• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಪತಿಯಲ್ಲಿ ಕೋವಿಡ್‌ನಿಂದ 101 ವರ್ಷದ ವೃದ್ಧೆ ಗುಣಮುಖ

|

ಅಮರಾವತಿ, ಜುಲೈ 26 : ತಿರುಪತಿಯ ನಿವಾಸಿ 101 ವರ್ಷದ ವೃದ್ಧೆ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ರೀ ಪದ್ಮಾವತಿ ಮಹಿಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ.

ಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆ

101 ವರ್ಷದ ವೃದ್ಧೆ ತಿರುಪತಿಯ ನಿವಾಸಿ. ಜುಲೈ 25ರಂದು ಆಕೆಗೆ ಕೋವಿಡ್ - 19 ಸೋಂಕು ದೃಢವಾದ ಕಾರಣ ಶ್ರೀ ಪದ್ಮಾವತಿ ಮಹಿಳಾ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಗುಣಮುಖರಾಗಿದ್ದಾರೆ.

ಬೆಂಗಳೂರಲ್ಲಿ 105 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು

ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಟ್ ಡಾ. ರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಡಾಕ್ಟರ್, ನರ್ಸ್, ಸಿಬ್ಬಂದಿಗಳು ವೃದ್ಧೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಆದ್ದರಿಂದ ಅವರು ಗುಣಮುಖರಾಗಿದ್ದಾರೆ" ಎಂದು ಹೇಳಿದ್ದಾರೆ.

105 ನೇ ವಯಸ್ಸಿನಲ್ಲಿ ಶಾಲಾ ಪರೀಕ್ಷೆ ಪಾಸಾದ ಅಜ್ಜಿ..!

"ಕೋವಿಡ್‌ ಸೋಂಕಿತರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. 101 ವರ್ಷದ ವೃದ್ಧೆ ಗುಣಮುಖರಾಗು ಮೂಲಕ ಸೋಂಕಿತರು ಗುಣಮುಖರಾಗಲಿದ್ದಾರೆ ಎಂಬ ಉದಾಹರಣೆ ನಮ್ಮ ಮುಂದಿದೆ" ಎಂದು ಡಾ. ರಾಮ್ ತಿಳಿಸಿದ್ದಾರೆ.

ವೃದ್ಧೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಡಾಕ್ಟರ್‌, ನರ್ಸ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 88,671. ಇದುವರೆಗೂ 985 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ.

English summary
101 year old woman recovered from COVID-19 in Tirupati, Andhra Pradesh. Women admitted to hospital on July 25, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X