ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಏಕತಾ ಪ್ರತಿಮೆ ಅನಾವರಣದ ಅಮೋಘ ಕ್ಷಣಗಳು

|
Google Oneindia Kannada News

Recommended Video

Sardar Vallabhbhai Patel Birth Anniversary : ಸರ್ದಾರ್ ಪಟೇಲ್ ಏಕತಾ ಪ್ರತಿಮೆಯ ಅನಾವರಣದ ಅದ್ಭುತ ಕ್ಷಣಗಳು

ಅಹ್ಮದಾಬಾದ್, ಅಕ್ಟೋಬರ್ 31: ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿನ ಮೇಲೆ ಮೀಟರ್ ಎತ್ತರದಲ್ಲಿ ತಲೆ ಎತ್ತಿನಿಂತ ಆ ಭವ್ಯ ಮೂರ್ತಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು!

ಸ್ವಾತಂತ್ರ್ಯಾನಂತರ ಭಾರತದಲ್ಲಿ ಹರಿದುಹಂಚಿ ಹೋಗಿದ್ದ ರಾಜಮನೆತನಗಳನ್ನು ಒಗ್ಗೂಡಿಸಿ, ಅವರನ್ನೆಲ್ಲ ಭಾರತ ಎಂಬ ಒಂದೇ ಸೂರಿನಡಿ ತಂದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್(31 ಅಕ್ಟೋಬರ್ 1875 -15 ಡಿಸೆಂಬರ್ 1950) ಅವರಿಗೆ ಸಲ್ಲುತ್ತದೆ. ಅವರ 143 ನೇ ಜನ್ಮದಿನೋತ್ಸವದಂದು ಏಕತಾ ಪ್ರತಿಮೆ ಅನಾವರಣಗೊಂಡಿದೆ.

LIVE: ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿLIVE: ಪ್ರತಿಮೆ ಅನಾವರಣದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ: ಮೋದಿ

ಇದು ಐತಿಹಾಸಿಕ ಕ್ಷಣ. ಏಕತೆಯ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಅವಿಸ್ಮರಣೀಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಣ್ಮನ ತಣಿಸುತ್ತಿದೆ.

ಭಾರತದ ಪ್ರಮುಖ ಪ್ರವಾಸೀ ತಾಣವಾಗುತ್ತಾ?

ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ರ ಈ ಬೃಹತ್ ಪ್ರತಿಮೆಯು 182 ಮೀಟರ್ (ಸುಮಾರು 597 ಅಡಿ) ಎತ್ತರವಿದೆ. ದಕ್ಷಿಣ ಗುಜರಾತ್‌ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರಿನಲ್ಲಿ ಇದನ್ನು ನಿರ್ಮಿಸಲಾಗಿರುವುದರಿಂದ ಇದು ಖಂಡಿತವಾಗಿಯೂ ಭಾರತದ ಪ್ರಮುಖ ಪ್ರವಾಸೀ ತಾಣವಾಗಿ ಹೆಸರಾಗುವುದು ಖಂಡಿತ ಎನ್ನಿಸಿದೆ.

Array

ಅವಿಸ್ಮರಣೀಯ ಘಳಿಗೆ

ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಟೇಲ್ ಅವರ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಗಿದ್ದು, ಈ ಅವಿಸ್ಮರಣೀಯ ಘಳಿಗೆಗೆ ನೂರಾರು ಗಣ್ಯರು ಸಾಕ್ಷಿಯಾದರು. ಈ ದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಇಡೀ ದೇಶದಾದ್ಯಂತ ಆಚರಿಸಲಾಗುತ್ತಿದೆ.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ... ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

Array

ಗಿರ್ ಅರಣ್ಯಕ್ಕೂ ವೀಸಾ ಬೇಕಾಗುತ್ತಿತ್ತು!

ಸರ್ದಾರ್ ಪಟೇಲ್ ಅವರು ಅಂದು ಭಾರತದ ವಿವಿಧ ಪ್ರಾಂತಗಳನ್ನು ಒಗ್ಗೂಡಿಸುವ ಕ್ರಾಂತಿಕಾರಿ ತೀರ್ಮಾನ ಕೈಗೊಳ್ಳದೆ ಇದ್ದಿದ್ದರೆ, ಇಂದು ಗಿರ್ ಅರಣ್ಯದಲ್ಲಿ ಸಿಂಹಗಳನ್ನು ನೋಡುವುದಕ್ಕೂ, ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಮಾಡುವುದಕ್ಕೂ, ಹೈದರಾಬಾದಿನ ಚಾರ್ ಮಿನಾರ್ ಗೆ ತೆರಳುವುದಕ್ಕೂ ನಮಗೆ ವೀಸಾ ಬೇಕಾಗುತ್ತಿತ್ತು ಎಂಬ ನರೇಂದ್ರ ಮೋದಿಯವರ ಮಾತು ಸತ್ಯವೂ ಹೌದು.

'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

Array

ಸರ್ದಾರ್ ಪಟೇಲ್ ಅವರ ಬಗ್ಗೆ

ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದವರು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾದ ಅವರು, ಸ್ವಾತಂತ್ರ್ಯಾನಂತರ ಭಾರತದ ಮೊದಲ ಗೃಹಮಂತ್ರಿಯೂ ಆಗಿದ್ದರು.

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್ ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

English summary
Prime Minister Narendra Modi inaugurates Sardar Vallabhbhai Patel's statue of unity in Gujarat's Ahmedabad. Here are some videos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X