ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಡೋದರಾ: ಫುಡ್ ಸ್ಟಾಲ್‌ಗಳಲ್ಲಿ ಮಾಂಸಾಹಾರಿ ಆಹಾರ ಗೋಚರಿಸದಂತೆ ಸೂಚನೆ

|
Google Oneindia Kannada News

ವಡೋದರ (ಗುಜರಾತ್) ನವೆಂಬರ್ 12: ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಿ ಆಹಾರವನ್ನು ಮುಕ್ತವಾಗಿ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ದಂಡ ವಿಧಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ವರದಿಯಾಗಿದೆ. ವಿಶೇಷವಾಗಿ ಮೀನು, ಮಾಂಸ ಮತ್ತು ಮೊಟ್ಟೆಗಳಂತಹ ಮಾಂಸಾಹಾರಿ ಆಹಾರವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಆದೇಶವನ್ನು ವಡೋದರಾ ಮುನ್ಸಿಪಲ್ ಕಾರ್ಪೋರೇಶನ್ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹಿತೇಂದ್ರ ಪಟೇಲ್ ಅವರು ಹೊರಡಿಸಿದ್ದಾರೆ. "ಮಾಂಸಾಹಾರಿ ಆಹಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಮಾಂಸಾಹಾರಿ ಆಹಾರವನ್ನು ಪೂರ್ಣ ಪ್ರದರ್ಶನದಲ್ಲಿ ಮಾರಾಟ ಮಾಡುವುದು ವರ್ಷಗಳಿಂದ ಅಭ್ಯಾಸವಾಗಿರಬಹುದು. ಆದರೆ ಅದನ್ನು ಸರಿಪಡಿಸುವ ಸಮಯ ಬಂದಿದೆ" ಎಂದು ಪಟೇಲ್ ಹೇಳಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ, ಆಹಾರ ಮಳಿಗೆಗಳು ಮಾಂಸಾಹಾರಿ ಆಹಾರವನ್ನು ಗೋಚರಿಸುವಂತೆ ಮಾರಾಟ ಮಾಡದಂತೆ ನೋಡಿಕೊಳ್ಳಲು ವಡೋದರಾದ ನಾಗರಿಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಅಂತಹ ಸ್ಟಾಲ್‌ಗಳು ಮತ್ತು ಗಾಡಿಗಳು ಮಾಂಸವನ್ನು ಸೂಕ್ತವಾಗಿ 'ಮುಚ್ಚಿ'ರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮೊಟ್ಟೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಗಾಡಿಗಳಿಗೂ ಈ ನಿರ್ದೇಶನ ಅನ್ವಯವಾಗಲಿದೆ. ಗುಜರಾತ್ ರಾಜ್‌ಕೋಟ್‌ನ ವಡೋದರಾದಲ್ಲಿ ಮೇಯರ್‌, ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಸ್ಟಾಲ್‌ಗಳನ್ನು ಗೊತ್ತುಪಡಿಸಿದ ಕೆಲ ವಲಯಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಮುಖ್ಯ ರಸ್ತೆಗಳಿಂದ ದೂರವಿಡಬೇಕು ಎಂದು ಸೂಚನೆಗಳನ್ನು ನೀಡಿದ್ದಾರೆ.

15 ರೊಳಗೆ ನಗರದ ಬೀದಿ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟವಾಗುತ್ತಿರುವ ಎಲ್ಲಾ ಮಾಂಸಾಹಾರಿ ಆಹಾರವನ್ನು "ಸಾರ್ವಜನಿಕ ಪ್ರದರ್ಶನ" ದಿಂದ ತೆಗೆದುಹಾಕುವಂತೆ ವಡೋದರಾ ಮುನ್ಸಿಪಲ್ ಕಾರ್ಪೊರೇಶನ್ (ವಿಎಂಸಿ) ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಗುರುವಾರ ಕಾರ್ಯನಿರ್ವಾಹಕ ವಿಭಾಗಕ್ಕೆ "ಮೌಖಿಕ ಸೂಚನೆ" ನೀಡಿದ್ದಾರೆ. ಜೊತೆಗೆ ಇದು "ಧಾರ್ಮಿಕ ಭಾವನೆಗಳ" ವಿಷಯವಾಗಿದೆ ಎಂದಿದ್ದಾರೆ. ಗುರುವಾರದಂದು ಪೌರಕಾರ್ಮಿಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟೇಲ್ ಅವರು,"ಮೀನು, ಮಾಂಸ, ಕೋಳಿ, ಮೊಟ್ಟೆ ಸೇರಿದಂತೆ ಮಾಂಸಾಹಾರ ಮಾರಾಟ ಮಾಡುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾಂಸಾಹಾರ ಹೊಂದಿರುವ ಯಾವುದೇ ರೆಸ್ಟೋರೆಂಟ್‌ಗಳಿಗೆ ಸಾರ್ವಜನಿಕ ಪ್ರದರ್ಶನದಿಂದ ಆಹಾರಗಳನ್ನು ಇಡದಂತೆ ಸೂಚಿಸಲು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್, "ಎಲ್ಲಾ ಆಹಾರ ಮಳಿಗೆಗಳು, ವಿಶೇಷವಾಗಿ ಮೀನು, ಮಾಂಸ ಮತ್ತು ಮೊಟ್ಟೆಗಳಂತಹ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವವರು, ನೈರ್ಮಲ್ಯದ ಕಾರಣಗಳಿಗಾಗಿ ಆಹಾರವನ್ನು ಚೆನ್ನಾಗಿ ಮುಚ್ಚಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಬಹಿರಂಗವಾಗಿಟ್ಟು ಮಾರಾಟ ಮಾಡುವ ಮಳಿಗೆಗಳನ್ನು ತೆಗೆದುಹಾಕಬೇಕು ಎಂದು ನಾನು ಸೂಚನೆ ನೀಡಿದ್ದೇನೆ" ಎಂದರು.

