• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಿ ಮನೆ ಹೊಕ್ಕು ಹೆಕ್ಕಿ ಹೆಕ್ಕಿ ಹೊಡೆಯುತ್ತೇವೆ : ಮೋದಿ ಘರ್ಜನೆ

|
   ಹೆಕ್ಕಿ ಹೆಕ್ಕಿ ಹೊಡೆಯುತ್ತೇವೆ : ಮೋದಿ ಘರ್ಜನೆ | Oneindia Kannada

   ಅಹ್ಮದಾಬಾದ್, ಮಾರ್ಚ್ 05: "ಭಯೋತ್ಪಾದಕರನ್ನು ಅವರ ನೆಲೆಗೇ ನುಗ್ಗಿ ನಾವು ಹೊಡೆಯುತ್ತೇವೆ. ಅವರು ಭೂಮಿಯೊಳಗೆ ಅವಿತಿದ್ದರೂ ನಾವು ಅವರನ್ನು ಸುಮ್ಮನೆ ಬಿಡೋಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಘರ್ಜಿಸಿದ್ದಾರೆ.

   ಗುಜರಾತಿನ ಅಹ್ಮದಾಬಾದಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ಭಾರತ, ಉಗ್ರನೆಲೆಯ ಮೇಲೆ ನಡೆಸಿದ ಏರ್ ಸ್ಟ್ರೈಕ್ ಅನ್ನು ಸಮರ್ಥಿಸಿಕೊಂಡರು.

   ರಮ್ಯಾ, ಮೋದಿಯನ್ನು ನಂಬುವುದಿಲ್ಲವಂತೆ: "ಕತ್ತೆ ಬಾಲ ಕುದುರೆ ಜುಟ್ಟು" ಅಂದ್ರು ಟ್ವಿಟ್ಟಿಗರು

   "ನಾವು ಉಗ್ರರನ್ನು ಅವರ ನೆಲೆಯಲ್ಲೇ ಹೊಡೆಯುತ್ತೇವೆ. ಅವರನ್ನು ಮುಗಿಸಬೇಕು ಎಂದು ನಿರ್ಧರಿಸಿದರೆ ಅವರು ಎಲ್ಲಿ ಅಡಗಿದ್ದಾರೆ ಎಂಬುದು ಪ್ರಶ್ನೆಯೇ ಆಗುವುದಿಲ್ಲ. ಏಕೆಂದರೆ ಅವರು ಪಾತಾಳದಲ್ಲಿ ಅಡಗಿದ್ದರೂ ನಾವು ಅವರನ್ನು ಬಿಡುವುದಿಲ್ಲ" ಎಂದು ಮೋದಿ ಭಯೋತ್ಪಾದಕರಿಗೆ ಖಡಕ್ ವಾರ್ನಿಂಗ್ ನೀಡಿದರು.

   "ದೊಡ್ಡ ಮತ್ತು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಮ್ಮ ಸರ್ಕಾರ ಎಂದಿಗೂ ಹಿಂದೆ ಬಿದ್ದಿಲ್ಲ. ಆದರೆ ಇಂದು ವಿಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಪಾಕಿಸ್ತಾನಿ ಪತ್ರಿಕೆಗಳಲ್ಲಿ ಹೆಡ್ ಲೈನ್ ಆಗುತ್ತಿದೆ" ಎಂದು ಮೋದಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

   ಕೆಲವು ನಾಯಕರ ಹೇಳಿಕೆಗೆ ಪಾಕಿಸ್ತಾನ ಚಪ್ಪಾಳೆ ತಟ್ಟುತ್ತಿದೆ: ಮೋದಿ

   "ನಾವು ಈ ಏರ್ ಸ್ಟ್ರೈಕ್ ಅನ್ನು ಚುನಾವಣೆಗಾಗಿ ಮಾಡಿದ್ದೇವೆ ಎನ್ನುವ ವಿಪಕ್ಷಗಳಿಗೆ ಒಂದು ಪ್ರಶ್ನೆ, ನಾವು 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾಗ, ಯಾವ ಚುನಾವಣೆ ಇತ್ತು? ಆ ಸಂದರ್ಭದಲ್ಲಿ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವೇನಿತ್ತು?" ಎಂದು ಮೋದಿ ಪ್ರಶ್ನಿಸಿದರು.

   English summary
   Will kill terrorist in their dens, we will not spare them if they hide inside earth, Prime minister Narendra Modi told.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X