ ಕುತೂಹಲ ಕೆರಳಿಸಿದೆ ಚಂದ್ರಬಾಬು ನಾಯ್ಡು ನಡೆ..! | Oneindia Kannada

ಅಮರಾವತಿ, ಮೇ 16: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ, 'ಹೋದ ದಾರಿಗೆ ಸುಂಕವಿಲ್ಲ' ಎಂದು ಬರಿಗೈಲಿ ವಾಪಸ್ಸಾದ ಮೇಲೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಘಟನೆಯೊಂದು ನಡೆದಿದೆ, ಸದ್ದಿಲ್ಲದೆ!

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೆಸಿಆರ್ ಭೇಟಿಯ ಬಳಿಕ ಡಿಎಂಕೆ ನಾಯಕ, ಕಜಾಂಚಿ ದುರೈಮುರುಗನ್ ಅವರು ಟಿಡಿಪಿ ನಾಯಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಇಬ್ಬರ ಭೇಟಿಯೂ ಅತ್ಯಂತ ರಹಸ್ಯವಾಗಿ ನಡೆದಿದ್ದು, ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೂ ದುರೈಮುಗನ್ ಉತ್ತರಿಸಲು ನಿರಾಕರಿಸಿದ್ದಾರೆ. ಈ ನಡೆ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ: ಬಾಂಬ್ ಸಿಡಿಸಿದ ಪಕ್ಷಾಧ್ಯಕ್ಷೆ!ಬಿಜೆಪಿ ನಾಯಕರೊಂದಿಗೆ ಸ್ಟಾಲಿನ್ ಮಾತುಕತೆ: ಬಾಂಬ್ ಸಿಡಿಸಿದ ಪಕ್ಷಾಧ್ಯಕ್ಷೆ!

"ಖಾಸಗಿ ಭೇಟಿ" ಎಂದು ಈ ಭೇಟಿಯನ್ನು ಉಭಯ ನಾಯಕರೂ ಕರೆದಿದ್ದಾರೆ. ದುರೈಮುರುಗನ್ ಅವರು ಅಮರಾವತಿಯಲ್ಲಿ ನಾಯ್ಡು ಅವರನ್ನು ಭೇತಿ ಮಾಡುವ ಸಂದರ್ಭದಲ್ಲಿ ಮುರುಗನ್ ಅವರ ಕುಟುಂಬಸ್ಥರೂ ಜೊತೆಯಾಗಿದ್ದರು. ಆದ್ದರಿಂದ ಇಬ್ಬರ ನಡುವೆ ರಾಜಕೀಯದ ಮಾತುಕತೆ ನಡೆದಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.

A new twist to national politics: DMK leader meets Chandrababu Naidu in Amarawati

ಆದರೆ ದುರೈಮುರುಗನ್ ಅವರನ್ನು ಮಾತುಕತೆಗೆ ಸ್ವತಃ ನಾಯ್ಡು ಅವರೇ ಆಮಂತ್ರಿಸಿದ್ದಾರೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!ಕೆಸಿಆರ್ ಗೆ ಸ್ಟಾಲಿನ್ ರಿಂದ ಮತ್ತೆ ಮುಖಭಂಗ: ಹೋದ ದಾರಿಗೆ ಸುಂಕವಿಲ್ಲ!

ಮೇ 13 ರಂದು ಎಂಕೆ ಸ್ಟಾಲಿನ್ ಅವರನ್ನು ಕೆ ಚಂದ್ರಶೇಖರ್ ರಾವ್ ಅವರು ಭೇತಿ ಮಾಡಿ, ತೃತೀಯ ರಂಗದ ಕುರಿತು ಪ್ರಸ್ತಾಪಿಸಿದ್ದರು. ಆದರೆ ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಬೆಂಬಲ ನೀಡುವ ತನ್ನ ನಿರ್ಧಾರದಿಂದ ಆಚೆ ಬರುವುದಿಲ್ಲ ಎಂದು ಸ್ಟಾಲಿನ್ ಖಡಕ್ಕಾಗಿ ಪ್ರತಿಕ್ರಿಯಿಸಿದ್ದರು.

English summary
In a new twist to national politics, DMK treasurer and senior party leader Duraimurugan meets TDP leader And AP CM N Chandrababu Naidu in Amaravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X