ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PUBG ಆಡಲು ಬಿಡದ ಪತಿಯನ್ನೇ ಬಿಡಲು ನಿರ್ಧರಿಸಿದ ಹತ್ತೊಂಬತ್ತು ವರ್ಷದ ಹೆಂಡತಿ

|
Google Oneindia Kannada News

ಅಹ್ಮದಾಬಾದ್ (ಗುಜರಾತ್), ಮೇ 21: ಆನ್ ಲೈನ್ ಆಟ PUBG (PlayerUnknown Battlegrouds) ಬಗ್ಗೆ ದಿನಕ್ಕೆ ಒಂದೊಂದು ಬಗೆಯಲ್ಲಿ ವಿಚಿತ್ರ ಸುದ್ದಿ ಬರುತ್ತಿದೆ. ಇದೀಗ ಗುಜರಾತ್ ನ ಅಹ್ಮದಾಬಾದ್ ನಿಂದ ಬಂದಿರುವ ಸುದ್ದಿ ಏನು ಗೊತ್ತಾ? ಹತ್ತೊಂಬತ್ತು ವರ್ಷದ ವಿವಾಹಿತೆ, ಒಂದು ಮಗುವಿನ ತಾಯಿ ತನ್ನ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇದೇನು ಕುಟುಂಬ ಕಲಹಕ್ಕೋ ಅಥವಾ ಕಿರುಕುಳಕ್ಕೋ ಖಂಡಿತಾ ಅಲ್ಲ. ಆಕೆಗೆ ಇರುವ PUBG ವ್ಯಸನಕ್ಕೆ ಪತಿಯೇ ಅಡ್ಡಿ ಆಗಿದ್ದಾನೆ ಎಂಬುದು ಆಕ್ಷೇಪ ಹಾಗೂ ಆಕ್ರೋಶ. ಮಹಿಳಾ ಸಹಾಯವಾಣಿ 181ಕ್ಕೆ ಕರೆ ಮಾಡಿ, ನನಗೆ ವಿವಾಹ ವಿಚ್ಚೇದನ ಪಡೆಯಲು ನೆರವಾಗಿ ಎಂದು ಕೇಳಿಕೊಂಡಾಗ ಈ ಸಂಗತಿ ಬೆಳಕಿಗೆ ಬಂದಿದೆ.

ಆದರೆ, ಇದನ್ನೇ ಮೊದಲನೆಯ ಕಾರಣ ಎಂಬಂತೆ ಹೇಳಿಲ್ಲ. ತನ್ನನ್ನು ಮಹಿಳಾ ನಿಗಾ ಕೇಂದ್ರದಲ್ಲಿ ದಾಖಲಿಸುವಂತೆ, ಕುಟುಂಬ ಹಾಗೂ ಪೋಷಕರಿಂದ ದೂರ ಇರಿಸಿ, ಆಗ ಬಿಡುವಿನ ವೇಳೆಯಲ್ಲಿ ತನ್ನ ಆಟದ ಸಂಗಾತಿ ಜತೆ ಆಡಬಹುದು ಎಂದಿದ್ದಾಳೆ. ನನ್ನ ಪತಿಯಾಗಲಿ, ಕುಟುಂಬದವರಾಗಲೀ ಪೂರಕವಾಗಿ ಸ್ಪಂದಿಸಿಲ್ಲ ಎಂದು ಕೂಡ ಹೇಳಿದ್ದಾಳೆ.

Woman decided to divorce husband for PUBG addiction

ಮಹಿಳಾ ನಿಗಾ ಕೇಂದ್ರದಲ್ಲಿ ಫೋನ್ ಬಳಸಲು ಅವಕಾಶ ಇಲ್ಲ ಹಾಗೂ ಅಲ್ಲಿಂದ ಹೊರ ಹೋಗುವುದಕ್ಕೂ ಅವಕಾಶ ನೀಡುವುದಿಲ್ಲ ಎಂದಾಗ ತನ್ನ ನಿರ್ಧಾರ ಬದಲಿಸಿದ್ದಾಳೆ. ಆಗ ತನ್ನ PUBG ಸಂಗಾತಿಯನ್ನು ತಲುಪಲು ನೆರವಾಗುವಂತೆ ಆಕೆ ಕೇಳಿಕೊಂಡಿದ್ದಾಳೆ. ಈಕೆಗೆ ಇರುವ ಆಟದ ಹುಚ್ಚು ನೋಡಿ ರೋಸತ್ತ ಪತಿಯು ಆಟವಾಡುವುದಕ್ಕೆ ಅಡ್ಡಿ ಪಡಿಸಿದ್ದಾರೆ. ಇದರಿಂದ ಇಬ್ಬರ ಮಧ್ಯೆ ಜಗಳ ಏರ್ಪಟ್ಟು, ಪತಿಯನ್ನೇ ತ್ಯಜಿಸಲು ಮತ್ತು ಪೋಷಕರ ಬಳಿ ಹೋಗಲು ಆಕೆ ನಿರ್ಧರಿಸಿದ್ದಾಳೆ.

ಅಲ್ಲೂ ಈಕೆಯ ವ್ಯಸನ ಕಂಡು, ಅವರು ಕೂಡ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಇದೀಗ ಆಕೆ ವ್ಯಸನಕ್ಕೆ ಚಿಕಿತ್ಸೆ ಕೊಡಿಸುವ ತಯಾರಿ ನಡೆದಿದೆ. ಈ ರೀತಿಯಾದ ಎರಡನೇ ಪ್ರಕರಣ ಇದು. PUBG ಆಟವನ್ನ್ ನೇಪಾಳ, ಇರಾಕ್ ಹಾಗೂ ಭಾರತದ ಕೆಲ ಭಾಗದಲ್ಲಿ ನಿಷೇಧಿಸಲಾಗಿದೆ. ತುಂಬ ದೀರ್ಘ ಕಾಲ ಈ ಆಟ ಆಡುವವರ ಆರೋಗ್ಯದ ಮೇಲೆ ಪರಿಣಾಮ ಬೀರಿದ ಬಗ್ಗೆ ವರದಿ ಆದ ಮೇಲೆ ಈ ನಿರ್ಧಾರ ಮಾಡಲಾಗಿದೆ.

English summary
Woman decided to divorce husband for PUBG addiction in Ahmedabad, Gujarat. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X