ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನಿಗಾಗಿ ಲಾಕ್‌ಡೌನ್‌ ಲೆಕ್ಕಿಸದ ತಾಯಿ ಬೈಕಿನಲ್ಲಿ 1400 ಕಿ.ಮೀ ಪ್ರಯಾಣ

|
Google Oneindia Kannada News

ಆಂಧ್ರಪ್ರದೇಶ, ಏಪ್ರಿಲ್ 10: ಕೊರೊನಾ ವೈರಸ್‌ ಹರಡುವಿಕೆಯ ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಘೋಷಣೆ ಮಾಡಿದೆ. ಯಾವುದೇ ಪೂರ್ವ ಸುಳಿವು ನೀಡದೆಯೇ ಲಾಕ್‌ಡೌನ್‌ ಪ್ರಕಟಿಸಿದ ಕಾರಣ, ಎಲ್ಲಿನ ಜನ ಅಲ್ಲಿಯೇ ಸಿಲುಕಿಕೊಂಡರು.

Recommended Video

ಬಡವರಿಗಾಗಿ ಸರ್ಕಾರ ವಿತರಿಸುತ್ತಿರುವ ಹಾಲಿನಲ್ಲೂ ಹಗರಣ | Oneindia Kannada

ಜೀವನಕ್ಕಾಗಿ ಕೆಲಸ ಹುಡುಕಿಕೊಂಡು ನಗರಗಳಿಗೆ ಬಂದಿದ್ದ ಅದೇಷ್ಟು ಮಂದಿ ವಾಪಸ್ ತಮ್ಮ ಊರುಗಳಿಗೆ ತೆರಳದೆ, ಈ ಕಡೆ ಕೈಯಲ್ಲಿ ಕೆಲಸ ಹಾಗೂ ಊಟಕ್ಕೂ ಇಲ್ಲದೇ ಕಷ್ಟದ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಹೇಗಾದರೂ ಮಾಡಿ ಊರು ಸೇರೋಣ ಅಂದ್ರೆ ಹೋಗಲು ಯಾವುದೇ ಬಸ್, ಲಾರಿ, ಕ್ಯಾಬ್‌ಗಳಿಲ್ಲ. ಪೊಲೀಸರು ಹೊರಗೆ ಬರುವುದಕ್ಕೂ ಬಿಡ್ತಿಲ್ಲ. ಒಂದು ರೀತಿ ಇದು ತುರ್ತುಪರಿಸ್ಥಿತಿ ಇದ್ದಂತೆ ಭಾಸವಾಗುತ್ತಿದೆ.

ಲಂಡನ್‌ನಲ್ಲಿ ಕೊರೊನಾ ಗೆದ್ದ ಭಾರತ ಮೂಲದ 98 ವರ್ಷದ ಮಹಿಳೆಲಂಡನ್‌ನಲ್ಲಿ ಕೊರೊನಾ ಗೆದ್ದ ಭಾರತ ಮೂಲದ 98 ವರ್ಷದ ಮಹಿಳೆ

ಇಂತಹ ಸನ್ನಿವೇಶದಲ್ಲಿ ತನ್ನ ಮಗನನ್ನು ಕರೆದುಕೊಂಡು ಬರಲು ತಾಯಿಯೊಬ್ಬಳು ಸುಮಾರು 1400 ಕಿ.ಮೀ ಬೈಕಿನಲ್ಲಿ ಪ್ರಯಾಣ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

50 Year Old Woman Travelled 1400 Km On A Two Wheeler

ಹೌದು, 50 ವರ್ಷ ರಜಿಯಾ ಬೇಗಂ ಲಾಕ್‌ಡೌನ್‌ನಿಂದ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 17 ವರ್ಷದ ಮಗನನ್ನು ಕರೆತರಲು ತನ್ನ ಸ್ಕೂಟಿ ಬೈಕಿನಲ್ಲಿ 1400 ಕಿ.ಮೀ ಹೋಗಿ ಬಂದಿದ್ದಾರೆ. ತೆಲಂಗಾಣದ ನಿಜಾಮಾಬಾದ್‌ನಿಂದ ನೆಲ್ಲೂರಿಗೆ 700 ಕಿ.ಮೀ ಇದೆ. ಹೋಗಿ ಬರುವುದಕ್ಕೆ 1400 ಕಿ.ಮೀ ಆಗುತ್ತೆ.

