ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ವರ್ಷದ ಕಂದಮ್ಮನ ಮಡಿಲಲ್ಲಿ ಹೊತ್ತು ಕರ್ತವ್ಯಕ್ಕೆ ಮಹಿಳಾ ಪೇದೆ ಹಾಜರ್!

|
Google Oneindia Kannada News

ಅಹ್ಮದಾಬಾದ್, ಫೆಬ್ರವರಿ.29: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾವಿರಾರು ರಕ್ಷಣಾ ಸಿಬ್ಬಂದಿ ಜೊತೆಗೆ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಈ ಸಾವಿರಾರು ಪೊಲೀಸರ ನಡುವೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ಒಂದು ವರ್ಷದ ಕಂದಮ್ಮನ ಜೊತೆಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೊಲೀಸ್ ಪೇದೆ ಸಂಗೀತಾ ಪರಮಾರ್.

ಬರೋಡಾ ಮೂಲದ ಸಂಗೀತಾ ಪರಮಾರ್ ಗೊರುವಾ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರವರಿ.24ರ ಸೋಮವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಟ್ರಂಪ್ ಬಂದು ಹೋದ ಮೇಲೆ; ವೈರಲ್ ಆಯಿತು ಅದೊಂದು ವಿಡಿಯೋಟ್ರಂಪ್ ಬಂದು ಹೋದ ಮೇಲೆ; ವೈರಲ್ ಆಯಿತು ಅದೊಂದು ವಿಡಿಯೋ

ನಮಸ್ತೆ ಟ್ರಂಪ್ ಕಾರ್ಯಕ್ರಮ ಆರಂಭಕ್ಕೂ ಮೊದಲು ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆ ಪಕ್ಕದ ಮರಕ್ಕೆ ಕಟ್ಟಿದ ಜೋಳಿಗೆಯಲ್ಲಿ ಮಹಿಳಾ ಪೇದೆ ತಮ್ಮ ಒಂದು ವರ್ಷದ ಮಗುವನ್ನು ಮಲಗಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

 ಪೊಲೀಸ್ ಇಲಾಖೆಯಿಂದ 5 ದಿನ ನಿಯೋಜನೆ

ಪೊಲೀಸ್ ಇಲಾಖೆಯಿಂದ 5 ದಿನ ನಿಯೋಜನೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಸಂಗೀತಾ ಪರಮಾರ್ ರನ್ನು 5 ದಿನಗಳ ಕಾಲ ಅಹ್ಮದಾಬಾದ್ ನಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. 1 ವರ್ಷದ ಮಗುವನ್ನು 5 ದಿನಗಳ ಕಾಲ ಬಿಟ್ಟು ಇರುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಪುಟ್ಟ ಕಂದನನ್ನೂ ಕೂಡಾ ತಾಯಿ ತನ್ನ ಮಡಿಲಿನಲ್ಲಿ ಇಟ್ಟಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.

 ತಾಯಿ ಜವಾಬ್ದಾರಿ ಜೊತೆಗೆ ಖಾಕಿ ಕರ್ತವ್ಯಪ್ರಜ್ಞೆ

ತಾಯಿ ಜವಾಬ್ದಾರಿ ಜೊತೆಗೆ ಖಾಕಿ ಕರ್ತವ್ಯಪ್ರಜ್ಞೆ

ಖಾಸಗಿ ಸುದ್ದಿ ಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಗೀತಾ ಪರಮಾರ್, ಪೊಲೀಸ ಪೇದೆಯಾಗಿ ಕರ್ತವ್ಯ ಮತ್ತು ತಾಯಿಯಾಗಿ ಮಗುವನ್ನು ನಿಭಾಯಿಸುವುದು ಎರಡೂ ನನ್ನ ಜವಾಬ್ದಾರಿ ಆಗಿದೆ. ಈ ಪೈಕಿ ಯಾವುದನ್ನೂ ಕಡೆಗಣಿಸಲು ಆಗುವುದಿಲ್ಲ. ಹೀಗಾಗಿ ನಾನು ಎರಡನ್ನೂ ಆಯ್ಕೆ ಮಾಡಿಕೊಂಡು ಈ ನಿರ್ಧಾರವನ್ನು ಮಾಡಿದೆನು ಎಂದು ತಿಳಿಸಿದ್ದಾರೆ.

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

 ಸಂಬಂಧಿಕರ ಮನೆಯಲ್ಲಿ ಬಿಡಲು ಆಗುಲುವುದಿಲ್ಲ

ಸಂಬಂಧಿಕರ ಮನೆಯಲ್ಲಿ ಬಿಡಲು ಆಗುಲುವುದಿಲ್ಲ

ಇನ್ನು, 1 ವರ್ಷದ ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಡುವುದಕ್ಕೆ ಮೊದಲು ಯೋಚಿಸಿದೆನು. ಆದರೆ, ಇನ್ನೂ ಎದೆಹಾಲು ಕುಡಿಯುತ್ತಿದ್ದ ಮಗುವನ್ನು 24 ಕಿಲೋ ಮೀಟರ್ ದೂರದಲ್ಲಿ ಇರುವ ಸಂಬಂಧಿಕರ ಮನೆಯಲ್ಲಿ ಬಿಡುವುದು ಸಾಧ್ಯವಾಗಲಿಲ್ಲ. ಹೀಗಾಗಿ ಮಗುವನ್ನೂ ಕೂಡಾ ನನ್ನ ಜೊತೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದೆ ಎಂದು ಸಂಗೀತಾ ಪರಮಾರ್ ತಿಳಿಸಿದರು.

 ಕಂದಮ್ಮನಿಗೆ ಬಿಡುವಿನ ವೇಳೆ ಹಾಲುಣಿಸಿದ ಸಂಗೀತಾ ಪರಮಾರ್

ಕಂದಮ್ಮನಿಗೆ ಬಿಡುವಿನ ವೇಳೆ ಹಾಲುಣಿಸಿದ ಸಂಗೀತಾ ಪರಮಾರ್

ಮೊದಲೇ ನನ್ನ ಕರ್ತವ್ಯದ ಅವಧಿಯ ಬಗ್ಗೆ ತಿಳಿಸಲಾಗಿತ್ತು. ಇದರಿಂದ ನಾನು ಕರ್ತವ್ಯದ ಜೊತೆಗೆ ಮಗುವನ್ನು ನಿಭಾಯಿಸಲು ಅನುಕೂಲವಾಯಿತು. ಕರ್ತವ್ಯದ ನಡುವೆ ಬಿಡುವಿನ ಸಮಯದಲ್ಲಿ ನನ್ನ ಮಗುವಿಗೆ ಎದೆಹಾಲು ನೀಡಿತ್ತಿದ್ದೆನು ಎಂದು ಪೊಲೀಸ್ ಪೇದೆ ಸಂಗೀತಾ ಪರಮಾರ್ ಹೇಳಿದರು. ಇದರ ಜೊತೆಗೆ ಒಂದು ವಿಚಾರವನ್ನು ಅವರು ಸ್ಪಷ್ಟಪಡಿಸಿದರು. ನಾನು ಇದನ್ನೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ನನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ನನಗೆ ಒಂದು ಸಾರ್ಥಕತೆಯ ಭಾವ ಮೂಡುತ್ತದೆ ಎಂದು ಅವರು ತಿಳಿಸಿದ್ದಾರೆ.

English summary
Women Police Constable Attend Duty With 1-Year Child In Gujarat. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X