Vadodara: Order not to appear in carnivorous food In food stalls

ಆಹಾರ ಪದಾರ್ಥಗಳನ್ನು ಪ್ರದರ್ಶಿಸಲು ಮಾರಾಟಗಾರರಿಗೆ ಪಾರದರ್ಶಕ ಹೊದಿಕೆಯನ್ನು ಬಳಸಲು ಅನುಮತಿಸಲಾಗಿದೆಯೇ ಎಂದು ಕೇಳಿದಾಗ, ಪಟೇಲ್ ಅವರು, "ಯಾವುದೇ ಮಾಂಸಾಹಾರಿ ಆಹಾರವು ಮಳಿಗೆಯಿಂದ ಹಾದುಹೋಗುವ ಯಾರಿಗೂ ಗೋಚರಿಸುವಂತಿಲ್ಲ. ಯಾಕೆಂದರೆ ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದೆ. ಮಾಂಸಾಹಾರಿ ಆಹಾರವನ್ನು ಪೂರ್ಣ ಪ್ರದರ್ಶನದಲ್ಲಿ ಮಾರಾಟ ಮಾಡುವ ಅಭ್ಯಾಸವು ವರ್ಷಗಳಿಂದಲೂ ಇದೆ. ಆದರೆ ಅದನ್ನು ಸರಿಪಡಿಸುವ ಸಮಯ ಬಂದಿದೆ. ಮಾಂಸಾಹಾರವನ್ನು ನೋಡಬಾರದು. ಈ ಸೂಚನೆಯು ಹಸಿ ಮಾಂಸ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಗಳಿಗೂ ಅನ್ವಯಿಸುತ್ತದೆ" ಎಂದಿದ್ದಾರೆ. ಮಾರಾಟಗಾರರು 15 ದಿನಗಳಲ್ಲಿ ಸೂಚನೆಗಳನ್ನು ಅನುಸರಿಸಬೇಕು. ಇಲ್ಲವಾದಲ್ಲಿ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು VMC ಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪಟೇಲ್ ಹೇಳಿದರು. ಆದಾಗ್ಯೂ, ನಗರಪಾಲಿಕೆ ಆಯುಕ್ತೆ ಶಾಲಿನಿ ಅಗರ್ವಾಲ್ ಮತ್ತು ನಗರದ ಆಡಳಿತ ವಾರ್ಡ್‌ಗಳ ಅಧಿಕಾರಿಗಳು ಈ ನಿರ್ಧಾರದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಗರ್ವಾಲ್ ಅವರು ಈ ಕುರಿತು ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Vadodara: Order not to appear in carnivorous food In food stalls

