ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಫೈ ಕಾಲಿಂಗ್ ಸೇವೆ ಮೂಲಕ ಕಾಲ್‌ ಡ್ರಾಪ್‌ಗೆ ಅಂತ್ಯ ಹಾಡಿದ ಏರ್‌ಟೆಲ್‌

Google Oneindia Kannada News

ಕಳೆದ ಕೆಲವು ವರ್ಷಗಳಲ್ಲಿ ದೇಶದ ಟೆಲಿಕಾಂ ವಲಯ ಭಾರಿ ಬದಲಾವಣೆಗಳಿಗೆ ಒಳಗಾಗುತ್ತಿದೆ. ಟೆಲಿಕಾಂ ಸಂಸ್ಥೆಗಳ ನಡುವಿನ ಪೈಪೋಟಿ ಸಹ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಹೊಸ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿವೆ. ಅದರ ಮತ್ತೊಂದು ವಿನೂತನ ಸೌಲಭ್ಯವೇ ವೈಫೈ ಕಾಲಿಂಗ್ ಸೇವೆ. ಏರ್‌ಟೆಲ್ ಟೆಲಿಕಾಂ ವೈಫೈ ಕಾಲಿಂಗ್ ಸೇವೆಯನ್ನು ಮೊದಲ ಪರಿಚಯಿಸಿದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಏರ್‌ಟೆಲ್ ಸಂಸ್ಥೆಯು ವೈಫೈ ಕಾಲಿಂಗ್ ಸೇವೆಯನ್ನು ಆರಂಭಿಸಿದ್ದು, ವೈಫೈ ಸೌಲಭ್ಯ ಹೊಂದಿರುವ 4G ಸಂಪರ್ಕದ ಸ್ಮಾರ್ಟ್‌ಫೋನ್ ಹೊಂದಿರುವ ಏರ್‌ಟೆಲ್ ಚಂದಾದಾರರು ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಬಹುತೇಕ ಚಂದಾದಾರರಿಗೆ ವೈಫೈ ಕಾಲಿಂಗ್ ಸೇವೆಯ ಬಗ್ಗೆ ಇನ್ನೂ ತಿಳಿವಳಿಕೆ ಇಲ್ಲ ಮತ್ತು ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೇವೆ ಲಭ್ಯವಿದೆ ಎನ್ನುವ ಕುರಿತು ಗೊಂದಲಗಳು ಇವೆ. ನಿಮ್ಮ ಅಂತಹ ಎಲ್ಲ ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರವಿದೆ. ಮುಂದೆ ಓದಿರಿ...

Airtel Launches Wi Fi Calling Service For 4G Smartphone

ವೈಫೈ ಕಾಲಿಂಗ್ ಸೌಲಭ್ಯ

ಏರ್‌ಟೆಲ್ ಟೆಲಿಕಾಂ ಆರಂಭಿಸಿರುವ ವೈಫೈ ಕಾಲಿಂಗ್ ಸೇವೆ ದೀಗ ಚಾಲ್ತಿಯಲ್ಲಿದೆ. ಆದರೆ ಏನಿದು ವೈಫೈ ಕಾಲಿಂಗ್ ಎಂದು ಕೇಳುವವರೇ ಹೆಚ್ಚು. ವೈಫೈ ಕಾಲಿಂಗ್ ಕೂಡ ಸಾಮಾನ್ಯ ವಾಯ್ಸ್ ಕಾಲಿಂಗ್‌ನಂತೆಯೇ. ಆದರೆ ಈ ಕರೆಗಳು ಇಂಟರ್ನೆಟ್ ಆಧಾರಿತವಾಗಿದ್ದು, ವೈಫೈ ಸೌಲಭ್ಯ ಇದ್ದರೆ ಮಾತ್ರ ಪ್ರಯೋಜನಕಾರಿ. ಈ ಕರೆಯ ವ್ಯವಸ್ಥೆಯಲ್ಲಿ ಸಾಮಾನ್ಯ ನೆಟ್‌ವರ್ಕ್ ಬಳಕೆ ಆಗುವುದಿಲ್ಲ. ಹೀಗಾಗಿ ಯಾವುದೇ ಹೆಚ್ಚುವರಿ ರೀಚಾರ್ಜ್ ಅಗತ್ಯ ಇರಲ್ಲ. ಏರ್‌ಟೆಲ್ ಈ ವೈಫೈ ಕಾಲಿಂಗ್ ಸೇವೆ ಆರಂಭಿಸಿದ ಕೇವಲ ಎರಡು ತಿಂಗಳಿನಲ್ಲಿ 3 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 10 ಮಿಲಿಯನ್ ಬಳಕೆದಾರರು ಈ ಹೊಸ ಕಾಲಿಂಗ್ ಸೌಲಭ್ಯವನ್ನು ಬಳಸುವ ಸಾಧ್ಯತೆಗಳಿವೆ.

