ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಸಿಎಂ ರೂಪಾಣಿ ಅವರಿಗೆ ಏನಾಗಿತ್ತು, ಆರೋಗ್ಯ ಸ್ಥಿತಿ ಹೇಗಿದೆ?

|
Google Oneindia Kannada News

ಅಹಮದಾಬಾದ್,ಫೆಬ್ರವರಿ 15: ಗುಜರಾತ್ ಮುಖ್ಯ ಮಂತ್ರಿ ವಿಜಯ್ ರೂಪಾಣಿ ಆರೋಗ್ಯದ ಮೇಲೆ 24 ತಾಸು ನಿಗಾ ಇಡಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.

ರೂಪಾಣಿ ಅವರಿಗೆ ಆಯಾಸ ಹಾಗೂ ಡೀಹೈಡ್ರೇಷನ್ ಆಗಿತ್ತು ಹಾಗಾಗಿ ಮೂರ್ಛೆ ಹೋಗಿದ್ದರು, ಸಂಪೂರ್ಣ ತಪಾಸಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳ ವರದಿ ಸಾಮಾನ್ಯವಾಗಿದೆ ಎಂದು ಯುಎನ್ ಮೆಹ್ತಾ ಆಸ್ಪತ್ರೆಯ ವೈದ್ಯರಾದ ಡಾ.ಆರ್‌ಕೆ.ಪಟೇಲ್ ಮಾಹಿತಿ ನೀಡಿದ್ದಾರೆ.

ಭಾಷಣ ಮಾಡುವಾಗಲೇ ಕುಸಿದುಬಿದ್ದ ಗುಜರಾತ್ ಮುಖ್ಯಮಂತ್ರಿಭಾಷಣ ಮಾಡುವಾಗಲೇ ಕುಸಿದುಬಿದ್ದ ಗುಜರಾತ್ ಮುಖ್ಯಮಂತ್ರಿ

ಪ್ರಧಾನಿ ನರೇಂದ್ರ ಮೋದಿಯವರು ರೂಪಾನಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರೂಪಾಣಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

Vijay Rupani To Be Kept Under Observation For 24 Hours

ಮುಖ್ಯಮಂತ್ರಿಗಳ ಆರೋಗ್ಯ ಸ್ಥಿರವಾಗಿದೆ,ಅವರ ಆರೋಗ್ಯದ ಮೇಲೆ 24 ತಾಸು ನಿಗಾ ಇರಿಸಲಾಗುವುದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಭಾನುವಾರ ಸಂಜೆ ವಡೋದರಾದ ನಿಜಾಂಪುರ ಪ್ರದೇಶದ ಮೆಹ್ಸಾನನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದರು

ಫೆಬ್ರವರಿ 21 ರಂದು ನಡೆಯಲಿರುವ ನಾಗರಿಕ ಸಮಿತಿಗಳ ಚುನಾವಣೆಗೆ ಮುನ್ನ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ರೂಪಾನಿ ವಡೋದರಾಗೆ ಆಗಮಿಸಿದ್ದರು.

ಎರಡು ಸಭೆಗಳ ನಂತರ , ಅವರು ನಗರದ ನಿಜಾಂಪುರ ಪ್ರದೇಶದಲ್ಲಿ ನಡೆದ ಮೂರನೇ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು ಭಾಷಣ ಮಾಡುವಾಗ ರೂಪಾನಿ ಕುಸಿದು ಬಿದ್ದಾಗ ಹಿಂದೆ ನಿಂತಿದ್ದ ಬಾಡಿ ಗಾರ್ಡ್ ಅವರನ್ನು ಹಿಡಿಯಲು ಪ್ರಯತ್ನಿಸಿಲ್ಲ.

ಆ ವೇಳೆ ಸಹಾಯಕ್ಕಾಗಿ ಬಿಜೆಪಿ ನಾಯಕರು ಧಾವಿಸಿದರೂ ಅಷ್ಟರಲ್ಲೇ ಸಿಎಂ ಕುಸಿದು ಬಿದ್ದಾಗಿತ್ತು. ಆದರೆ ಕೆಲ ನಿಮಿಷಗಳಲ್ಲಿ ಅವರು ಪುನಃ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ಭಾಷಣ ಮುಂದುವರಿಸಲಿಲ್ಲ.

English summary
The test reports of Gujarat Chief Minister Vijay Rupani, who had fainted during a rally in Vadodara, are normal, but he would be kept under observation in a hospital here for 24 hours, officials said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X