• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರು

|
Google Oneindia Kannada News

ಅಹಮದಾಬಾದ್, ಫೆಬ್ರವರಿ 24: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೊಸ ಸ್ವರೂಪ ಪಡೆದುಕೊಂಡ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಬುಧವಾರ ಉದ್ಘಾಟಿಸಿದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಕೋವಿಂದ್ ಅವರು ಈ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಿದರು.

ಮೊಟೆರಾ ಕ್ರಿಕೆಟ್ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಇರಿಸಲಾಗಿದ್ದು, ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ಬುಧವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರೆಣ್ ರಿಜಿಜು, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಬಿಸಿಸಿಐ ಕಾರ್ಯದರ್ಶಿ ಜೇ ಶಾ ಹಾಜರಿದ್ದರು.

ಬಿಜೆಪಿಗೆ 'ಜೈ' ಎಂದ ಗುಜರಾತ್ ಜನ: ಪಾಲಿಕೆ ಚುನಾವಣೆಯಲ್ಲಿ ಕಮಲಕ್ಕೆ ಪ್ರಚಂಡ ಗೆಲುವುಬಿಜೆಪಿಗೆ 'ಜೈ' ಎಂದ ಗುಜರಾತ್ ಜನ: ಪಾಲಿಕೆ ಚುನಾವಣೆಯಲ್ಲಿ ಕಮಲಕ್ಕೆ ಪ್ರಚಂಡ ಗೆಲುವು

ನರೇಂದ್ರ ಮೋದಿ ಕ್ರೀಡಾಂಗಣವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನ ಎನಿಸಿಕೊಂಡಿದ್ದು, 1,10,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಮೊದಲ ಬಾರಿಗೆ ಭಾರತ-ಇಂಗ್ಲೆಂಡ್ ನಡುವೆ ಹೊನಲು ಬೆಳಕಿನ 'ಪಿಂಕ್ ಬಾಲ್' ಟೆಸ್ಟ್ ಪಂದ್ಯ ನಡೆಯಲಿದೆ.

ಭಾರತದ ಕ್ರೀಡಾ ನಗರ

ಭಾರತದ ಕ್ರೀಡಾ ನಗರ

ಮೊಟೆರಾದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಮತ್ತು ನರೇಂದ್ರ ಮೋದಿ ಸ್ಟೇಡಿಯಂ ಜತೆಗೆ ನರಾನ್‌ಪುರದಲ್ಲಿ ಕ್ರೀಡಾ ಸಂಕೀರ್ಣವೊಂದನ್ನು ಸಹ ನಿರ್ಮಿಸಲಾಗುತ್ತದೆ. ಈ ಮೂರೂ ಸ್ಥಳಗಳು ಯಾವುದೇ ಬಗೆಯ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಅಗತ್ಯ ಸೌಲಭ್ಯಗಳನ್ನು ಹೊಂದಲಿವೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.

'ಅಹಮದಾಬಾದ್ ಭಾರತದ ಕ್ರೀಡಾ ನಗರವಾಗಿ ಗುರುತಿಸಿಕೊಳ್ಳಲಿದೆ' ಎಂದು ಅಮಿತ್ ಶಾ ಹೇಳಿದರು.

ಬಾಲ್ಯದ ಕನಸು ನಿಜವಾಗಿದೆ

ಬಾಲ್ಯದ ಕನಸು ನಿಜವಾಗಿದೆ

'ಕ್ರಿಕೆಟ್‌ಗೆ ಮಾತ್ರವಲ್ಲ, ಇದು ಭಾರತಕ್ಕೆ ಹೆಮ್ಮೆಯ ಗಳಿಗೆ. ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನ್ನುವುದರ ಜತೆಗೆ ಇದು ಜಗತ್ತಿನ ಅತ್ಯಂತ ಆಧುನಿಕ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮಕ್ಕಳಾಗಿದ್ದಾಗ ನಮಗೆ ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣ ಭಾರತದಲ್ಲಿ ಇರಬೇಕು ಎಂಬ ಕನಸಿತ್ತು. ಈಗ ಕ್ರೀಡಾ ಸಚಿವನಾಗಿ ಇದು ಕೊನೆಗೂ ಈಡೇರಿತು ಎಂಬ ನನ್ನ ಸಂತಸವನ್ನು ವರ್ಣಿಸಲು ಆಗುತ್ತಿಲ್ಲ' ಎಂದು ಕಿರೆನ್ ರಿಜಿಜು ಹೇಳಿದರು.

ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸ

ಸತತ ಏಳು ಅಂತಾರಾಷ್ಟ್ರೀಯ ಪಂದ್ಯಗಳು

ಸತತ ಏಳು ಅಂತಾರಾಷ್ಟ್ರೀಯ ಪಂದ್ಯಗಳು

ಈ ಕ್ರೀಡಾಂಗಣವು ನವೀಕರಣಗೊಂಡ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆಯುತ್ತಿದೆ. ಇದಕ್ಕೂ ಮುನ್ನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಇಲ್ಲಿ ನಡೆದಿದ್ದವು. ಕೆಲವೇ ಸಮಯದಲ್ಲಿ ಇಲ್ಲಿ ಏಳು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಎರಡು ಟೆಸ್ಟ್ ಹಾಗೂ ಟಿ20 ಸರಣಿಯ ಎಲ್ಲ ಐದೂ ಪಂದ್ಯಗಳು ಇಲ್ಲಿಯೇ ನಡೆಯಲಿವೆ.

63 ಎಕರೆ ವಿಸ್ತೀರ್ಣ

63 ಎಕರೆ ವಿಸ್ತೀರ್ಣ

ಮೊಟೆರಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಗಿತ್ತು. ಆಗ ಅದರ ಸಾಮರ್ಥ್ಯ 49,000 ಇತ್ತು. 63 ಎಕರೆ ವಿಸ್ತೀರ್ಣದಲ್ಲಿನ ಪ್ರದೇಶದಲ್ಲಿ 40 ಅಥ್ಲೀಟ್ ಉಳಿದುಕೊಳ್ಳಲು ಸಾಧ್ಯವಾಗುವಂತಹ ಜಾಗ ಹಾಗೂ ಒಳಾಂಗಣ ಕ್ರಿಕೆಟ್ ಅಕಾಡೆಮಿಯನ್ನು ಹೊಂದಿದೆ. ನಾಲ್ಕು ತಂಡಗಳಿಗೆ ಸಾಲುವಷ್ಟು ಡ್ರೆಸ್ಸಿಂಗ್ ರೂಂಗಳಿವೆ. ಜಿಮ್, ಆರು ಒಳಾಂಗಣ ಅಭ್ಯಾಸ ಪಿಚ್‌ಗಳು, ಮೂರು ಹೊರಾಂಗಣ ಅಭ್ಯಾಸ ಪಿಚ್‌ಗಳು ಹಾಗೂ ಇತರೆ ಸವಲತ್ತುಗಳಿವೆ.

ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ

English summary
World's largest stadium situated in Gujarat's Ahmedabad, the Motera cricket ground was renamed as Narendra Modi Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X