ಬಜೆಟ್ಗೂ ಮುನ್ನ ಈ ರಾಜ್ಯದ ಸರ್ಕಾರಿ ಸಿಬ್ಬಂದಿಗಳಿಗೆ ಸಂಬಳ ಏರಿಕೆ
ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ನಂತರ ತುಟ್ಟಿಭತ್ಯೆ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ಕೇಂದ್ರ ಬಜೆಟ್ 2022ರಲ್ಲಿ ಈ ಬಗ್ಗೆ ಘೋಷಣೆ ಸಾಧ್ಯತೆಯಿದೆ. ಆದರೆ, ಇದಕ್ಕೂ ಮುನ್ನ ಕೆಲ ರಾಜ್ಯಗಳು ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಏರಿಕೆ, ನಿವೃತ್ತಿ ವಯೋಮಿತಿ ಏರಿಕೆ ಮಾಡಿವೆ.
ಕೊರೊನಾವೈರಸ್ ಸಾಂಕ್ರಾಮಿಕದ ಕಾಲದಲ್ಲಿ ಕಳೆದ ಎರಡು ವರ್ಷಗಳಿಂದ ಡಿಎ ಹೆಚ್ಚಳ ಮಾಡಲಾಗಿರಲಿಲ್ಲ. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು [ಡಿಆರ್] 01.01.2020, 01.07.2020 ಮತ್ತು 01.01.2021, ಸ್ಥಗಿತಗೊಳಿಸಲಾಗಿತ್ತು.
ಕೇಂದ್ರ ಸರ್ಕಾರಿ ನೌಕರರಿಗೆ DA ಪರಿಹಾರ ಜೊತೆಗೆ ಸಂಬಳ ಏರಿಕೆ?
ಕೇಂದ್ರ ಸರ್ಕಾರದ ನಿರ್ಧಾರದಂತೆ ಹಲವು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆ ತಡೆ ಹಿಡಿದಿದ್ದವು ಜೊತೆಗೆ ಕೇಂದ್ರ ಬಜೆಟ್ ಮೂಲಕ ಸಿಗುವ ಅನುದಾನ, ವಿಶೇಷ ಪ್ಯಾಕೇಜ್ ಅನುಗುಣವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದವು.
ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ರೈಲ್ವೆ ಇಲಾಖೆಯಲ್ಲಿ ಮಾತ್ರ ಎರಡು ಪಾಳಿಯಲ್ಲಿ ಕೆಲಸ ಮಾಡಲು ಹೊಸ ಸಚಿವರು ಕೆಲವು ವಿಭಾಗಕ್ಕೆ ಅನ್ವಯವಾಗುವಂತೆ ಆದೇಶ ನೀಡಿದ್ದರು. ಇನ್ನು ವಾರದಲ್ಲಿ ಎರಡು ದಿನ ರಜೆ ಬದಲಿಗೆ ಮೂರು ದಿನ ರಜೆ ಅಥವಾ ವಾರಕ್ಕೆ 4 ದಿನಗಳು ಮಾತ್ರ ಕಾರ್ಯ ನಿರ್ವಹಿಸುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಇದು ಸದ್ಯಕ್ಕೆ ಕಾರ್ಯಸಾಧುವಲ್ಲ ಎಂದು ಕೈಬಿಡಲಾಗಿದೆ.
ಆಂಧ್ರಸರ್ಕಾರದ ಸರ್ಕಾರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಸಿಗುತ್ತಿದೆ. ನಿವೃತ್ತಿ ವಯೋಮಿತಿಯನ್ನು 60 ರಿಂದ 62ಕ್ಕೇರಿಸಲಾಗಿದೆ. ಸಂಬಳ ಕೂಡಾ ಶೇ 23.39ಕ್ಕೇರಿಸಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಸರ್ಕಾರ ಆದೇಶ ಹೊರಡಿಸಿದೆ.
ಬಜೆಟ್ 2022: ಟಿಡಿಎಸ್ ಕಡಿತ ಮಿತಿ, ಐಟಿ ಸ್ಲ್ಯಾಬ್ ವ್ಯತ್ಯಯ ಸಾಧ್ಯವೇ?
ಸಂಬಳ ಏರಿಕೆ ಏನೇನು ಬದಲಾವಣೆ
ಜುಲೈ 1ರಿಂದ ಅನ್ವಯವಾಗುವಂತೆ ಸಂಬಳ ಏರಿಕೆ ಅನ್ವಯವಾಗಲಿದೆ. ಆರ್ಥಿಕ ಸೌಲಭ್ಯಗಳು ಏಪ್ರಿಲ್ 1 ರಿಂದ ಸಿಗಲಿದೆ. ಜನವರಿ 2022ರ ಹೆಚ್ಚುವರಿ ಸಂಬಳ ಸಿಗಲಿದೆ. 10,247 ರು ವಾರ್ಷಿಕವಾಗಿ ಹೆಚ್ಚುವರಿ ಸಂಬಳ ಸಿಗಲಿದೆ. ಬಜೆಟ್ 2022ನಂತರ ತುಟ್ಟಿಭತ್ಯೆ, ತುಟ್ಟಿಭತ್ಯೆ ಪರಿಹಾರ, ವಿಮೆ ಪರಿಹಾರ ಮುಂತಾದ ಸೌಲಭ್ಯಗಳು ಸಿಗಲಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ಘೋಷಿಸಿದೆ.
ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.34 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ4.59 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ 3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಜುಲೈ 2021ಕ್ಕೆ ಹೊಂದಾಣಿಕೆ ರಹಿತ ಸಿಪಿಐ ಶೇ 5.4ರಷ್ಟಿದೆ.
ಸಂಸತ್ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಲಿದೆ. ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಡ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ 1 ರಿಂದ ಏಪ್ರಿಲ್ 8 ರ ತನಕ ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ.