ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸದಿದ್ದರೆ ಕೊವಿಡ್-19 ರೋಗಿಗಳ ಸೇವೆ ಮಾಡಬೇಕು!

|
Google Oneindia Kannada News

ಅಹ್ಮದಾಬಾದ್, ನವೆಂಬರ್.27: ಕೊರೊನಾವೈರಸ್ ನಿರ್ಬಂಧಗಳನ್ನು ಉಲ್ಲಂಘಿಸಿದವರನ್ನು ಕೊವಿಡ್-19 ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಕಳುಹಿಸಬೇಕು. ಸಮುದಾಯದಲ್ಲಿ ಸೋಂಕು ಹರಡದಂತೆ ಜಾಗೃತಿ ವಹಿಸಲು ಮಾರ್ಗಸೂಚಿ ರಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ತೋರಿದವರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಸುಮೋಟೋ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಆದೇಶಿಸಿದೆ. ಕೊವಿಡ್-19 ಮಾರ್ಗಸೂಚಿ ಕಡೆಗಣಿಸಿದರೆ ಅದನ್ನು ಪುನರಾವರ್ತಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಪೋಷಕರ ಪ್ರಶ್ನೆ: ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯವೇ?ಪೋಷಕರ ಪ್ರಶ್ನೆ: ಮಕ್ಕಳಿಗೂ ಕೊರೊನಾ ಲಸಿಕೆ ಕಡ್ಡಾಯವೇ?

"ನಾವು ಮಾಸ್ಕ್ ಧರಿಸದ ವ್ಯಕ್ತಿಗಳಿಂದ ದಂಡವನ್ನು ವಸೂಲಿ ಮಾಡುತ್ತೇವೆ. ಆದರೆ ಈ ವಿಚಾರವು ಅಷ್ಟಕ್ಕೆ ಮಾತ್ರ ಸೀಮಿತವಾಗಿರದೇ ತೀರಾ ಗಂಭೀರ ಹಾಗೂ ಪ್ರಮುಖ ವಿಚಾರವಾಗಿದೆ ಎಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು. ಮಾಸ್ಕ್ ಗಳನ್ನು ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದೇ ಹೋದಲ್ಲಿ ರಾಜ್ಯವು ಎರಡನೇ ಹಂತದ ಕೊರೊನಾವೈರಸ್ ಸೋಂಕಿನ ಅಪಾಯಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತವೆ" ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ.

Who Not Wearing Masks In Gujarat Will Sent To COVID Care Centres For Service

ಮಾಸ್ಕ್ ನಿಯಮ ಕಟ್ಟುನಿಟ್ಟಿನ ಜಾರಿಯಲ್ಲಿ ವಿಫಲ:

ಗುಜರಾತ್ ನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂದು ವಕೀಲ ವಿಶಾಲ್ ಅಂತ್ವಾನಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಾಸ್ಕ್ ಕಡ್ಡಾಯಗೊಳಿಸುವಲ್ಲಿ ವಿಫಲವಾಗಿದ್ದಕ್ಕೆ ಕಿಡಿ ಕಾರಿದೆ. "ಒಂದು ಬಾರಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಎಚ್ಚರಿಕೆಯನ್ನು ನೀಡಬೇಕು. ಅದೇ ತಪ್ಪನ್ನು ಪುನರಾವರ್ತಿಸಿದರೆ ಅಂಥವರನ್ನು ಕೊವಿಡ್-19 ಕೇಂದ್ರದಲ್ಲಿ ಕೆಲಸ ಮಾಡುವುದಕ್ಕೆ ಕಳುಹಿಸಬೇಕು. ಹಾಗಾದಲ್ಲಿ ಮತ್ತೊಮ್ಮೆ ಅಂಥವರು ಎಂದಿಗೂ ಮಾಸ್ಕ್ ಹಾಕಿಕೊಳ್ಳುವುದಕ್ಕೆ ಮರೆಯುವುದಿಲ್ಲ" ಎಂದು ಕೋರ್ಟ್ ಹೇಳಿದೆ.

ಮಾಸ್ಕ್ ಧರಿಸದವರಿಗೆ ಭಾರಿ ದಂಡ:

ಗುಜರಾತ್ ಪ್ರಮುಖ ಮಹಾನಗರಗಳು ಎಂದು ಗುರುತಿಸಿಕೊಂಡಿರುವ ಅಹ್ಮದಾಬಾದ್, ಸೂರತ್, ವಡೋದರಾ, ರಾಜಕೋಟ್ ನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ 2000 ರೂಪಾಯಿ ದಂಡ ವಿಧಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯಾದ್ಯಂತ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ.

English summary
Who Not Wearing Masks In Gujarat Will Sent To COVID Care Centres For Service: High Court Order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X