Airtel Launches Wi Fi Calling Service For 4G Smartphone

ಕಾಲಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ

ವೈಫೈ ಕಾಲಿಂಗ್ ಸೇವೆಯು ಸಾಮಾನ್ಯ ಕರೆಗಳ ವ್ಯವಸ್ಥೆಗೆ ಪರ್ಯಾಯವಾಗಿ ಬೆಳೆಯುವ ಸಾಧ್ಯತೆಗಳಿವೆ. ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯನ್ನು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ ಸೌಲಭ್ಯ ಬಳಸಿಕೊಂಡು ಪಡೆಯಬಹುದಾಗಿದೆ. ವೈಫೈ ಕಾಲಿಂಗ್‌ನ ಇನ್ನೊಂದು ಪ್ರಮುಖ ಅಂಶವೆಂದರೆ ಕರೆಗಳು ಎಚ್‌ಡಿ ಗುಣಮಟ್ಟದಲ್ಲಿ ಇರುವುದು. ಆದರೆ ಅದಕ್ಕೆ ನಿಮ್ಮ ಬಳಿ ಇತ್ತೀಚಿನ ಸ್ಮಾರ್ಟ್‌ಫೋನ್ ಇರಬೇಕು ಮತ್ತು ಏರ್‌ಟೆಲ್‌ ಸಿಮ್ ಇರಬೇಕು.

Airtel Launches Wi Fi Calling Service For 4G Smartphone

ಯಾವ ಫೋನ್‌ಗಳಲ್ಲಿ ವೈಫೈ ಕರೆ ಸಾಧ್ಯ?

ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯು ಆಪಲ್‌ ಐಫೋನ್‌ಗಳಿಂದ ಹಿಡಿದು ಸ್ಯಾಮ್‌ಸಂಗ್‌ ಗ್ಯಾಲಕ್ಸಿಯ ಬಹುತೇಕ ಫೋನ್‌ಗಳವರೆಗೆ ಬಳಸಿಕೊಳ್ಳಲು ಅವಕಾಶವಿದೆ. ಫ್ಲ್ಯಾಗ್‌ಶಿಫ್ ಮಾದರಿ ಸ್ಮಾರ್ಟ್‌ಫೋನ್ ಹೊರತು ಪಡಿಸಿ ಮಧ್ಯಮ ದರ್ಜೆಯ ವಿವಿಧ ಫೋನ್‌ಗಳಲ್ಲಿಯೂ ಏರ್‌ಟೆಲ್ ವೈಫೈ ಕಾಲಿಂಗ್ ಸೇವೆ ಲಭ್ಯ. ಜಿಯೋಗಿಂತಲೂ ಉತ್ತಮ ವೈಫೈ ಕಾಲಿಂಗ್ ಸೇವೆಯನ್ನು ಹೊಂದಿರುವುದಾಗಿ ಏರ್‌ಟೆಲ್ ಹೇಳಿಕೊಂಡಿದೆ.

