• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನಗೆ ಮತ ಹಾಕಿಲ್ಲ, ನಿಮಗೆ ನೀರು ಕೊಡಲ್ಲ: ಗುಜರಾತ್ ಬಿಜೆಪಿ ಮಂತ್ರಿ

|

ಅಹ್ಮದಾಬಾದ್, ಏಪ್ರಿಲ್ 15: ಕುಡಿಯಲು ನೀರು ಕೇಳಿದ ಮಹಿಳೆಯರ ಮೇಲೆ ಗುಜರಾತ್‌ನ ನೀರಾವರಿ ಮಂತ್ರಿಯೇ ಜೋರು ಮಾಡಿ ಸುಮ್ಮನಾಗಿಸಿದ ಘಟನೆ ನಡೆದಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪತ ಮತಕೇಳಲು ಬಿಜೆಪಿ ನೀರಾವರಿ ಮಂತ್ರಿ ಕುನ್ವರ್ಜಿ ಬವಾಲಿಯಾ ಅವರನ್ನು ಕೆಲವು ಮಹಿಳೆಯರು ಅಡ್ಡಗಟ್ಟಿ ನಮಗೆ ಕುಡಿಯಲು ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.

ದೋಷಪೂರಿತ ನಾಮಪತ್ರ: ಬಿಜೆಪಿ ಗೆದ್ದಿದ್ದ ದ್ವಾರಕದಲ್ಲಿ ಮತ್ತೆ ಚುನಾವಣೆ

ಮಹಿಳೆಯರ ಆಗ್ರಹಕ್ಕೆ ಸಿಟ್ಟಿಗೆದ್ದ ಸಚಿವ, ನಾನು ಎಷ್ಟು ನಿಮ್ಮನ್ನು ಬೇಡಿಕೊಂಡರೂ ಕೇವಲ 55% ಮತಗಳನ್ನಷ್ಟೆ ನೀವು ನೀಡಿದ್ದೀರಿ, ಹಾಗಾಗಿ ನೀವು ಮತಹಾಕಿದಂತೆಯೇ ನಿಮಗೆ ಕಡಿಮೆ ನೀರು ಕೊಡುತ್ತಿದ್ದೇವೆ ಎಂದು ದರ್ಪದ ಉತ್ತರ ನೀಡಿದ್ದಾರೆ.

ಸಚಿವರ ಉತ್ತರಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಮತ ಹಾಕಿದವರು, ಹಾಕದವರು ಯಾರೇ ಆಗಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳಿ ಸಮಾನವಾಗಿ ಹಂಚಿಕೆ ಆಗಬೇಕು ಆದರೆ ಗುಜರಾತ್‌ನ ಈ ಮಂತ್ರಿ ಅದರಲ್ಲಿ ತಾರತಮ್ಯ ತೋರುತ್ತಿದ್ದಾರೆ.

ಚುನಾವಣೆಗೆ ಒಂದು ದಿನ ಇರುವಾಗಲೇ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಆಘಾತ

ಮಂತ್ರಿ ಕುನ್ವರ್ಜಿ ಬವಾಲಿಯಾ ಮಹಿಳೆಗೆ ಆವಾಜ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಂತ್ರಿಯ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಗುಜರಾತ್‌: ಮೋದಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ

ಕುನ್ವರ್ಜಿ ಬವಾಲಿಯಾ ಅವರು ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ನಂತರ ಬಿಜೆಪಿ ಸೇರಿ ಜಲಸಂಪನ್ಮೂಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat water resource minister Kunwarji Bavaliya says to women that you people gave me only 55% votes so i am giving less water to your region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more