• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿಗೆ ಹಾರ್ದಿಕ್ ಪಟೇಲ್ ದುಷ್ಮನ್ ಕಾ ದುಷ್ಮನ್, 'ದೋಸ್ತ್'

|
Google Oneindia Kannada News

2015, ಗುಜರಾತ್‌ನಲ್ಲಿ ಆನಂದಿಬೇನ್ ಮುಖ್ಯಮಂತ್ರಿಯಾಗಿದ್ದ ಅವಧಿ. 22 ವರ್ಷದ ಬಿಸಿರಕ್ತದ ಯುವಕನೊಬ್ಬ ಇಡೀ ಸರಕಾರವನ್ನೇ ಅಲುಗಾಡಿಸಿದ್ದ. ಪ್ರಧಾನಿಯಾಗಿ ಅದೇ ರಾಜ್ಯದ ನರೇಂದ್ರ ಮೋದಿಯಿದ್ದರೂ, ಇನ್ನೊಂದು ಕಡೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಇದ್ದರೂ ಈ ಯುವಕನನ್ನು ಹಡೆಮುರಿ ಕಟ್ಟಲು ಸಾಧ್ಯವಾಗಿರಲಿಲ್ಲ.

ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ನಾಯಕ ಹಾರ್ದಿಕ್ ಪಟೇಲ್, ಮೋದಿ ಮತ್ತು ಶಾ ಜೋಡಿಗೆ ಭರ್ಜರಿ ಬಿಸಿ ಮುಟ್ಟಿಸಿದ್ದ. ಈತನ ಮೇಲೆ ಆ ಸಮುದಾಯದ ಜನರಿಗೆ ಇನ್ನಿಲ್ಲದ ನಂಬಿಕೆಯಿತ್ತು.

Breaking news: ಗುಜರಾತ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಹಾರ್ದಿಕ್ ಪಟೇಲ್Breaking news: ಗುಜರಾತ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಹಾರ್ದಿಕ್ ಪಟೇಲ್

'ಹೊಸ ಮೋದಿ', 'ಪಾಟಿದಾರ್ ಹೃದಯ್ ಸಾಮ್ರಾಟ್' 'ನವ ಮೋದಿ' ಎಂದೆಲ್ಲಾ ಜನರಿಂದ ಹೊಗಳಲ್ಪಡುತ್ತಿದ್ದ ಹಾರ್ದಿಕ್ ಪಟೇಲ್ ವಿರುದ್ದ ದೇಶದ್ರೋಹದ ಆರೋಪವೂ ಕೇಳಿ ಬಂದು, ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ಇವರು ಬಂಧನದ ಭೀತಿಯಿಂದ ಪಾರಾಗಿದ್ದರು.

ಆ ವೇಳೆ, ಅತ್ಯಂತ ಸ್ಪಷ್ಟವಾಗಿ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿ ಪಕ್ಷ ಸೇರಿದ್ದ ಹಾರ್ದಿಕ್ ಪಟೇಲ್, ಈಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅನ್ನು ಅಧಿಕೃತವಾಗಿ ತೊರೆದಿದ್ದಾರೆ. ಅವರ ಕಳೆದ ಕೆಲವು ದಿನಗಳ ರಾಜಕೀಯ ಹೆಜ್ಜೆಯನ್ನು ಅವಲೋಕಿಸುವುದಾದರೆ ಅವರು ಬಿಜೆಪಿಗೆ ಸೇರ್ಪಡೆಯಾಗಬಹುದು.

ಕೈ ನಾಯಕರಿಗೆ 'ಚಿಕನ್ ಸ್ಯಾಂಡ್‌ವಿಚ್' ಎಂದು ಕೆಣಕಿದ ಹಾರ್ದಿಕ್ ಪಟೇಲ್ ಕೈ ನಾಯಕರಿಗೆ 'ಚಿಕನ್ ಸ್ಯಾಂಡ್‌ವಿಚ್' ಎಂದು ಕೆಣಕಿದ ಹಾರ್ದಿಕ್ ಪಟೇಲ್

 ಹಾರ್ದಿಕ್ ಪಟೇಲ್ ಆಪ್ತರಾಗಿದ್ದ ಚಿರಾಗ್ ಪಟೇಲ್

ಹಾರ್ದಿಕ್ ಪಟೇಲ್ ಆಪ್ತರಾಗಿದ್ದ ಚಿರಾಗ್ ಪಟೇಲ್

ಕಳೆದ ಚುನಾವಣೆಯ ವೇಳೆ (2017) ಹಾರ್ದಿಕ್ ಪಟೇಲ್ ಆಪ್ತರಾಗಿದ್ದ ಮತ್ತು ಪಾಟೀದಾರ್ ಆಂದೋಲನದಲ್ಲಿ ಅವರ ಜೊತೆಗಿದ್ದ ಚಿರಾಗ್ ಪಟೇಲ್ ಎನ್ನುವ ಮುಖಂಡನನ್ನು ಬಿಜೆಪಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ, ಈ ವರ್ಷಾಂತ್ಯದ ವೇಳೆಗೆ ಗುಜರಾತ್ ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಬಿಜೆಪಿ ಪಾಲಿಗೆ ಪ್ರತಿಷ್ಠೆಯ ರಾಜ್ಯವಾಗಿರುವ ಗುಜರಾತ್ ನಲ್ಲಿ ಸತತವಾಗಿ ಗೆಲುವು ಸಾಧಿಸಲು ಯುವ ಸಮುದಾಯದ ನಾಯಕನ ಅವಶ್ಯಕತೆಯಿದೆ. ಇದೇ ವೇಳೆ, ಕಾಂಗ್ರೆಸ್ಸಿನಲ್ಲಿ ಸರಿಯಾದ ಜವಾಬ್ದಾರಿ ಸಿಗುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ ಎಂದು ಹಾರ್ದಿಕ್ ಪಟೇಲ್ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ.

