ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಐಇಡಿಗಿಂತ, ಮತದಾರರ ವೋಟಿಗೇ ಹೆಚ್ಚು ಶಕ್ತಿ: ಮೋದಿ

|
Google Oneindia Kannada News

ಅಹ್ಮದಾಬಾದ್, ಏಪ್ರಿಲ್ 23: "ಉಗ್ರರ ಐಇಡಿ(ಸುಧಾರಿತ ಸ್ಫೋಟಕ)ಗಿಂತ ಮತದಾರರ ವೋಟಿಗೇ ಪ್ರಜಾಪ್ರಭುತ್ವದಲ್ಲಿ ಹೆಚ್ಚಿ ಶಕ್ತಿ ಇದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುಜರಾತಿನ ಅಹ್ಮದಾಬಾದಿನಲ್ಲಿ ಮತಚಲಾಯಿಸಿದ ಅವರು, ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಲೋಕಸಭೆ ಚುನಾವಣೆ LIVE: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ಎಸೆತಲೋಕಸಭೆ ಚುನಾವಣೆ LIVE: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಬಾಂಬ್ ಎಸೆತ

"ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಗುಜರಾತಿನಲ್ಲಿ ಮತಚಲಾಯಿಸಲು ನನಗೆ ಹೆಮ್ಮೆಯಾಗುತ್ತಿದೆ. ಕುಂಭಮೇಳದಲ್ಲಿ ಮುಳುಗೆದ್ದಾಗ ಎಷ್ಟು ಪವಿತ್ರರಾದ ಭಾವನೆ ಬರುತ್ತದೋ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಚಲಾಯಿಸದ ನಂತರವೂ ನನಗೆ ಅಂಥದೇ ಭಾವನೆ ಬರುತ್ತದೆ" ಎಂದು ಮೋದಿ ಹೇಳಿದರು.

Voter ID is stronger than IEDs of terrorists: Narendra Modi

"ಉಗ್ರರ ಆಯುಧ ಐಇಡಿಯಾಗಿದ್ದರೆ, ಪ್ರಜಾಪ್ರಭುತ್ವದ ಬಲ ವೋಟರ್ ಐಡಿ! ಉಗ್ರರ ಬಳಿ ಇರುವ ಐಇಡಿ ಗಿಂತ ಪ್ರಜಾಪ್ರಭುತ್ವದಲ್ಲಿ ವೋಟರ್ ಐಡಿ ಗೇ ಹೆಚ್ಚು ಶಕ್ತಿ ಇದೆ ಎನ್ನಲು ಹೆಮ್ಮೆಯಾಗುತ್ತದೆ" ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮೋದಿ ಕರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮೋದಿ ಕರೆ

ಅಹ್ಮದಾಬಾದಿನ ರಾನಿಪ್ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದ ನರೇಮದ್ರ ಮೋದಿ, ಅದಕ್ಕೂ ಮುನ್ನ ಗಾಂಧಿನಗರಕ್ಕೆ ತೆರಳಿ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದರು.

ವಿಡಿಯೋ: ಪುತ್ರ ಪ್ರಧಾನಿ ಮೋದಿಗೆ ತಾಯಿ ಕೊಟ್ಟ ಉಡುಗೊರೆ ಏನು?ವಿಡಿಯೋ: ಪುತ್ರ ಪ್ರಧಾನಿ ಮೋದಿಗೆ ತಾಯಿ ಕೊಟ್ಟ ಉಡುಗೊರೆ ಏನು?

ಇಂದು ಲೋಕಭೆಗೆ ಮೂರನೇ ಹಂತದ ಮತದಾನ ನಡೆಯುತ್ತಿದ್ದು, 15 ರಾಜ್ಯಗ 117 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
PM Narendra Modi in Ahmedabad after casting his vote said, The weapon of terrorism is IED, the strength of democracy is voter ID. I can say with surety that the voter ID is much much more powerful than an IED, so we should understand the strength of our voter IDs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X