ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣಂ ದುರಂತ: 13 ಸಾವಿರ ಟನ್ ಸ್ಟೈರೀನ್ ದಕ್ಷಿಣ ಕೊರಿಯಾಕ್ಕೆ ವಾಪಸ್

|
Google Oneindia Kannada News

ವಿಶಾಖಪಟ್ಟಣಂ, ಮೇ 12: ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ದುರಂತದ ಬಳಿಕ 13 ಸಾವಿರ ಟನ್ ಸ್ಟೈರೀನ್ ಅನ್ನು ದಕ್ಷಿಣ ಕೊರಿಯಾಕ್ಕೆ ಹಿಂದಿರುಗಿಸಲಾಗಿದೆ.

Recommended Video

ಆಂಧ್ರಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಯ 'ಉಲ್ಟಾ' ನಡಿಗೆ! | CHANDRABABU NAIDU | ONEINDIA KANNADA

ಆಂಧ್ರಪ್ರದೇಶದ ರಾಸಾಯನಿಕ ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 13 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.

ವಿಶಾಖಪಟ್ಟಣಂ ಮಹಾ ಅನಿಲ ದುರಂತಕ್ಕೆ ಕಾರಣ ಏನು?ವಿಶಾಖಪಟ್ಟಣಂ ಮಹಾ ಅನಿಲ ದುರಂತಕ್ಕೆ ಕಾರಣ ಏನು?

ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದರು.ಸ್ಟೈರೀನ್ (Styrene) ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ರಾಸಾಯನಿಕದಿಂದ ಇದನ್ನು ಪಡೆಯಬಹುದು. ರಸಾಯನಶಾಸ್ತ್ರದಲ್ಲಿ ಇದಕ್ಕೆ ಇಥೆನೈಲ್​ ಬೆಂಜೀನ್, ವೀನೈಲ್ ​ಬೆಂಜೀನ್ ಮತ್ತು ಫೀನೈಲ್ ​ಈಥೀನ್ ಎನ್ನುತ್ತಾರೆ. C6H5CH=CH2 ಇದರ ರಾಸಾಯನಿಕ ಸೂತ್ರವಾಗಿದೆ.

13,000 Tonnes Of Styrene Being Shipped Back To South Korea

ಸ್ಟೈರೀನ್ ಲ್ಯಾಟೆಕ್ಸ್, ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಸುವ ರಾಸಾಯನಿಕವಾಗಿದೆ. ಅಲ್ಲದೆ ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ಅಂಟುಗಳ ತಯಾರಿಕೆಗೆ ಈ ಸ್ಟೈರೀನ್ ರಸಾಯನಿಕವನ್ನು ಉಪಯೋಗಿಸಲಾಗುತ್ತದೆ.

ಜಿಡ್ಡಿನಂತಿರುವ ಈ ಅನಿಲಕ್ಕೆ ಬಣ್ಣ ಇರುವುದಿಲ್ಲ. ಕೆಲವೊಮ್ಮೆ ಇದು ನಸು ಹಳದಿಯಂತೆ ತೋರಬಹುದು. ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರೆ ವಾಸನೆ ಕಠಿಣವಾಗಿರುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗೇ ಈ ರಾಸಾಯನಿಕವು ಗಾಳಿಗೆ ಬಂದರೆ ಬಹಳ ಬೇಗ ಆವಿಯಾಗಿಹೋಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ವಿಶಾಖಪಟ್ಟಣಂ ಅನಿಲ ದುರಂತದ ಸಂತ್ರಸ್ತರಿಗಾಗಿ ಸಹಾಯವಾಣಿವಿಶಾಖಪಟ್ಟಣಂ ಅನಿಲ ದುರಂತದ ಸಂತ್ರಸ್ತರಿಗಾಗಿ ಸಹಾಯವಾಣಿ

ಮೊದಲು 8 ಸಾವಿರ ಟನ್ ಕಂಟೈನರ್ ಮೂಲಕ ಕಳುಹಿಸಲಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಮತ್ತ 5 ಸಾವಿರ ಟನ್ ಕಳುಹಿಸಿಕೊಡಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ. ಎಲ್‌ಜಿ ಪಾಲಿಮರ್ಸ್ ಕಂಪನಿಗೆ ಎನ್‌ಜಿಟಿ 50 ಕೋಟಿ ರೂ ದಂಡ ವಿಧಿಸಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಿಯಾ ಕೆಮಿಕಲ್ ಪ್ಲ್ಯಾಂಟ್ ನಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತದಲ್ಲಿ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದು ದಕ್ಷಿಣ ಕೊರಿಯಾದ ಎಲ್ ಜಿ ಗ್ರೂಪ್ ನ ಕಂಪನಿಯಾಗಿದ್ದು, ಇದರ ಕೇಂದ್ರ ಕಚೇರಿ ಮುಂಬೈನಲ್ಲಿದೆ.

1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಕಂಪನಿ ಪಾಲಿಸ್ಟ್ರಿಯೆನ್ ತಯಾರಿಸುತ್ತಿತ್ತು. ಈ ಕಂಪನಿ 1978ರಲ್ಲಿ ಮೆಕ್ ಡೊವೆಲ್ ಮತ್ತು ಯುಬಿ ಗ್ರೂಪ್ ಜತೆ ವಿಲೀನವಾಗಿತ್ತು. ನಂತರ ದಕ್ಷಿಣ ಕೊರಿಯಾದ ಎಲ್ ಜಿ ಕೆಮಿಕಲ್ ಭಾರತದಲ್ಲಿ ಮಾರುಕಟ್ಟೆಗಾಗಿ ಹುಡುಕಾಟ ನಡೆಸುತ್ತಿತ್ತು.

ಆಗ ಯುಬಿ ಗ್ರೂಪ್ ಒಡೆತನದಲ್ಲಿದ್ದ ಹಿಂದೂಸ್ತಾನ್ ಪಾಲಿಮರ್ಸ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 1997ರಲ್ಲಿ ಎಲ್ ಜಿ ಪಾಲಿಮರ್ಸ್ ಇಂಡಿಯಾ ಎಂದು ಹೆಸರನ್ನು ಬದಲಾಯಿಸಿತ್ತು.

English summary
Days after the styrene vapor leak from LG Polymers plant at RR Venkatapuram village in Andhra Pradesh killed 12 people, about 13,000 tonnes of styrene is being shipped back to South Korea. LG Polymers is a unit of South Korea’s biggest petrochemical maker, LG Chem Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X