ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಅಹ್ಮದಾಬಾದಿನಲ್ಲಿ ಶಾಪಿಂಗ್ ಮಾಡಿದ ಪ್ರಧಾನಿ ಮೋದಿ!

|
Google Oneindia Kannada News

Recommended Video

ಅಹ್ಮದಾಬಾದ್ ನಲ್ಲಿ ನರೇಂದ್ರ ಮೋದಿ ಶಾಪಿಂಗ್ | ವೈರಲ್ ವಿಡಿಯೋ | Oneindia Kannada

ಅಹ್ಮದಾಬಾದ್, ಜನವರಿ 18: ಖಾದಿ ಬಟ್ಟೆ ಕೊಂಡು, ರುಪೇ ಕಾರ್ಡ್ ಮೂಲಕ ಹಣ ನೀಡಿ ಪ್ರಧಾನಿ ನರೇಂದ್ರ ಮೊದಿ ಅವರು ಶಾಪಿಂಗ್ ನಲ್ಲಿ ಬ್ಯುಸಿಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತಿನ ಅಹ್ಮದಾಬಾದಿನಲ್ಲಿ ನಡೆಯುತ್ತಿರುವ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿತ್ ನಲ್ಲಿ ಭಾಗವಹಿಸಿದ್ದ ಅವರು ನಂತರ ಅಂಬವಾಡ್ ಶಾಪಿಂಗ್ ಹಬ್ಬದಲ್ಲಿ ಪಾಲ್ಗೊಂಡರು. ಈ ಸಮಯದಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.

ಹೂಡಿಕೆದಾರರ ಬೃಹತ್ ಸಮಾವೇಶ: 3 ದಿನ ಗುಜರಾತಿನಲ್ಲಿ ಮೋದಿಹೂಡಿಕೆದಾರರ ಬೃಹತ್ ಸಮಾವೇಶ: 3 ದಿನ ಗುಜರಾತಿನಲ್ಲಿ ಮೋದಿ

ನಂತರ ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, "ಅಹ್ಮದಾಬಾದಿನ ಶಾಪಿಂಗ್ ಹಬ್ಬದಲ್ಲಿ ಶಾಪಿಂಗ್ ಮಾಡದೆ ಇರಲು ನನಗೆ ಸಾಧ್ಯವಾಗಿಲ್ಲ. ಕೆಲವು ಖಾದಿ ಉತ್ಪನ್ನಗಳನ್ನು ನಾನು ಖರೀದಿಸಿ, ರುಪೇ ಕಾರ್ಡ್ ಮೂಲಕ ಹಣ ನೀಡಿದೆ. ನೀವು ಸಹ ಖಾದಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸಿ, ಈ ಉದ್ಯಮದ ಸಬಲೀಕರಣಕ್ಕೆ ನೆರವಾಗಿ. ಅದು ಈ ಕೈಗಾರಿಕೆಗೆ ಮತ್ತು ಬಾಪೂ ಅವರಿಗೂ ನೀಡುವ ಗೌರವ" ಎಂದಿದ್ದಾರೆ.

Viral video: PM Modi busy in shopping at Ahmedabad

ಜನರ ನಾಡಿ ಮಿಡಿತ ಅರಿಯಲು ನಮೋ Appನಿಂದ ಸಮೀಕ್ಷೆಜನರ ನಾಡಿ ಮಿಡಿತ ಅರಿಯಲು ನಮೋ Appನಿಂದ ಸಮೀಕ್ಷೆ

ಜ.18-20 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಸಮಾವೇಶದಲ್ಲಿ ಸುಮಾರು ಐದು ದೇಶಗಳ, 30000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹಲವರು ಪ್ರತಿಷ್ಠಿತ ಕಂಪನಿಗಳ ಆಯಕಟ್ಟಿನ ಹುದ್ದೆಯಲ್ಲಿರುವವರೂ ಭಾಗವಹಿಸಲಿದ್ದಾರೆ. ಮುಖೇಶ್ ಅಂಬಾನಿ, ಉದಯ್ ಕೋಟಕ್, ಕುಮಾರ್ ಮಂಗಲಂ ಬಿರ್ಲಅ, ಗೌತಮ್ ಅದಾನಿ, ಆದಿ ಗೋದ್ರೇಜ್, ಪಂಕಜ್ ಪಟೇಲ್ ಸೇರಿದಂತೆ ಭಾರತದ ಶ್ರೀಮಂತ ಉದ್ಯಮಿಗಳು ಭಾಗವಹಿಸಲಿದ್ದಾರೆ.

English summary
Prime Minister on Thursday purchased a Khadi jacket at the Amdavad Shopping Festival, being organised on sidelines of the ninth edition of the Vibrant Gujarat Global Summit. He then used a RuPay card to pay for it. Video goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X