ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ವೆಂಕಟೇಶ್ವರಸ್ವಾಮಿ ದೇವಾಲಯದ ಅತೀ ಅಪರೂಪದ ದಾಖಲೆ!

|
Google Oneindia Kannada News

ಅಮರಾವತಿ, ಆ 3: ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ ತಿರುಮಲ ತಿರುಪತಿ ವೆಂಕಟೇಶ್ವರಸ್ವಾಮಿ ದೇವಾಲಯ, ಕಳೆದ ಭಾನುವಾರ (ಆ 2)ವಿಶಿಷ್ಟ ದಾಖಲೆಯೊಂದನ್ನು ಬರೆದಿದೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

ಜೊತೆಗೆ, ದೇವಾಲಯಕ್ಕಿರುವ ಶತಶತಮಾನಗಳ ಇತಿಹಾಸ, ನಡೆದುಕೊಂಡು ಬರುತ್ತಿರುವ ಪದ್ದತಿ, ಸಂಪ್ರದಾಯವನ್ನು ಕೂಡಾ ಈ ದಾಖಲೆ ಸಾರಿಸಾರಿ ಹೇಳುತ್ತಿದೆ. ಇದು, ಸಖತ್ ಟೇಸ್ಟಿಯಾಗಿರುವ ತಿರುಪತಿ ಲಡ್ಡಿನ ವಿಚಾರ.

ಕರ್ನಾಟಕದಿಂದ ತಿರುಮಲದಲ್ಲಿ 200 ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣಕರ್ನಾಟಕದಿಂದ ತಿರುಮಲದಲ್ಲಿ 200 ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣ

ಭಕ್ತಾದಿಗಳಿಗೆ ಕೊಡುವ ಲಡ್ಡಿನಲ್ಲಿ ಒಟ್ಟು ಮೂರು ವೈರಟಿ ಇರುತ್ತದೆ. ಒಂದು ಎಲ್ಲಾ ಭಕ್ತರಿಗೆ ಕೊಡುವ ಪ್ರೊಕ್ತಂ ಲಡ್ಡು, ಇದು ತೂಕದಲ್ಲಿ 175 ಗ್ರಾಂ ಇರುತ್ತದೆ. ಇನ್ನೊಂದು, ಆಸ್ಥಾನಂ ಲಡ್ಡು, ಇದನ್ನು, ವಿಶೇಷ ದಿನಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ ಮತ್ತು ಇದರ ತೂಕ 750 ಗ್ರಾಂ.

ಲಾಕ್ ಡೌನ್ ತೆರವುಗೊಂಡ ನಂತರ ತಿರುಪತಿ ತಿಮ್ಮಪ್ಪನ 2ವಾರದ ಆದಾಯ ಪ್ರಕಟಲಾಕ್ ಡೌನ್ ತೆರವುಗೊಂಡ ನಂತರ ತಿರುಪತಿ ತಿಮ್ಮಪ್ಪನ 2ವಾರದ ಆದಾಯ ಪ್ರಕಟ

ಮೂರನೆಯದ್ದು ಕಲ್ಯಾಣೋತ್ಸವಂ ಲಡ್ಡು, ಇದನ್ನು ಕಲ್ಯಾಣೋತ್ಸವ ಮತ್ತು ಆರ್ಜಿತಾ ಸೇವೆ ನೀಡಿದವರಿಗೆ ನೀಡಲಾಗುತ್ತದೆ. ಆಗಸ್ಟ್ ಎರಡಕ್ಕೆ ತಿರುಪತಿ ಲಡ್ಡಿಗೆ 305ವರ್ಷಗಳ ಇತಿಹಾಸ ಪೂರ್ಣಗೊಳ್ಳುತ್ತದೆ. ಇದರ, ಕಿರು ಟಿಪ್ಪಣಿ ಹೀಗಿದೆ:

ತಿರುಪತಿ ಲಡ್ಡು ಕಾಳಸಂತೆಯಲ್ಲಿ ಮಾರಾಟವಾಗಬಾರದು

ತಿರುಪತಿ ಲಡ್ಡು ಕಾಳಸಂತೆಯಲ್ಲಿ ಮಾರಾಟವಾಗಬಾರದು

ತಿರುಪತಿ ಲಡ್ಡು ಕಾಳಸಂತೆಯಲ್ಲಿ ಮಾರಾಟವಾಗಬಾರದೆಂದು, 2008ರಲ್ಲಿ ನಾಮಬಲ ಭೌಗೋಳಿಕಕ್ಕಾಗಿ (geographical indication) ಟಿಟಿಡಿ ರಿಜಿಸ್ಟರ್ ಮಾಡಿಕೊಂಡಿತ್ತು. ಆಹಾರ ಪದಾರ್ಥದ ವಿಭಾಗದಲ್ಲಿ, ಜಿಐ ನಿಯಮ 1999ರಡಿಯಲ್ಲಿ ಲಡ್ಡುಗೆ ಪೇಟೆಂಟ್ ಸಿಕ್ಕಿತು. ಲಡ್ಡು ಮಾರಾಟ, ಟಿಟಿಡಿಗೆ ಆದಾಯ ತಂದು ಕೊಡುವ ಪ್ರಮುಖ ಮೂಲ.

ಮೂರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪ್ರಸಾದ ವಿತರಣೆ

ಮೂರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪ್ರಸಾದ ವಿತರಣೆ

ಭಕ್ತಾದಿಗಳಿಗೆ ಲಡ್ಡು ಕೊಡುವ ಪದ್ದತಿಯನ್ನು ಆಗಸ್ಟ್ 2, 1715ರಲ್ಲಿ ಆರಂಭಿಸಲಾಗಿತ್ತು. ಮೂರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಪ್ರಸಾದ ವಿತರಣೆಗೆ ಇತಿಹಾಸವೊಂದಿದೆ. ಲಡ್ಡು ತಯಾರಿಸಲು ಬಳಸುವ ಪದಾರ್ಥಗಳನ್ನು ದಿತ್ತಂ ಎಂದು ಕರೆಯಲಾಗುತ್ತದೆ. ಲಡ್ಡುಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, 305ವರ್ಷಗಳ ಇತಿಹಾಸದಲ್ಲಿ ಇದನ್ನು ಆರು ಬರಿ ಬದಲಾವಣೆ ಮಾಡಲಾಗಿದೆ. ಸದ್ಯ, ಕಡಲೆಹಿಟ್ಟು, ಗೋಡಂಬಿ, ಏಲಕ್ಕಿ,ತುಪ್ಪ, ಸಕ್ಕರೆ, ಶುಗರ್ ಕ್ಯಾಂಡಿ, ಒಣದ್ರಾಕ್ಷಿಯನ್ನು ಬಳಸಲಾಗುತ್ತಿದೆ.

ಪಲ್ಲವರ ಕಾಲದಲ್ಲಿ ವೆಂಕಟೇಶ್ವರನಿಗೆ ಲಡ್ಡು ಪ್ರಮುಖ ಸಮರ್ಪಣೆ

ಪಲ್ಲವರ ಕಾಲದಲ್ಲಿ ವೆಂಕಟೇಶ್ವರನಿಗೆ ಲಡ್ಡು ಪ್ರಮುಖ ಸಮರ್ಪಣೆ

1803ರಲ್ಲಿ ದೇವಾಲಯದ ದೈನಂದಿನ ದಾಖಲೆಯಲ್ಲಿ ಉಲ್ಲೇಖವಾದಂತೆ, ಆ ವೇಳೆ, ಇದೇ ಲಡ್ಡನ್ನು ಹುಡಿಹುಡಿಯಾಗಿ ಭಕ್ತರಿಗೆ ನೀಡಲಾಗುತ್ತಿತ್ತು. ಪಲ್ಲವರ ಕಾಲದಲ್ಲಿ ವೆಂಕಟೇಶ್ವರನಿಗೆ ಲಡ್ಡನ್ನು ಪ್ರಮುಖ ಸಮರ್ಪಣೆಯಾಗಿ ಇಡಲಾಗುತ್ತಿತ್ತು. ಇದಾದ ಮೇಲೆ ಎರಡನೇ ದೇವರಾಯನ ಕಾಲದಲ್ಲಿ ಸ್ವಾಮಿಯ ದೈನಂದಿನ ಪೂಜೆಗೆ ಬೇಕಾಗುವ ವಸ್ತು ಮುಂತಾದವುಗಳನ್ನು ಪೂರೈಸುವ ಜವಾಬ್ದಾರಿಯನ್ನು ಅಮಾತ್ಯ ಶೇಖರ ಮಲ್ಲಣ್ಣನಿಗೆ ವಹಿಸಲಾಯಿತು.

ವಿಜಯನಗರ ಸಾಮ್ಯಾಜ್ಯ

ವಿಜಯನಗರ ಸಾಮ್ಯಾಜ್ಯ

ಇನ್ನು ವಿಜಯನಗರ ಸಾಮ್ಯಾಜ್ಯದಲ್ಲಿ ತಿರುಪತಿ ದೇವಾಲಯಕ್ಕೆ ಅಪಾರ ಪ್ರಮಾಣದ ದೇಣಿಗೆ ಹರಿದು ಬರುತ್ತಿತ್ತು. ಕಲ್ಯಾಣಂ ಅಯ್ಯಂಗಾರ್ ಎನ್ನುವವರು ಲಡ್ಡುವನ್ನು ಪ್ರಸಾದದ ರೂಪದಲ್ಲಿ ತರುವ ಕಲ್ಪನೆಯನ್ನು ದೇವಾಲಯದ ಪ್ರಮುಖರಿಗೆ ನೀಡಿದ್ದರು. ಲಡ್ಡನ್ನು ಹಿಂದೆ ಅಂದರೆ 1480ರಲ್ಲಿ 'ಮನೋಹರಂ'ಎಂದು ಕರೆಯಲಾಗುತ್ತಿತ್ತು ಎನ್ನುವುದೂ ದಾಖಲಾಗಿದೆ. ಸದ್ಯ, ಸುಮಾರು ಆರು ನೂರಕ್ಕೂ ಹೆಚ್ಚು ಜನರು ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

English summary
305 Years Of History To Tirupati Venkateshwara Temple Laddu Started In August 1715.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X