 ಬಿಜೆಪಿ ನಾಯಕತ್ವಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ

ಬಿಜೆಪಿ ನಾಯಕತ್ವಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ

"ಬಿಜೆಪಿ ನಾಯಕತ್ವಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದೆ. ಬಿಜೆಪಿಯವರು ತಮ್ಮ ಸಂಘಟನಾ ಶಕ್ತಿಗೆ ಬಹಳ ಶ್ರಮ ಹಾಕುತ್ತಾರೆ. ಹೊಸಹೊಸ ಬದಲಾವಣೆಗಳನ್ನು ಮಾಡುತ್ತಾ, ಆವಿಷ್ಕಾರಗಳನ್ನು ತರುತ್ತಿರುತ್ತಾರೆ. ಹೀಗಾಗಿ, ಕಾಂಗ್ರೆಸ್ ಸೋಲುತ್ತಿದೆ, ಬಿಜೆಪಿ ಗೆಲ್ಲುತ್ತಿದೆ ಎಂದು ಜನರೂ ಮಾತನಾಡುತ್ತಿದ್ದಾರೆ. ಇದು ಇಲ್ಲಿನ ಜನರು ಮಾತನಾಡುತ್ತಿರುವ ವಿಚಾರ"ಎಂದು ಹಾರ್ದಿಕ್ ಪಟೇಲ್ ಹೇಳುವ ಮೂಲಕ, ಪರೋಕ್ಷವಾಗಿ ಬಿಜೆಪಿಗೆ ಸೇರುವ ಮುನ್ಸೂಚನೆಯನ್ನು ನೀಡಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.

 ದುಷ್ಮನ್ (ಕಾಂಗ್ರೆಸ್) ಕಾ ದುಷ್ಮನ್(ಹಾರ್ದಿಕ್ ಪಟೇಲ್) ದೋಸ್ತ್ ಹೋತಾ ಹೇ

ದುಷ್ಮನ್ (ಕಾಂಗ್ರೆಸ್) ಕಾ ದುಷ್ಮನ್(ಹಾರ್ದಿಕ್ ಪಟೇಲ್) ದೋಸ್ತ್ ಹೋತಾ ಹೇ

ದುಷ್ಮನ್ (ಕಾಂಗ್ರೆಸ್) ಕಾ ದುಷ್ಮನ್(ಹಾರ್ದಿಕ್ ಪಟೇಲ್) ದೋಸ್ತ್ ಹೋತಾ ಹೇ ಎನ್ನುವ ಹಿಂದಿ ಗಾದೆಯ ಮಾತಿನಂತೆ, ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದ ಹಾರ್ದಿಕ್ ಈಗ ಆ ಪಕ್ಷ ತೊರೆದಿದ್ದಾಗಿದೆ. ಅವರ ಆಪ್ತವಲಯದ ಪ್ರಕಾರ ಕೆಲವೇ ದಿನಗಳಲ್ಲಿ ಹಾರ್ದಿಕ್ ಪಟೇಲ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ನಾನೊಬ್ಬ ರಾಮಭಕ್ತ, ಹೆಮ್ಮೆಯ ಹಿಂದೂ ಎಂದು ಹಾರ್ದಿಕ್ ಅವರು ಬಿಜೆಪಿ ಸೇರುವ ಮುನ್ಸೂಚನೆಯನ್ನು ನೀಡಿದ್ದಾರೆ.

 ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉತ್ತಮ ಪೈಪೋಟಿಯನ್ನು ನೀಡಿತ್ತು

ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉತ್ತಮ ಪೈಪೋಟಿಯನ್ನು ನೀಡಿತ್ತು

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉತ್ತಮ ಪೈಪೋಟಿಯನ್ನು ನೀಡಿತ್ತು, ಅದಕ್ಕೆ ಕಾರಣ ಹಾರ್ದಿಕ್ ಪಟೇಲ್ ಕೂಡಾ ಒಬ್ಬರು. ಈಗ, ಚುನಾವಣಾ ವರ್ಷದಲ್ಲಿ ಯುವ ನಾಯಕನೊಬ್ಬನು ಪಕ್ಷ ತೊರೆದಿರುವುದು, ಅದೂ ಪ್ರಬಲ ಪಾಟೀದಾರ್ ಸಮುದಾಯದ ನಾಯಕನೊಬ್ಬನಾಗಿರುವುದರಿಂದ ಮೇಲ್ನೋಟಕ್ಕೆ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ. ಹಾರ್ದಿಕ್ ಪಟೇಲ್, ಬಿಜೆಪಿ ಸೇರುವ ಬಗ್ಗೆ ಎಲ್ಲೂ ಅಧಿಕೃತವಾಗಲಿ, ಬಿಜೆಪಿಯಾಗಲಿ ಈ ಬಗ್ಗೆ ಹೇಳಿಕೆಯನ್ನು ನೀಡಿಲ್ಲ. ಆದರೆ, ಮೂಲಗಳ ಪ್ರಕಾರ, ಬಿಜೆಪಿಗೆ ಸೇರುವುದು ಅವರಲ್ಲಿರುವ ಏಕೈಕ ಆಯ್ಕೆ ಎಂದು ಹೇಳಲಾಗುತ್ತಿದೆ.

   ನಾನೋ ಕಾರ್ ಡ್ರೈವ್ ಮಾಡ್ಕೊಂಡು ಬಂದ ರತನ್ ಟಾಟಾ | Oneindia Kannada
   English summary
   Youth Leader Hardik Patel Quits Congress, Speculation Rife He Is Joining BJP. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X