ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ನೆರೆ ರಾಜ್ಯಗಳ ವಲಸಿಗರ ಮೇಲೆ ಸಾಮೂಹಿಕ ಹಲ್ಲೆ, 450 ಮಂದಿ ಬಂಧನ

|
Google Oneindia Kannada News

ಅಹ್ಮದಾಬಾದ್‌, ಅಕ್ಟೋಬರ್ 08: ಬಿಜೆಪಿಯ ವಿಕಾಸದ ಮಾಡೆಲ್ ಎನಿಸಿಕೊಂಡಿದ್ದ ಗುಜರಾತ್‌ನಲ್ಲಿ ನೆರೆಯ ರಾಜ್ಯದಿಂದ ವಲಸೆ ಬಂದವರ ಮೇಲೆ ಸಾಮೂಹಿಕ ಹಲ್ಲೆ ಪ್ರಾರಂಭವಾಗಿವೆ.

ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿ ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿ

ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ ಕಳೆದ ವಾರ 14 ವರ್ಷದ ಯುವತಿ ಮೇಲೆ ಬಿಹಾರದ ಮೂಲದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ ನಂತರ ಈ ಹಲ್ಲೆಗಳು ಆರಂಭವಾಗಿವೆ. ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ರಾಜ್ಯಗಳಿಂದ ಗುಜರಾತ್‌ಗೆ ವಲಸೆ ಬಂದಿದ್ದವರ ಮೇಲೆ ಸಾಮೂಹಿಕ ದಾಳಿಗಳು ನಡೆಯುತ್ತಿವೆ.

ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು ಗುಜರಾತ್ ನ ಗಿರ್ ಅರಣ್ಯದಲ್ಲಿ 18 ದಿನದಲ್ಲಿ 31 ಸಿಂಹ ಸಾವು

ವರ್ಷಾನುಗಟ್ಟಲೆ ಗುಜರಾತ್‌ನಲ್ಲೇ ವಾಸಿಸುತ್ತಿರುವ ನೆರೆ ರಾಜ್ಯದ ವಲಸಿಗರ ಮೇಲೂ ಹಲ್ಲೆಗಳು ನಡೆದಿರುವ ಬಗ್ಗೆ ವರದಿಯಾಗಿದ್ದು. ದಾಳಿಗೆ ಒಳಗಾಗುವ ಭೀತಿಯಿಂದ ಸಾವಿರಾರು ಜನ ಈಗಾಗಲೇ ಗುಜರಾತ್‌ ತೊರೆದಿದ್ದಾರೆ.

Violence against migrants of UP, Bihar in Gujarat

ವಿಶೇಷವಾಗಿ ಉತ್ತರ ಪ್ರದೇಶ ಹಾಗೂ ಬಿಹಾರದ ವಲಸಿಗರನ್ನೇ ಜನ ದಾಳಿಗೆ ಗುರಿ ಮಾಡಿಕೊಳ್ಳುತ್ತಿದ್ದಾರೆ. ವಲಸಿಗರಿಗೆ ಬಾಡಿಗೆ ಹಲವು ಮನೆ ಮಾಲೀಕರು ಮನೆ ತೊರೆಯುವಂತೆ ಸೂಚಿಸಿ ಮನೆ ಖಾಲಿ ಮಾಡಿಸಿದ್ದಾರೆ. ಪ್ರತಿದಿನ ನೂರಾರು ಜನ ಬಸ್ಸುಗಳಲ್ಲಿ ತಮ್ಮ-ತಮ್ಮ ರಾಜ್ಯಗಳಿಗೆ ವಾಪಸ್ ಹೊರಟಿದ್ದಾರೆ.

ಅಬ್ಬಾ! ಗುಜರಾತಿಗಳು ಘೋಷಿಸಿದ್ದ ತೆರಿಗೆ ಕಟ್ಟದ ಮೊತ್ತ 18,000 ಕೋಟಿ ಅಬ್ಬಾ! ಗುಜರಾತಿಗಳು ಘೋಷಿಸಿದ್ದ ತೆರಿಗೆ ಕಟ್ಟದ ಮೊತ್ತ 18,000 ಕೋಟಿ

ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ಜನರನ್ನು ತಾಳ್ಮೆಯಿಂದ ಇರುವಂತೆ ಮನವಿ ಮಾಡಿದೆ. ಆದರೆ ಹಲ್ಲೆಗಳು ನಿಲ್ಲುತ್ತಿಲ್ಲ. ಹಲ್ಲೆಗೆ ಸಂಬಂಧಿಸಿದಂತೆ ಈವರೆಗೆ 342 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಮೆಹ್ಶಾಂತ ಹಾಗೂ ಸಬರ್‌ಕಾಂತಾ ಜಿಲ್ಲೆಗಳಲ್ಲೇ ಹತಿ ಹೆಚ್ಚು ಹಲ್ಲೆಗಳು ನಡೆದಿವೆ. ನೆರೆ ರಾಜ್ಯದ ವಲಸಿಗರ ವಿರುದ್ಧ ದ್ವೇಷ ಕಾರುವ ಸಂದೇಶಗಳು ಫೇಸ್‌ಬುಕ್, ಟ್ವಿಟ್ಟರ್‌, ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದ್ದು ಹಲ್ಲೆಗೆ ಪ್ರಚೋದನೆ ನೀಡಿದೆ.

English summary
Violence started from last one week in Gujarat against migrants of Uttar Pradesh and Gujarat. Last week a 14 year girl raped by Bihar migrant so violence sparked in Gujarat's many district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X