Airtel Launches Wi Fi Calling Service For 4G Smartphone

ಏರ್‌ಟೆಲ್ ವೈಫೈ ಕಾಲಿಂಗ್ ಸಫೋರ್ಟ್‌

ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಏರ್‌ಟೆಲ್ ವೈಫೈ ಕಾಲಿಂಗ್ ಸೇವೆಯು ಲಭ್ಯ ಇದೆ ಎಂಬುದನ್ನು ತಿಳಿಯಲು ಸಂಸ್ಥೆಯ ಅಧಿಕೃತ ವೆಬ್‌ ತಾಣ https://www.airtel.in/wifi-calling ಕ್ಕೆ ಭೇಟಿ ನೀಡಿರಿ.

Airtel Launches Wi Fi Calling Service For 4G Smartphone

ವೈಫೈ ಕಾಲಿಂಗ್ ಬಳಕೆ ಮಾಡುವುದು ಹೇಗೆ?

ಪ್ರಸ್ತುತ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ವೈಫೈ ಕಾಲಿಂಗ್ ಸೇವೆಯನ್ನು ಮೊದಲು ಆರಂಭಿಸಿದ್ದು ಏರ್‌ಟೆಲ್. ಏರ್‌ಟೆಲ್‌ನ ವೈಫೈ ಕಾಲಿಂಗ್ ಸೇವೆಯು ಜಮ್ಮು-ಕಾಶ್ಮೀರ ಹೊರತುಪಡಿಸಿ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿಯೂ ಲಭ್ಯವಿದೆ. ಇತರೆ ನೆಟ್‌ವರ್ಕ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಸಂಪರ್ಕವಾಗುತ್ತದೆ. ಏರ್‌ಟೆಲ್ ಬಳಕೆದಾರರು ಯಾವುದೇ ನೆಟ್‌ವರ್ಕನ ವೈಫೈ ಸೌಲಭ್ಯ ಬಳಸಿಕೊಂಡು ವೈಫೈ ಕಾಲಿಂಗ್ ಸೌಲಭ್ಯವನ್ನು ಸುಲಭವಾಗಿ ಸಕ್ರಿಯ ಮಾಡಬಹುದಾಗಿದೆ. ಏರ್‌ಟೆಲ್ ವೈಫೈ ಕಾಲಿಂಗ್ ಸೌಲಭ್ಯ ಪಡೆದಿರುವ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ಕನೆಕ್ಟ್ ಮಾಡಿರಿ. ನಂತರ ನಿಮ್ಮ ಏರ್‌ಟೆಲ್ ಸಿಮ್‌ನ VoLTE ಸೇವೆಯನ್ನು ಆನ್ ಮಾಡಿಕೊಳ್ಳಿರಿ. ಈ ಸೇವೆಯನ್ನು ಸಕ್ರಿಯ ಮಾಡಲು ಇಲ್ಲಿ ನೀಡಿರುವ ಹಂತಗಳನ್ನು ಅನುಸರಿಸಿ. ಸೆಟ್ಟಿಂಗ್ > ನೆಟ್‌ವರ್ಕ್ಸ್ > ಏರ್‌ಟೆಲ್ ಸಿಮ್ > VoLTE. ಈ ಸೆಟ್ಟಿಂಗ್ ಆದ ಬಳಿಕ ವೈಫೈ ಕಾಲಿಂಗ್‌ಗಾಗಿ ಸೆಟ್ಟಿಂಗ್ > ನೆಟ್‌ವರ್ಕ್ ಸೆಟ್ಟಿಂಗ್ > ಏರ್‌ಟೆಲ್ ಸಿಮ್ > Activate Make Calls Using Wi-Fi ಆನ್ ಮಾಡಿ. ಆನಂತರ ವೈಫೈ ಕಾಲಿಂಗ್ ಸೇವೆ ಲಭ್ಯವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X