ಮಾಂಸಾಹಾರಿ ಬೀದಿ ಆಹಾರಕ್ಕಾಗಿ ಪ್ರಸಿದ್ಧವಾಗಿರುವ ವಾರ್ಡ್‌ನ ಅಧಿಕಾರಿಯೊಬ್ಬರು ಮೇಯರ್ ಸೂಚನೆಯು ಅಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. "ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಗೆ ಕರೆದಿದ್ದ ಕೆಲವು ವಿಎಂಸಿ ಅಧಿಕಾರಿಗಳಿಂದ ನಾವು ಈ ನಿರ್ಧಾರದ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಕಾರ್ಯಾಚರಣೆಯ ವಿಧಾನ ಮತ್ತು ದಂಡದ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲದಿರುವುದರಿಂದ ಸ್ಪಷ್ಟವಾಗಿಲ್ಲ. ಈ ಸಮಯದಲ್ಲಿ, ಎಲ್ಲಾ ಮಾಂಸಾಹಾರಿ ಆಹಾರವನ್ನು ಪ್ರದರ್ಶನದಿಂದ ತೆಗೆದುಹಾಕಲು ಮಾರಾಟಗಾರರಿಗೆ ಹೇಳಲು ಮಾತ್ರ ನಮಗೆ ಸೂಚನೆ ನೀಡಲಾಗಿದೆ.ಇದು ಅಸಾಧ್ಯವಾಗಿದೆ ಏಕೆಂದರೆ ಗ್ರಾಹಕರು ಸ್ಟಾಲ್‌ಗಳಿಗೆ ಬಂದು ಸಾರ್ವಜನಿಕವಾಗಿ ತಿನ್ನುವಾಗ, ಆಹಾರವು ಅಂತಿಮವಾಗಿ ಗೋಚರಿಸುತ್ತದೆ ಎಂದಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಗರ ಘಟಕದ ಮುಖಂಡರು ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮೊಂದಿಗೆ ಸಮಾಲೋಚಿಸಲಿಲ್ಲ ಎಂದು ಹೇಳಿದ್ದಾರೆ. ಈ ನಿರ್ಧಾರದ ಬಗ್ಗೆ ಅಧ್ಯಕ್ಷರನ್ನು ಹೊರತುಪಡಿಸಿ ಸ್ಥಾಯಿ ಸಮಿತಿಯಲ್ಲಿ ಯಾರಿಗೂ ತಿಳಿದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ನಾಯಕರೊಬ್ಬರು ಹೇಳಿದರು.

ನವೆಂಬರ್ 9 ರಂದು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್ (RMC) ಮೊಟ್ಟೆ ಮತ್ತು ಇತರ ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಕೈಗಾಡಿಗಳು ಮತ್ತು ಕ್ಯಾಬಿನ್‌ಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು. ಇದರ ಭಾಗವಾಗಿ ನಾಗರಿಕ ಅಧಿಕಾರಿಗಳು ಫುಲ್‌ಚಾಬ್ ಚೌಕ್, ಲಿಂಬ್ಡಾ ಚೌಕ್ ಮತ್ತು ಶಾಸ್ತ್ರಿ ಮೈದಾನದಲ್ಲಿನ ಮಳಿಗೆಗಳನ್ನು ತೆಗೆದುಹಾಕಿದರು. "ಮುಖ್ಯ ರಸ್ತೆಗಳಿಂದ ಅತಿಕ್ರಮಣಗಳನ್ನು ತೆಗೆದುಹಾಕಲು ಚಾಲನೆ ನೀಡಲಾಗಿದೆ. ನಾವು ಮುಖ್ಯ ರಸ್ತೆಗಳು ಮತ್ತು ಚೌಕಗಳಿಂದ ಅತಿಕ್ರಮಣ ಮಾಡಿಕೊಂಡ ಅಂಗಡಿಗಳನ್ನು ತೆಗೆದುಹಾಕುತ್ತಿದ್ದೇವೆ. ಇವು ವಾಹನ ಸಂಚಾರಕ್ಕೆ ಅಡಚಣೆಯನ್ನು ಉಂಟುಮಾಡುತ್ತವೆ. ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಅಂಗಡಿಗಳು ಹಿಂದೂ ಧರ್ಮವನ್ನು ಅನುಸರಿಸುವವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ. ಅವರು ತಮ್ಮ ವ್ಯವಹಾರವನ್ನು ಸರಿಯಾದ ಸ್ಥಳದಲ್ಲಿ ಸಾರ್ವಜನಿಕ ಪ್ರದರ್ಶನವಿಲ್ಲದೇ ಮಾಡಬಹುದು. ಇದು ಮುಖ್ಯ ರಸ್ತೆಗಳಲ್ಲಿನ ವಸತಿ ಪ್ರದೇಶಗಳಲ್ಲಿ ಇರುವಂತಿಲ್ಲ. ನಗರದ ರಸ್ತೆಗಳಿಂದ ಇಂತಹ ಎಲ್ಲ ಜಾಯಿಂಟ್‌ಗಳನ್ನು ತೆಗೆಯುವವರೆಗೆ ಈ ಅಭಿಯಾನ ಮುಂದುವರಿಯಲಿದೆ" ಎಂದು ರಾಜ್‌ಕೋಟ್ ಮೇಯರ್ ಪ್ರದೀಪ್ ದಾವ್ ತಿಳಿಸಿದರು.

English summary
Gujarat’s Vadodara is reportedly set to launch a drive to penalise street hawkers who sell non-vegetarian food ‘openly’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X