ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ಆಡ್ಡ ಮತ ಹಾಕಿ, ಗುಜರಾತ್ ನ ಇಬ್ಬರು ಶಾಸಕರು ರಾಜೀನಾಮೆ

By ಅನಿಲ್ ಆಚಾರ್
|
Google Oneindia Kannada News

ಅಹಮದಾಬಾದ್ (ಗುಜರಾತ್), ಜುಲೈ 5: ರಾಜ್ಯ ಸಭೆಯ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಗುಜರಾತ್ ನ ಕಾಂಗ್ರೆಸ್ ಶಾಸಕರಾದ ಅಲ್ಪೇಶ್ ಠಾಕೂರ್ ಹಾಗೂ ಧಾವಲ್ ಸಿನ್ಹಾ ಶುಕ್ರವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರಿಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್ ವೀಕ್ಷಕರು ನನ್ನ ಮತ ಚಲಾವಣೆಗೆ ತಕರಾರು ಮಾಡಿದರು. ನಿಮಗೆ ಗೊತ್ತಾಗಿರಬಹುದು, ನಾನು ಯಾರಿಗೆ ಮತ ಹಾಕಿದೆ ಎಂಬ ಸಂಗತಿ ಎಂದು ಅಲ್ಪೇಶ್ ಠಾಕೂರ್ ಮಾಧ್ಯಮಗಳ ಎದುರು ಹೇಳಿದ್ದಾರೆ. ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉತ್ತರ ಗುಜರಾತ್ ನ ರಾಧನಪುರ್ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್ ಗುಜರಾತಿನಿಂದ ರಾಜ್ಯಸಭೆಗೆವಿದೇಶಾಂಗ ಸಚಿವ ಜೈಶಂಕರ್ ಗುಜರಾತಿನಿಂದ ರಾಜ್ಯಸಭೆಗೆ

ಠಾಕೂರ್ ಅವರ ಆಪ್ತ ಹಾಗೂ ಶಾಸಕ ಧಾವಲ್ ಝಲ ಕೂಡ ಅಡ್ಡ ಮತ ಹಾಕಿ, ಆ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಇಬ್ಬರೂ ಬಿಜೆಪಿ ಸೇರುವ ಸಾಧ್ಯತೆ ಇದೆ ಮತ್ತು ಅವರು ಈಗಾಗಲೇ ಸ್ಪರ್ಧಿಸಿದ್ದ ಅವೇ ವಿಧಾನಸಭಾ ಕ್ಷೇತ್ರಗಳಿಂದ ಮತ್ತೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

Two Congress MLAs of Gujarat resigned, after cross voting in Rajya Sabha by polls

ಬಿಜೆಪಿಯ ಅಮಿತ್ ಶಾ, ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ತೆರವಾದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು. ಅವರಿಬ್ಬರು ಲೋಕಸಭೆ ಚುನಾವಣೆಯಲ್ಲಿ ಜಯಿಸಿದ್ದರು.

English summary
Alpesh Thakur, Dhaval Sinha Congress MLA's of Gujarat resigned on Friday, after cross voting to BJP in Rajya Sabha by polls. They likely to join BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X