ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸುಂದರ ನದಿ... ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

|
Google Oneindia Kannada News

ಅಹಮದಾಬಾದ್, ಮಾರ್ಚ್ 01: ಮಹಿಳೆಯೊಬ್ಬರು ನದಿ ಬಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ. 23 ವರ್ಷದ ಆಯೆಷಾ ಎಂಬ ಮಹಿಳೆ, ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನದಿಗೆ ಹಾರುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಅವರು, ತನ್ನದೇ ಇಚ್ಛೆಯಿಂದ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ನಗುತ್ತಲೇ, ಭಾವನಾತ್ಮಕವಾಗಿ ಮಾತನಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿಯಲ್ಲಿ ಸೆಲ್ಫೀ ವಿಡಿಯೋ ಮಾಡಿಟ್ಟು ಯುವ ವಕೀಲ ಆತ್ಮಹತ್ಯೆ; ಡೆತ್ ನೋಟ್ ನಲ್ಲೇನಿದೆ?ಬಳ್ಳಾರಿಯಲ್ಲಿ ಸೆಲ್ಫೀ ವಿಡಿಯೋ ಮಾಡಿಟ್ಟು ಯುವ ವಕೀಲ ಆತ್ಮಹತ್ಯೆ; ಡೆತ್ ನೋಟ್ ನಲ್ಲೇನಿದೆ?

ಆಯೆಷಾಗೆ 2018ರಲ್ಲಿ ಆರಿಫ್ ಖಾನ್ ಎಂಬುವರೊಂದಿಗೆ ಮದುವೆಯಾಗಿತ್ತು. ವರದಕ್ಷಿಣೆಗಾಗಿ ಗಂಡನ ಮನೆಯಲ್ಲಿ ಪೀಡಿಸುತ್ತಿದ್ದರು ಎನ್ನಲಾಗಿದೆ. "ಮನೆಯವರಿಗೆ ಹಣ ನೀಡುತ್ತಿದ್ದರೂ ಅವರ ಆಸೆಗಳು ಕೊನೆಯಾಗಲೇ ಇಲ್ಲ. ಗಂಡನೂ ತನ್ನೊಂದಿಗೆ ಈ ನಡುವೆ ಮಾತು ಬಿಟ್ಟಿದ್ದ" ಎಂದು ಹೇಳಿಕೊಂಡಿದ್ದಾರೆ.

Woman Make Video Before Ending Life In Gujarat

ನದಿ ಬಳಿ ಕುಳಿತು ಎರಡು ನಿಮಿಷ ವಿಡಿಯೋ ಮಾಡಿದ್ದು, "ನನ್ನ ನಿರ್ಧಾರದಂತೆ ಈ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ" ಎಂದು ಹೇಳಿಕೊಂಡಿದ್ದಾರೆ. ತಂದೆಯನ್ನು ಕೇಳಿಕೊಂಡಿರುವ ಅವರು, "ನೀವು ಎಷ್ಟು ದಿನ ಹೋರಾಡುತ್ತೀರಾ? ಕೇಸ್ ವಾಪಸ್ ತೆಗೆದುಕೊಳ್ಳಿ. ಆಯೆಷಾ ಕಿತ್ತಾಟಗಳಿಗೆ ಇರುವವಳಲ್ಲ. ನಾನು ಆರಿಫ್ ಪ್ರೀತಿಸುತ್ತೇನೆ. ಆತನಿಗೆ ಏಕೆ ಸಮಸ್ಯೆ ನೀಡಬೇಕು. ಅವನಿಗೆ ಸ್ವಾತಂತ್ರ್ಯ ಕೊಡುತ್ತಿದ್ದೇನೆ. ನಾನು ನನ್ನ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದೇನೆ. ಅಲ್ಲಾನಿಗೆ ಕೇಳುತ್ತೇನೆ. ನಾನು ಮಾಡಿದ ತಪ್ಪೇನೆಂದು" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಸುಂದರವಾದ ನದಿ, ನನ್ನನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ ಎನ್ನುವ ಭರವಸೆ ಇದೆ. ನಾನು ಗಾಳಿಯಿದ್ದಂತೆ. ತೇಲಲು ಬಯಸುತ್ತೇನೆ, ತೇಲುತ್ತಲೇ ಇರುತ್ತೇನೆ ಎಂದು ಹೇಳಿ ನದಿಗೆ ಹಾರಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

English summary
A woman, identified as Ayesha, recorded an emotional video on her phone before ending life in ahmedabad of gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X