ಲಾಕ್‌ಡೌನ್: ನೀವು ಮನೆಯಿಂದಲೇ ಡೇಟಿಂಗ್ ಮಾಡಬಹುದು: ಹೇಗಂತೀರಾ?ಲಾಕ್‌ಡೌನ್: ನೀವು ಮನೆಯಿಂದಲೇ ಡೇಟಿಂಗ್ ಮಾಡಬಹುದು: ಹೇಗಂತೀರಾ?

ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದ ರಜಿಯಾ ಬೇಗಂ ನಿಜಾಮಾಬಾದ್‌ನ ಬೋದನ್ ಟೌನ್‌ನಿಂದ ಸೋಮವಾರ ಸ್ಕೂಟಿ ಬೈಕಿನಲ್ಲಿ ಪ್ರಯಾಣ ಆರಂಭಿಸಿದ್ದರು. ಮಂಗಳವಾರ ಬೆಳಿಗ್ಗೆ ನೆಲ್ಲೂರಿ ತಲುಪಿದ ರಜಿಯಾ, ಮತ್ತೆ ಬುಧವಾರ ಸಂಜೆ ನಿಜಾಮಾಬಾದ್‌ಗೆ ಮರುಳಿದರು. ಒಟ್ಟು 1400 ಕಿ.ಮೀ ಪ್ರಯಾಣ ಮಾಡಿದ್ದಾರೆ.

50 Year Old Woman Travelled 1400 Km On A Two Wheeler

ಬೋದನ್ ನಗರದ ಎಸ್‌ಪಿ ಅವರ ಬಳಿ ಅನುಮತಿ ಪಡೆದುಕೊಂಡಿದ್ದ ರಜಿಯಾ, ತನ್ನ ಮಗನನ್ನು ಮನೆಗೆ ವಾಪಸ್ ಕರೆತರಲು ಸಾಧ್ಯವಾಯಿತು.ಹೋಗಿ ಬರುವ ವೇಳೆ ಹಲವು ಕಡೆ ಪೊಲೀಸರು ಅಡ್ಡ ಹಾಕಿದರು. ಆದರೆ, ನನ್ನ ಬಳಿ ಪಾಸ್ ಮತ್ತು ಪೊಲೀಸರ ಅನುಮತಿ ಪತ್ರ ಇದ್ದ ಕಾರಣ ಕಳುಹಿಸಿದರು ಎಂದು ರಜಿಯಾ ಹೇಳಿದ್ದಾರೆ.

ನೆಲ್ಲೂರಿನಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದ ರಜಿಯಾ, ಮಗನನ್ನು ನೋಡಿದ ತಕ್ಷಣ ಸಮಯ ವ್ಯರ್ಥ ಮಾಡದೆ, ಮತ್ತೆ ಹಿಂತಿರುಗಿದರು. ''ಮಗನನ್ನು ಯಾವಾಗ ನೋಡುತ್ತೇನೆ ಎಂಬ ಆತುರವೇ ಹೆಚ್ಚಿತ್ತು. ಅವನನ್ನು ನೋಡಿದ್ದು ನನಗೆ ಮತ್ತಷ್ಟು ಶಕ್ತಿ ನೀಡಿತು. ಹಾಗಾಗಿ, ಎಲ್ಲಿಯೂ ನಿಲ್ಲದೇ ಮತ್ತೆ ವಾಪಸ್ ಬಂದೆ'' ಎಂದು ರಜಿಯಾ ತಿಳಿಸಿದ್ದಾರೆ.

English summary
Razia Begum, a government teacher in Bodhan town of Nizamabad district Telangana rides 700 kms to Nellore in Andhra to bring her son who was stranded due to lockdown back
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X